ದೇಶ

ಕೊಂಡಿದ್ದು 7ರೂ.ಲಾಟರಿ, ಸಿಕ್ಕಿದ್ದು ಕೋಟಿ; ಪಂಜಾಬ್​ನ ಬಡ ಕುಟುಂಬದ ಅದೃಷ್ಟ ಬದಲಿಸಿದ ಬಂಪರ್ ಗಿಫ್ಟ್..Punjab

  • ಸಾಮಾನ್ಯ ಬದುಕಿನ ದಿಕ್ಕು ಬದಲಿಸಿದ ಏಳು ರೂಪಾಯಿ ಲಾಟರಿ ಟಿಕೆಟ್​​.

  • 7ರೂಪಾಯಿ ಲಾಟರಿ ಕೊಂಡು, ಕೋಟಿ ಗೆದ್ದು ಪಂಜಾಬ್​ನ ಮಹಿಳೆ.

  • ಮಕ್ಕಳ ಭವಿಷ್ಯಕ್ಕೆ ಹಣ ವ್ಯಯಿಸುವುದಾಗಿ ಹೇಳಿಕೊಂಡ ದಂಪತಿ.

ಕೊಟ್ಕಾಪುರ: ತಿಂಗಳಾಂತ್ಯ ಬದಂರೆ ಸಾಲ ಮಾಡಬೇಕಾದ ಸ್ಥಿತಿ, ಹೋಟೆಲ್​ನಲ್ಲಿ ತಿನ್ನಲೂ ಹಿಂದು ಮುಂದು ನೋಡುವ ಸಾಮಾನ್ಯ ಕುಟುಂಬ...ಏಳು ರೂಪಾಯಿಯಲ್ಲಿಯೂ ಏನಾದ್ರೂ ಕೊಂಡು ಕೊಳ್ಳಬಹುದು ಎನ್ನುವುದನ್ನು ಚಿಂತಿಸುವ ಕುಟುಂಬ.. ಇಂದು ಅದೇ ಹಣದಿಂದ ಕೋಟ್ಯಾಧಿಪತಿಯಾಗುತ್ತಾರೆ ಎಂದರೆ ನಂಬುತ್ತೀರಾ.

ಹೌದು, ಪಂಜಾಬ್​ನ ಮಹಿಳೆಯೊಬ್ಬರು ಏಳು ರೂಪಾಯಿಗೆ ಲಾಟರಿ ಖರೀದಿಸಿದ್ದರ ಫಲವಾಗಿ, ಇಂದು 1 ಕೋಟಿ ರೂಪಾಯಿಯನ್ನು ಗೆದ್ದುಕೊಂಡಿದ್ದಾರೆ. ಪಂಜಾಬ್‌ನ ಫರೀದ್‌ಕೋಟ್ ಜಿಲ್ಲೆಯ ಕೋಟ್ಕಪುರದ ನಿವಾಸಿಯಾದ ಇವರು, ಸಿಕ್ಕಿಂ ಸರ್ಕಾರಿ ಲಾಟರಿಯಲ್ಲಿ ಈ ಬೃಹತ್​ ಬಹುಮಾನ ಗೆದ್ದುಕೊಂಡಿದ್ದಾರೆ.

ದಿಕ್ಕು ಬದಲಿಸಿದ 7ರೂ. ಲಾಟರಿ

ಸ್ಟ್ರಿಂಗ್ ಸಂಬಂಧಿತ ಕೆಲಸ ಮಾಡುವ ಕಾರ್ಮಿಕನ ಪತ್ನಿ ಬಿಮ್ಲಾ ದೇವಿ, ಕೊಟ್ಕಾಪುರದ ರೈಲ್ವೆ ನಿಲ್ದಾಣದ ಬಳಿಯಿರುವ ರಸ್ತೆಗೆ ಕೆಲವು ವಸ್ತುಗಳನ್ನು ಖರೀದಿಸಲು ಹೋಗಿದ್ದರು. ಈ ವೇಳೆ ಲಾಟರಿ ಖರೀದಿಸುವ ಮನಸ್ಸಾಗಿ ಬಂದು ಕೇವಲ 7 ರೂ.ಗೆ ಲಾಟರಿ ಟಿಕೆಟ್ ಖರೀದಿಸಿದರು. ಆಕೆಗೆ ಗೆಲ್ಲುವ ಭಾವನೆ ಇರಲಿಲ್ಲ. ಸಾವಿರಾರು ಜನ ಲಾಟರಿ ಖರೀದಿ ಮಾಡಿರುತ್ತಾರೆ. ಇದ್ರಲ್ಲಿ ನಾನ್ಯಾವ ಲೆಕ್ಕ ಎನ್ನುವುದು ಅವರ ಭಾವನೆಯಾಗಿತ್ತು. ಆದರೆ, ಮರುದಿನ ಸಂಜೆ ಲಾಟರಿ ಫಲಿತಾಂಶ ಪ್ರಕಟವಾದಾಗ, ತನ್ನ ಟಿಕೆಟ್‌ಗೆ 1 ಕೋಟಿ ರೂಪಾಯಿ ಬಹುಮಾನ ಬಂದಿದೆ ಎನ್ನುವುದನ್ನು ಕಂಡು ಕೊಂಡ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ.

ಮಕ್ಕಳಿಗಾಗಿ ಹಣ ವೆಚ್ಚ

ಕೋಟಿ ಗೆದ್ದ ಮಾಹಿತಿ ಪಡೆದುಕೊಂಡ ದಂಪತಿ ಲಾಟರಿ ಅಂಗಡಿಗೆ ಭೇಟಿ ನೀಡುತ್ತಲೇ ಅವರನ್ನು ಮಾಲೀಕ ನರೇಶ್ ಮೋಂಗಾ ಆದರದಿಂದ ಬರಮಾಡಿಕೊಂಡು, ಸಿಹಿ ತಿನ್ನಿಸಿದರು. ಈ ಹಣವನ್ನು ಹೇಗೆ ಬಳಕೆ ಮಾಡುತ್ತೀರಾ ಎಂದು ಕೇಳಿದಾಗ, ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಅವರ ಆರೈಕೆಗಾಗಿ ವ್ಯಯಿಸಲಾಗುತ್ತದೆ. ಆದರೆ, ಇನ್ನೂ ಉಳಿಯುವ ಹಣದಲ್ಲಿ ಏನು ಮಾಡಬೇಕು, ಹೇಗೆ ವ್ಯಯಿಸಬೇಕು ಎನ್ನುವ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಹೇಳಿಕೊಂಡಿದ್ದಾರೆ.

ಲಾಟರಿ ಅಂಗಡಿಯ ಮಾಲೀಕ ನರೇಶ್ ಮೋಂಗಾ ಅವರು ಕಳೆದ ಆರು ತಿಂಗಳಿನಿಂದ ವ್ಯವಹಾರ ನಡೆಸುತ್ತಿದ್ದರು ಮತ್ತು ಇತ್ತೀಚೆಗೆ ತಮ್ಮ ಅಂಗಡಿಯನ್ನು ರೈಲ್ವೆ ನಿಲ್ದಾಣದ ಬಳಿ ಸ್ಥಳಾಂತರಿಸಿದೆವು. ಈ ಹಿಂದೆ ಹಲವರು ಲಾಟರಿ ಪಡೆದುಲಕ್ಷಾಂತರ ರೂಪಾಯಿ ಮೌಲ್ಯದ ಹಲವಾರು ಬಹುಮಾನಗಳನ್ನು ಗೆದ್ದಿದ್ದಾರೆ. ಆದರೆ ಇದೇ ಮೊದಲು ಕೋಟಿ ರೂಪಾಯಿ ಬಹುಮಾನ ಗೆದ್ದಿರುವುದು ಎಂದು ಸಂತಸಪಟ್ಟರು ಅಂಗಡಿ ಮಾಲೀಕ, (ಏಜೆನ್ಸೀಸ್).