ಚಡ್ಡಾ ಬಿಜೆಪಿ ಸೇರಲು ಪ್ರಿಯಾಂಕಾ ಚೋಪ್ರಾ ಕಾರಣ
- ಆಮ್ ಆದ್ಮಿ ಪಕ್ಷ ಬಿಟ್ಟ ರಾಘವ್ ಚಡ್ಡಾ
- ಚಡ್ಡಾ ಬಿಜೆಪಿ ಸೇರಲು ಪ್ರಿಯಾಂಕಾ ಚೋಪ್ರಾ ಕಾರಣ
- ಸ್ಪೋಟಕ ಹೇಳಿಕೆ ನೀಡಿದ ನವಜೋತ್ ಕೌರ್ ಸಿಧು
ಪಂಜಾಬ್: ಕೆಲ ದಿನಗಳ ಹಿಂದೆ ಆಮ್ ಆದ್ಮಿ ಪಕ್ಷ (AAP) ದ ರಾಜ್ಯ ಸಭೆಯ ಉಪನಾಯಕ ಸ್ಥಾನದಿಂದ ಕೆಳಗಿಳಿದಿದ್ದ ಸಂಸದ ರಾಘವ್ ಚಡ್ಡಾ ಇದೀಗ ಭಾರತೀಯ ಜನತಾ ಪಕ್ಷ (BJP) ವನ್ನು ಸೇರಿದ್ದಾರೆ. ಇವರ ಜೊತೆಗೆ ಆಮ್ ಆದ್ಮಿ ಪಕ್ಷದ ಇತರ 6 ಜನ ಸಂಸದರು ಬಿಜೆಪಿಯನ್ನು ಸೇರಿದ್ದಾರೆ.
ರಾಘವ್ ಬಿಜೆಪಿ ಸೇರಲು ಪ್ರಿಯಾಂಕಾ ಕಾರಣ
ರಾಘವ್ ಚಡ್ಡಾ ಬಿಜೆಪಿಗೆ ಬೆಂಬಲ ಸೂಚಿಸಲು ಬಾಲಿವುಡ್ ನಟಿ ಹಾಗೂ ಚಡ್ಡಾ ಪತ್ನಿ ಪರಿಣಿತಿ ಅಕ್ಕ ಪ್ರಿಯಾಂಕಾ ಚೋಪ್ರಾ ಕಾರಣವೆಂದು ಕಾಂಗ್ರೆಸ್ ಪಕ್ಷದ ನವಜೋತ್ ಕೌರ್ ಸಿಧು (Navjot Kaur on Raghav Chadha) ಹೇಳಿದ್ದಾರೆ.
ರಾಘವ್ ಚಡ್ಡಾ ಕೇಂದ್ರ ಸರ್ಕಾರಕ್ಕೆ ನಿರಂತರವಾಗಿ ಪ್ರಶ್ನಿಸುತ್ತಿದ್ದ ಹಿನ್ನಲೆಯಲ್ಲಿ ಅವರ ಮೇಲೆ ಇಡಿ ಹಾಗೂ ಸಿಬಿಐ ರೈಡ್ ಮಾಡುವ ಪ್ರಯತ್ನ ನಡೆಯುತ್ತಿತ್ತು. ಅಷ್ಟರಲ್ಲಿ ಪ್ರಿಯಾಂಕಾ ಚೋಪ್ರಾ ಹಿರಿಯ ಬಿಜೆಪಿ ನಾಯಕರನ್ನು ಸಂಪರ್ಕಿಸಿ ರಾಘವ್ ಬಿಜೆಪಿಯತ್ತ ಮುಖ ಮಾಡುವಂತೆ ಮಾಡಿದ್ದಾರೆ ಎನ್ನುವುದು ನವಜೋತ್ ಕೌರ್ ಅವರ ಅಭಿಪ್ರಾಯವಾಗಿದೆ.
ರಾಘವ್ ಜೊತೆ ಬಂದ ಸಂಸದರಾರು?
ರಾಘವ್ ಚಡ್ಡಾ, ಇದಾಗಲೇ ಎಎಪಿಯನ್ನು ತೊರೆದು ಬಿಜೆಪಿ ಸೇರಿದ್ದರೆ, ಇವರಿಗೆ ಬೆಂಬಲ ಎಂಬಂತೆ ಸ್ವಾತಿ ಮಹಿವಾಲ್ (ದೆಹಲಿ), ಹರ್ಭಜನ್ ಸಿಂಗ್ (ಪಂಜಾಬ್), ಸಂದೀಪ್ ಪಾಠಕ್ (ಪಂಜಾಬ್), ಅಶೋಕ್ ಮಿತ್ತಲ್ (ಪಂಜಾಬ್), ರಜೀಂದರ್ ಗುಪ್ತಾ (ಪಂಜಾಬ್) ಮತ್ತು ವಿಕ್ರಮ್ ಸಹಾನಿ (ಪಂಜಾಬ್) ಇವರುಗಳು ಸ್ವಪಕ್ಷವನ್ನು ತೊರೆದು, ಬಿಜೆಪಿ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ ಆಮ್ ಆದ್ಮಿ ಪಕ್ಷದಲ್ಲಿ 10 ಜನ ಸಂಸದರಿದ್ದು, ಅದರಲ್ಲಿ ರಾಘವ್ ಚಡ್ಡಾರನ್ನು ಸೇರಿಸಿ 7 ಜನ ಸಂಸದರು ಬಿಜೆಪಿ ಸೇರಲಿದ್ದಾರೆ. ಈ ಮೂಲಕ ರಾಜ್ಯಸಭೆಯಲ್ಲಿದ್ದ ಎಎಪಿ ಸಂಸದರಲ್ಲಿ 2/3 ಸಂಸದರು ಬಿಜೆಪಿ ಪಾಲಾಗರಿದ್ದಾರೆ.
ಪಕ್ಷ ಬಿಡಲು ಇದೇ ಕಾರಣ
ಕಳೆದ ಮೂರು ದಿನಗಳಿಂದ ದೇಶದಾದ್ಯಂತ ನಾನು ಪಕ್ಷ ಬಿಟ್ಟಿರುವುದೇ ಚರ್ಚೆಯಾಗುತ್ತಿರುವ ಕಾರಣ ಈ ವಿಡಿಯೋವನ್ನು ನಾನು ಹಂಚಿಕೊಳ್ಳುತ್ತಿದ್ದೆನೆ. ಆಮ್ ಅದ್ಮಿ ಪಕ್ಷ ಈಗ ಮೊದಲಿನಂತಿಲ್ಲ, ಸರಿಯಾದ ವ್ಯಕ್ತಿ ತಪ್ಪಾದ ಪಕ್ಷದಲ್ಲಿದಿರಿ ಎಂದು ನನಗೆ ಹಲವಾರು ಜನ ಹೇಳುತ್ತಿದ್ದರು, ಅದ ನನಗೆ ಈಗ ಅರಿವಾಗಿದೆ.
ಆಮ್ ಆದ್ಮಿ ಪಕ್ಷ ಕಟ್ಟುವಾಗ ಕೇಜ್ರಿವಾಲ್ ಜೊತೆ ಇದ್ದ ಕೆಲವರಲ್ಲಿ ನಾನು ಒಬ್ಬ. ನಾನು ಈ ಪಕ್ಷದ ಸಂಘಟನೆಗಾಗಿ 15 ವರ್ಷ ನಿಡಿದ್ದೆನೆ. ನಾನು ನನ್ನ ಯೌವನದ 15 ವರ್ಷಗಳಲ್ಲಿ ಈ ಪಕ್ಷಕ್ಕಾಗಿ ಎಷ್ಟು ಶ್ರಮ, ಬೆವರು, ರಕ್ತ ಸುರಿಸಿದ್ದೆನೆಂದು ಪಕ್ಷದ ಹಿರಿಯರಿಗೆ ತಿಳಿದಿದೆ ಎಂದಿದ್ದಾರೆ,(ಏಜನ್ಸೀಸ್).