RAF assistant commandant Sonia Sehrawat On CJP 
ದೇಶ

'ತಮ್ಮನ್ನು ತಿದ್ದಿಕೊಳ್ಳದವರು ದೇಶ ತಿದ್ದಲು ಹೊರಟಿದ್ದಾರೆ': ಜಿರಳೆ ಸತ್ತ ಫೋಟೋ ಪೋಸ್ಟ್ ಮಾಡಿ RAF ಅಧಿಕಾರಿ ಟೀಕೆ, CJP ಕಿಡಿ..RAF Sonia Sehrawat

ಪ್ರಮುಖ ಮುಖ್ಯಾಂಶಗಳು

  • 'ತಮ್ಮನ್ನು ತಿದ್ದಿಕೊಳ್ಳದವರು ದೇಶ ತಿದ್ದಲು ಹೊರಟಿದ್ದಾರೆ': ಜಿರಳೆ ಸತ್ತ ಫೋಟೋ ಪೋಸ್ಟ್ ಮಾಡಿ RAF ಅಧಿಕಾರಿ ಟೀಕೆ
  • ಸೋಶಿಯಲ್​ ಮೀಡಿಯಾದಲ್ಲಿ ಆರ್​ಎಎಫ್​ ಅಧಿಕಾರಿ ವಿರುದ್ಧ ಹೆಚ್ಚಿದ ವಾಗ್ದಾಳಿ
  • ಶಾಂತಿಯುತವಾಗಿ ಪ್ರತಿಭಟನೆ ಮಾಡುವವರನ್ನು ಜಿರಳೆ ಎನ್ನುತ್ತೀರಿ, ಜಿರಳೆ ಎಂದು ಸಾಯಲ್ಲ ಎಂದ ಸಿಜೆಪಿ
ನವದೆಹಲಿ: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಸಂಸತ್ ಚಲೋ ನಡೆಸಿದ ಮರುದಿನ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆಯ ಕಾವು  ಜೋರಾಗಿದೆ. ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಹಲ್ಲೆಯನ್ನು ಖಂಡಿಸಿ ಬುಧವಾರವೂ ಇಂಡಿಯಾ ಒಕ್ಕೂಟ ಪ್ರತಿಭಟನೆ ನಡೆಸಿತು. ಸೋಶಿಯಲ್​ ಮೀಡಿಯಾದಲ್ಲಿ ಪೊಲೀಸರ ನಡೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.  ಈ ಮಧ್ಯೆ ಚರ್ಚೆಗೆ ಮುನ್ನೆಲೆಗೆ ಬಂದಿರುವ ವಿಚಾರ ಎಂದರೆ,  ರ‍್ಯಾಪಿಡ್ ಆಕ್ಷನ್ ಫೋರ್ಸ್ (RAF) ನ ಸಹಾಯಕ ಕಮಾಂಡೆಂಟ್ ಸೋನಿಯಾ ಸೆಹ್ರಾವತ್ ಅವರ ಇನ್‌ಸ್ಟಾ ಸ್ಟೋರಿ..
ಹೌದು, ಜುಲೈ 20 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ  ಸಿಜೆಪಿ ಪ್ರತಿಭಟನೆಯ ಸಂದರ್ಭದಲ್ಲಿ ಭದ್ರತಾ ಕರ್ತವ್ಯ ನಿರ್ವಹಿಸುತ್ತಿದ್ದಾಗ RAF ನ ಸಹಾಯಕ ಕಮಾಂಡೆಂಟ್ ಸೋನಿಯಾ ಸೆಹ್ರಾವತ್  ಗಾಯಗೊಂಡಿದ್ದರು.  ಪ್ರತಿಭಟನಾಕಾರರ ಗುಂಪಿನಲ್ಲಿ ಸಿಲುಕಿದ್ದ ಮಹಿಳೆಯರನ್ನು ರಕ್ಷಿಸಲು ಯತ್ನಿಸುವಾಗ ಅವರ ಕೈಗೆ ಗಂಭೀರವಾದ ಗಾಯವಾಗಿತ್ತು ಎನ್ನಲಾಗಿದೆ.  ಈ ಮಧ್ಯೆ ಅವರು ತಮ್ಮ ಆಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ತಮ್ಮನ್ನು ತಾವು ತಿದ್ದುಕೊಳ್ಳಲು ಆಗದವರು, ದೇಶವನ್ನು ತಿದ್ದಲು ಹೊರಟಿದ್ದಾರೆ! ಎಂದು ಬರೆದುಕೊಂಡಿರುವುದು ವ್ಯಾಪಕ ಆರಕ್ರೋಶಕ್ಕೆ ಕಾರಣವಾಗಿದೆ.

ಸೋನಿಯಾ ಸೆಹ್ರಾವತ್  ಇನ್‌ಸ್ಟಾಸ್ಟೋರಿಯಲ್ಲಿ ಏನಿದೆ?

ತಮ್ಮನ್ನು ತಾವು ತಿದ್ದುಕೊಳ್ಳಲು ಆಗದವರು, ದೇಶವನ್ನು ತಿದ್ದಲು ಹೊರಟಿದ್ದಾರೆ!. ಎಂದು ಜಿರಳೆ ಸತ್ತು ಬಿದ್ದಿರುವ ಫೋಟೋಗೆ ಶೀರ್ಷಿಕೆ ಕೊಟ್ಟಿದ್ದಾರೆ. ಇದನ್ನು ಎಕ್ಸ್​​ನಲ್ಲಿ ಉಲ್ಲೇಖಿಸಿರುವ ಕಾಕ್ರೋಚ್​ ಜನತಾ ಪಾರ್ಟಿ,  ನಿಜಕ್ಕೂ ಈ ಪೋಸ್ಟ್​ ಅಘಾತಕಾರಿಯಾಗಿದೆ. ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿರುವವರನ್ನು  ಜಿರಳೆಗಳಂತೆ ನೋಡುತ್ತಿದ್ದಾರೆ ಈ  ಆರ್‌ಎಎಫ್ ಅಧಿಕಾರಿ. ಜೊತೆಗೆ ಪೊಲೀಸರ ಕ್ರೌರ್ಯವನ್ನು ಸಮರ್ಥಿಸಿಕೊಂಡಿದ್ದಾರೆ.  ಆದರೆ ನೆನಪಿಡಿ ನಾವು ಜಿರಳೆಗಳು ಮತ್ತು ಜಿರಳೆಗಳು ಎಂದಿಗೂ ಸಾಯುವುದಿಲ್ಲ ಎಂದು ಬರೆದುಕೊಂಡಿದೆ.

ಎಂತಹ ನಾಚಿಕೆಯಿಲ್ಲದ ಆತ್ಮ ಇದು. 

ಎಂತಹ ನಾಚಿಕೆಗೇಡಿನ ಜನರು!. ಜನರು ಕೇಳ್ತಾರೆ ಅಮಿತ್ ಶಾ ಏನು ಮಾಡಿದ್ದಾರೆ ಅಂತ, ಅವರು ಸೈನ್ಯದ ಮನಸ್ಸನ್ನು ತಮ್ಮದೇ ಜನರ ವಿರುದ್ಧ ವಿಷಮಯಗೊಳಿಸಿದ್ದಾರೆ. ಮೇಡಂ, ನಿಮ್ಮ ಸಮಯ ಕೂಡ ಹತ್ತಿರ ಬಂದಿದೆ! ಒಂದು ದಿನ ನಿಮ್ಮ ನಿದ್ದೆ ಹಾಳಾಗುತ್ತೆ, ಆಗ ನೀವು ಮಾಡ್ತಿರೋ ಎಲ್ಲಾ ತಪ್ಪುಗಳು ನಿಮಗೆ ಅರ್ಥವಾಗುತ್ತೆ! ನಾಚಿಕೆಯಾಗಬೇಕು ನಿಮಗೆ ಎಂದು ಸಚಿನ್​ ತಿವಾರಿ ಎನ್ನುವವರು ಕಿಡಿಕಾರಿದ್ದಾರೆ.

ನಮಗೆ ರಾಜೀನಾಮೆ ಬೇಕು ಅಷ್ಟೇ

ಒಂದು ದಿನ ಸರ್ಕಾರ ಬದಲಾಗುತ್ತದೆ, ಅವರಿಗೆ ಇದರ ಅರಿವಿಲ್ಲವೇ?. ಯಾವುದೇ ಸಮಸ್ಯೆ ಇಲ್ಲ, ನಾವು ಅವರ ಆಲೋಚನೆಗಳನ್ನು ಸ್ವೀಕರಿಸುತ್ತೇವೆ ಮತ್ತು ಅದನ್ನು ಗೌರವಿಸುತ್ತೇವೆ.ನಮಗೆ ಇರುವುದು ಒಂದೇ ಒಂದು ಬೇಡಿಕೆಧರ್ಮೇಂದ್ರ ಪ್ರಧಾನ್ ರಾಜೀನಾಮೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಧಾರ್ಮಿಕ ಉಗ್ರಗಾಮಿ,ಹೆಚ್ಚು ಧಾರ್ಮಿಕ = ಹೆಚ್ಚು ಸಂಘಿ ಅಂಧ ಭಕ್ತರಿಂದ  ನೀವು ನಿರೀಕ್ಷಿಸುವುದು ಇದನ್ನೇ ಎಂದು ಮತ್ತೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್).