Raghav Chadha Replaced 
ದೇಶ

ಎಎಪಿಯಿಂದ ರಾಘವ್ ಚಡ್ಡಾಗೆ ಬಿಗ್ ಶಾಕ್; ರಾಜ್ಯಸಭೆ ಡೆಪ್ಯೂಟಿ ನಾಯಕ ಸ್ಥಾನದಿಂದ ವಜಾ, ಕಾರಣ ಏನು?..Raghav Chadha

ಪ್ರಮುಖ ಮುಖ್ಯಾಂಶಗಳು

  • 2023ರಿಂದ ರಾಜ್ಯಸಭೆಯಲ್ಲಿ ಎಎಪಿ ಉಪ ನಾಯಕನಾಗಿದ್ದ ರಾಘವ್ ಚಡ್ಡಾ
  • ಸಂಸದ ಅಶೋಕ್ ಮಿತ್ತಲ್ ನೂತನ ಉಪ ನಾಯಕನಾಗಿ ನೇಮಿಸಿಕೊಂಡ ಎಎಪಿ
  • ಪಕ್ಷದ ಪ್ರಮುಖ ಬೆಳವಣಿಗೆಗಳ ಬಗ್ಗೆ ಚಡ್ಡಾ ಮೌನ ವಹಿಸಿದ್ದೇ ಮಹತ್ವದ ನಿರ್ಧಾರಕ್ಕೆ ಕಾರಣವೇ?
ನವದೆಹಲಿ: ಪಂಜಾಬ್‌ನ ಯುವ ಸಂಸದ ರಾಘವ್ ಚಡ್ಡಾರಿಗೆ ಎಎಪಿ ಶಾಕಿಂಗ್​ ನ್ಯೂಸ್​ ಕೊಟ್ಟಿದೆ. ರಾಜ್ಯಸಭೆಯ ಉಪ ನಾಯಕನ ಸ್ಥಾನದಿಂದ ಅವರನ್ನು ಕೆಳಗಿಳಿಸಿ, ನೂತನ ನಾಯಕನಾಗಿ ಪಂಜಾಬ್‌ನ ಮತ್ತೊಬ್ಬ ಸಂಸದ ಅಶೋಕ್ ಮಿತ್ತಲ್ ನೇಮಕ ಮಾಡಲಾಗಿದೆ.
ರಾಘವ್​ ಚಡ್ಡಾ ಅವರು, ನಾನಾ ವಿಚಾರಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಸದಾ ಆಕ್ಟಿವ್​ ಆಗಿರುತ್ತಾರೆ. ಗಿಗ್​ ಕಾರ್ಮಿಕರು ಹಾಗೂ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವವರ ಬಗ್ಗೆ, ಅಲ್ಲಿ ಕೈಗೆಟುಕುವ ದರಕ್ಕೆ ಏನೆಲ್ಲ ಸಿಗುತ್ತದೆ ಎನ್ನುವುದನ್ನು ಪ್ರಸ್ತಾಪಿಸಿ ವೈರಲ್​ ಆಗಿದ್ದರು. ಈ ಮಧ್ಯೆ ಪಕ್ಷದ ಇಂತಹ ನಡೆ ಸದ್ಯ ಹಲವರಲ್ಲಿ ಕುತೂಹಲ ಕೆರಳಿಸುವಂತೆ ಮಾಡಿದೆ.

ರಾಘವ್​ ಚಡ್ಡಾ ವಜಾ

ಹೌದು, Aam Aadmi Party (ಎಎಪಿ) ತನ್ನ ಸಂಸದೀಯ ನಾಯಕತ್ವದಲ್ಲಿ ಬದಲಾವಣೆ ಮಾಡಿದ್ದು, ಪಂಜಾಬ್​ನ ಯುವ ಸಂಸದ ರಾಘವ್​ ಚಡ್ಡಾರನ್ನು ಉಪನಾಯಕನ ಸ್ಥಾನದಿಂದ ಕೆಳಗಿಳಿಸಿದೆ. ಇನ್ನು ಅವರ ಸ್ಥಾನಕ್ಕೆ ಸಂಸದ ಅಶೋಕ್ ಮಿತ್ತಲ್ ಅವರನ್ನು ನೂತನವಾಗಿ ನೇಮಕ ಮಾಡಿಕೊಂಡಿದೆ. ಈ ಬಗ್ಗೆ ರಾಜ್ಯಸಭಾ ಕಾರ್ಯದರ್ಶಿಗೆ ಪತ್ರ ಬರೆದಿದೆ ಎನ್ನಲಾಗಿದೆ.

ಸಂಸತ್​ನಲ್ಲಿ ಮಾತನಾಡಲು ಕೊಕ್​

ಉಪನಾಯಕನ ಸ್ಥಾನದಿಂದ ಅವರನ್ನು ವಜಾಗೊಳಿಸಿದ್ದಲ್ಲದೆ, ಸಂಸತ್​ನಲ್ಲಿ ಅವರು ಹೆಚ್ಚು ಮಾತನಾಡಲು ಅವಕಾಶ ನೀಡದಿರಲು ಎಎಪಿ ರಾಜ್ಯಸಭಾ ಕಾರ್ಯದರ್ಶಿಗೆ ಪತ್ರ ಬರೆದಿದೆ ಎನ್ನಲಾಗಿದೆ. ಪಿತೃತ್ವ ರಜೆಯ ಬಗ್ಗೆ ಮಾತನಾಡಿ ಎಲ್ಲರ ಗಮನ ಸೆಳೆದಿದ್ದ ಈ ಸಂದರ್ಭದಲ್ಲೇ ಪಕ್ಷ ಈ ನಿರ್ಧಾರ ಮಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಂತಾಗಿದೆ.

ಈ ಬೆಳವಣಿಗೆಗೆ ಕಾರಣ ಏನು?

ಇತ್ತೀಚೆಗೆ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಸಿಎಂ ಅರವಿಂದ್​ ಕೇಜ್ರಿವಾಲ್​ ಮತ್ತು ಮನೀಶ್​ ಸಿಸೋಡಿಯಾ ಅವರಿಗೆ ಕ್ಲೀನ್​ ಚಿಟ್​​ ಸಿಕ್ಕಿತ್ತು. ಈ ಸಂದರ್ಭದಲ್ಲಿ ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಪಕ್ಷದ ಪ್ರಮುಖ ಕಾರ್ಯಕ್ರಮದಲ್ಲಿ, ಕೇಜ್ರಿವಾಲ್​ರ ಸುದ್ದಿಗೋಷ್ಠಿಗಳಿಂದ ಅವರು ದೂರ ಉಳಿದಿದ್ದರು. ಇದು ಪಕ್ಷದೊಳಗೆ ಸಾಕಷ್ಟು ಅಸಮಾಧಾನವನ್ನು ಸೃಷ್ಟಿಸಿತ್ತು.
ಚಾರ್ಟೆಡ್​ ಅಕೌಂಟೆಂಟ್​ ಆಗಿರುವ ರಾಘವ್​ ಚಡ್ಡಾ ಅವರು 2012ರಿಂದ ಎಎಪಿಯಲ್ಲಿದ್ದಾರೆ. ಅರವಿಂದ್​ ಕೇಜ್ರಿವಾಲ್​ ಇವರಿಗೆ ಆಪ್ತರು ಪರಿಗಣಿಸಲಾಗಿದೆ.ಎಎಪಿಯ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದಾರೆ.2023ರಿಂದ ಎಎಪಿಯ ರಾಜ್ಯಸಭಾ ಉಪನಾಯಕನಾಗಿ ಅವರು ಸೇವೆಯಲ್ಲಿದ್ದರು, (ಏಜೆನ್ಸೀಸ್)