Pune Godman Abused Woman arrested
- ದೇವಮಾನವ ಎಂದು ಕರೆದುಕೊಂಡು ಜನರನ್ನು ವಂಚಿಸುತ್ತಿದ್ದವ ಅರೆಸ್ಟ್
- ಮಹಿಳೆಯೊಬ್ಬರಿಗೆ ಮೂತ್ರ ಕುಡಿಯಲು, ವಿದ್ಯುತ್ ಶಾಕ್ ಕೊಟ್ಟು ಹಿಂಸಿಸುತ್ತಿದ್ದ ವ್ಯಕ್ತಿ
- ಪ್ರಮುಖ ಆರೋಪಿ ಸೇರಿದಂತೆ ಏಳು ಜನರನ್ನು ಬಂಧಿಸಿದ ಪೊಲೀಸರು
ಪುಣೆ: ನಾನು ಮನುಷ್ಯರ ಮುಖವನ್ನು ಗ್ರಹಿಸಿ ಹಿನ್ನಲೆ ಹೇಳಬಲ್ಲೆ, ಕಷ್ಟವನ್ನು ನೀಗಿಸಬಲ್ಲೆ ಎಂದೆಲ್ಲ ಪುಂಗಿ ಊದುವ ಸ್ವಯಂ ಘೋಷಿತ ದೇವಮಾನವನನ್ನು ನಂಬಿ ಹೋಗುವವರು ಈ ಸುದ್ದಿ ಓದಲೇ ಬೇಕು. ಪುಣೆಯಲ್ಲಿ ಹೀಗೆ ತಾನು ದೇವಮಾನವ ಎಂದು ಕರೆದುಕೊಂಡಿದ್ದ ವ್ಯಕ್ತಿಯೊಬ್ಬನನ್ನು ನಂಬಿ ಹೋದ ಮಹಿಳೆಗೆ ಚಿತ್ರ ಹಿಂಸೆ ಕೊಟ್ಟಿದ್ದವ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.
ಮಹಿಳೆಯೊಬ್ಬರಿಗೆ ಚಿತ್ರ ಹಿಂಸೆ ಕೊಟ್ಟು, ಲೈಂಗಿಕ ದೌರ್ಜನ್ಯ ಎಸಗಿ, ಮೂತ್ರ ಕುಡಿಯುವಂತೆ ಕಳ್ಳತನ ಮಾಡುವಂತೆ, ಗಂಡನಿಂದ ಡಿವೋರ್ಸ್ ಪಡೆದುಕೊಳ್ಳುವುದು ಸೇರಿದಂತೆ ನಾನಾ ಕೆಲಸಗಳನ್ನು ಮಾಡಿಸಿ, ವಿದ್ಯುತ್ ಶಾಕ್ ಕೊಟ್ಟಿದ್ದ ಆರೋಪದ ಮೇರೆಗೆ ಪುಣೆ ಮೂಲದ ಎಂದು ಕರೆದುಕೊಂಡಿದ್ದ ಸ್ವಯಂ ಘೋಷಿತ ದೇವಮಾನವ ಎಂದು ಕರೆದುಕೊಂಡ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಏಳು ಮಂದಿ ಅರೆಸ್ಟ್
ಪುಣೆಯ ವಾಘೋಲಿ ಪ್ರದೇಶದ ಉಬಾಲೆ ನಗರದಲ್ಲಿರುವ ರಾಧೇಶ್ಯಾಮ್ ಮಿಶ್ರಾ ಅಕಾ ರಾಧಾಮೋಹನ್ ಮಿಶ್ರಾ ಎಂಬಾತನನೇ ಆರೋಪಿ ಎಂದು ಗುರುತಿಸಲಾಗಿದೆ. ದೇವ ಮಾನವ ಎಂದು ಕರೆದುಕೊಂಡ ಈತನನ್ನು ಮತ್ತು ಅವನ ಜತೆಗಿದ್ದ ಸಹಚರರನ್ನು ಪೊಲೀಸರು ಬಂಧಿಸಿದ್ದು, ಇದರಲ್ಲಿ ಮಹಿಳೆಯರು ಸೇರಿದ್ದಾರೆ ಎನ್ನಲಾಗಿದೆ.
ನಾನಾ ರೀತಿಯಲ್ಲಿ ಹಿಂಸೆ
ರಾಧೇಶ್ಯಾಮ್ ಮಿಶ್ರಾ ಅಕಾ ರಾಧಾಮೋಹನ್ ಮಿಶ್ರಾ ತನ್ನನ್ನು ನಂಬಿ ಬರುವ ಭಕ್ತರಿಗೆ ತಾನೇ ದೇವಮಾನವ ಎಂದು ನಂಬಿಸಿ, ಮೋಸ ಮಾಡುತ್ತಿದ್ದನು. ಇದೇ ವೇಳೆ 2010ರಲ್ಲಿ ಸಂತ್ರಸ್ತ ಮಹಿಳೆ ಈತನನ್ನು ಭೇಟಿಯಾಗಿದ್ದಾಳೆ ಎನ್ನಲಾಗಿದೆ. ದೇವಮಾನವ ಎಂದು ಕರೆದುಕೊಮಡ ಈತ ಆಕೆಗೆ, ತನ್ನ ಪತಿಯಿಂದ ಡಿವೋರ್ಸ್ ಪಡೆದುಕೋ ಎಂದು ಹಿಂಸೆ ಕೊಟ್ಟಿದ್ದನಂತೆ ನಿತ್ಯ ಒತ್ತಾಯಿಸಿದ್ದನಂತೆ. ಇಷ್ಟೇ ಅಲ್ಲದೆ ಆಕೆಯ ಖಾಸಗಿ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡುಬ್ಲಾಕ್ ಮೇಲ್ ಮಾಡುತ್ತಿದ್ದನು ಎನ್ನುವುದು ತನಿಖೆಯಿಂದ ಬಯಲಾಗಿದೆ.
ಸಂತ್ರಸ್ತೆಯ ವಿಡಿಯೋ ಬಳಕೆ ಮಾಡಿಕೊಂಡು 2010 ಮತ್ತು 16ರಲ್ಲಿ ಆಕೆಗೆ ನಿರಂತರವಾಗಿ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ. ದೈಹಿಕವಾಗಿ ಹಿಂಸಿಸಿದ್ದಾನೆ. ಸಂತ್ರಸ್ತೆಯ ಕುಟುಂಬಸ್ಥರಿಗೂ ಇದೇ ವಿಡಿಯೋಗಳಿಂದ ಬೆದರಿಕೆ ಹಾಕಿದ್ದನು ಎನ್ನುವ ಮಾಹಿತಿ ಹೊರಬಿದ್ದಿದೆ. ಆತನ ಮೂತ್ರವನ್ನು ಪವಿತ್ರ ಎಂದು ಕುಡಿಯಲು ಒತ್ತಾಯ ಮಾಡಿದ್ದಾನೆ. ಆನಂತರ ಆಕೆಗೆ ವಿದ್ಯುತ್ ಶಾಕ್ ಕೊಟ್ಟಿದ್ದಾನೆ. ಆಕೆಯು ಕಳ್ಳತನ ಮಾಡುವ ಕೆಲಸಕ್ಕೆ ಇಳಿಯುವಂತೆ ಮಾಡಿದ್ದಾನೆ ಎನ್ನುವುದು ತಿಳಿದುಬಂದಿದೆ.
ಏನೆಲ್ಲ ವಶಕ್ಕೆ?
ಪೊಲೀಸರು ಆತನು ವಾಸವಾಗಿದ್ದ ಪ್ರದೇಶಕ್ಕೆ ದಾಳಿ ನಡೆಸಿದಾಗ ಅಲ್ಲಿ. 19 ಹಾರ್ಡ್ ಡ್ರೈವ್, ಪೆನ್ಡ್ರೈವ್, 6.5 ಲಕ್ಷ ರೂ. ನಗದು 15 ಲಕ್ಷ ರೂ ಮೌಲ್ಯದ ಚಿನ್ನಾಭರಣ, ಔಷಧ ಮಾತ್ರೆಗಳು, ಎಲೆಕ್ಟ್ರಾನಿಕ್ ಸಾಧನಗಳು ಸೇರಿದಂತೆ ನಾನಾ ವಸ್ತುಗಳು ಪತ್ತೆಯಾಗಿದ್ದು, ಅವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಿಶ್ರಾ ಮತ್ತು ಆತನ ಸಹಾಯಕ ಸ್ವಾಮಿ ಕನ್ವಾಲ್ ನಯನ್ ಎಂಬುವವನ ಜೊತೆಗೆ ಏಳು ಮಂದಿಯನ್ನು ಬಂಧಿಸಲಾಗಿದೆ. ಈತನಿಂದ ತಪ್ಪಿಸಿಕೊಂಡು ಬದುಕುಳಿದ ಸಂತ್ರಸ್ತರು ಠಾಣೆಗೆ ಬಂದು ದೂರು ನೀಡಬಹುದು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ,(ಏಜೆನ್ಸೀಸ್).