Pune Student Death 
ದೇಶ

ಪುಲ್-ಅಪ್ಸ್ ಮಾಡುವಾಗ ಕುಸಿದು ಬಿದ್ದ ಬಾಸ್ಕೆಟ್‌ ಬಾಲ್​ ಕಂಬ​; 20 ವರ್ಷದ ಎಂಜಿನಿಯರ್​ ವಿದ್ಯಾರ್ಥಿ ಸಾವು..Pune Student Death

ಪ್ರಮುಖ ಮುಖ್ಯಾಂಶಗಳು

  • ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ನಿವಾಸಿ ವಿಶಾಲ್ ವರ್ಮಾ ನಿಧನ
  • ಬಾಸ್ಕೆಟ್‌ಬಾಲ್ ಫ್ರೇಮ್ ಬಳಸಿ ಪುಲ್-ಅಪ್ಸ್ ಮಾಡುವಾಗ ಕಂಬ ಕುಸಿದು ಬಿದ್ದಿದೆ
  • ಪೊಲೀಸರಿಂದ ಪ್ರಕರಣ ದಾಖಲು, ಘಟನೆ ಹಿಂದಿನ ವೈಫಲ್ಯದ ಬಗ್ಗೆ ತನಿಖೆಗೆ ಮುಂದು
ಪುಣೆ: ವ್ಯಾಯಾಮ ಮಾಡುತ್ತಿದ್ದ 20 ವರ್ಷದ ಯುವಕನ ಮೇಲೆ ಬ್ಯಾಸ್ಕೇಟ್​ ಬಾಲ್​​ ಕಂಬ ಬಿದ್ದು ಪ್ರಾಣ ಕಳೆದುಕೊಂಡ(Pune Student Death)ಘಟನೆ ಮಹಾರಾಷ್ಟ್ರದ ಪುಣೆಯ ಪ್ರತಿಷ್ಠಿತ ಕಾಲೇಜೊಂದ ಕ್ಯಾಂಪಸ್​ನಲ್ಲಿ ಬೆಳಕಿಗೆ ಬಂದಿದೆ. 
ಮೃತ ವಿದ್ಯಾರ್ಥಿಯನ್ನು ವಿಶಾಲ್​ ವರ್ಮಾ ಎಂದು ಗುರುತಿಸಲಾಗಿದೆ. ಈತ ಉತ್ತರ ಪ್ರದೇಶದ ಬಸ್ತಿ ಗ್ರಾಮದವನಾಗಿದ್ದು ತಲಾನಿ ಮ್ಯಾರಿಟೈಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಬಿ.ಟೆಕ್ ಪದವಿ ಪಡೆಯುತ್ತಿದ್ದನ್ನು. 2024ರಲ್ಲಿ ಈ ಕಾಲೇಜಿಗೆ ಸೇರಿಕೊಂಡಿದ್ದನ್ನು ಎಂಬ ಬಗ್ಗೆ ಮಾಹಿತಿ ಲಿಂಕ್ಡಿನ್​​ನಲ್ಲಿ ಇದೆ.

ವಿದ್ಯಾರ್ಥಿಗೆ ಆಗಿದ್ದೇನು?

ವಿಶಾಲ್​ ವರ್ಮಾಗೆ ನಿತ್ಯ ವ್ಯಾಯಾಮ ಮಾಡೋದು ಅಭ್ಯಾಸ. ಎಂದಿನಂತೆ ಸೋಮವಾರ ಮುಂಜಾನೆ ವಸತಿ ನಿಲಯದಿಂದ ವ್ಯಾಯಾಮ ಮತ್ತು ವಾಕಿಂಗ್​ಗಾಗಿ ಕಾಲೇಜು ಮೈದಾನಕ್ಕೆ ತೆರಳಿದ್ದನು. ಎಲ್ಲ ಮುಗಿಸಿ ಕಡೆಯದಾಗಿ ಪುಲ್​ಅಪ್ಸ್​ ಮಾಡಬೇಕು ಎಂದು ಬಾಸ್ಕೆಟ್‌ಬಾಲ್ ಫ್ರೇಮ್ ಬಳಸಿಕೊಂಡ. ಫ್ರೇಮ್​ ಹಿಡಿದು ಪುಲ್​ಅಪ್ಸ್​ ಮಾಡುತ್ತಿರುವಾಗ ಆತನ ಮೇಲೆ ಬಿದ್ದಿದೆ. 

ತೀವ್ರ ರಕ್ತಸ್ರಾವದಿಂದ ಮೃತ

ಭಾರವಾಗಿದ್ದ ಕಬ್ಬಿಣದ ಬೋರ್ಡ್​ ಆತನ ತಲೆ ಮೇಲೆ ಬಿದ್ದ ಕಾರಣ ತೀವ್ರ ರಕ್ತಸ್ರಾವವಾಗಿ ಕುಸಿದುಬಿದ್ದ. ಘಟನಾ ಸ್ಥಳದಲ್ಲಿದ್ದ ವಿದ್ಯಾರ್ಥಿಗಳು ಆತನನ್ನು ಆಸ್ಪತ್ರೆಗೆ ಸೇರಿಸಿದರು. ಆದರೆ ವಿಶಾಲ್​ ವರ್ಮಾ ದಾರಿ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. 
ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಆ ಬಾಸ್ಕೆಟ್‌ಬಾಲ್ ಕಂಬ ತುಕ್ಕು ಹಿಡಿದಿತ್ತೇ ಅಥವಾ ಅದರ ಫಿಟ್ಟಿಂಗ್‌ನಲ್ಲಿ ದೋಷವಿತ್ತೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಇನ್ಸ್‌ಪೆಕ್ಟರ್ ಸಂತೋಷ್ ಪಾಟೀಲ್ ತಿಳಿಸಿದ್ದಾರೆ. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಮಾತನಾಡಿದ್ದು, ಇದೊಂದು ದುರಂತ, ಘಟನೆಗೆ ನಿಖರವಾದ ಕಾರಣ ಏನುಅನ್ನೋದನ್ನ ಪತ್ತೆ ಹಚ್ಚಲಾಗುತ್ತದೆ ಎಂದು ಅವರು ಹೇಳಿದೆ.

ಹರಿಯಾಣದಲ್ಲಿ ಎರಡು ಘಟನೆ ಬೆಳಕಿಗೆ

ಹರಿಯಾಣದ ರೋಹ್ಟಕ್‌ನಲ್ಲಿ 16 ವರ್ಷದ ರಾಷ್ಟ್ರೀಯ ಮಟ್ಟದ ಬ್ಯಾಸ್ಕೆಟ್‌ಬಾಲ್ ಆಟಗಾರನೊಬ್ಬ ಸಾವನ್ನಪ್ಪಿದ ಐದು ತಿಂಗಳೊಳಗೆ ಈ ಘಟನೆ ಸಂಭವಿಸಿದೆ. ಹಾರ್ದಿಕ್ ರಥಿ ಎಂಬಾರ ಬ್ಯಾಸ್ಕೇಟ್​ ಬಾಲ್ ಕೋರ್ಟ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಕಂಬ ಮುಂದಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟರು. ಇದಕ್ಕೂ ಮೊದಲು, ಹರಿಯಾಣದ ಬಹದ್ದೂರ್‌ಗಢ ಜಿಲ್ಲೆಯಲ್ಲಿ ಇದೇ ರೀತಿಯ ಘಟನೆಯಲ್ಲಿ 15 ವರ್ಷದ ಬಾಲಕ ಸಾವನ್ನಪ್ಪಿದ್ದ, (ಏಜೆನ್ಸೀಸ್)