Double Money Scam 
ದೇಶ

11 ದಿನದಲ್ಲಿ ಹೂಡಿಕೆ ಹಣ ದುಪ್ಪಟ್ಟುಗೊಳಿಸುವ ಆಮಿಷ; ವೈದ್ಯ ವೃದ್ಧನಿಗೆ 12 ಕೋಟಿ ರೂ. ಪಂಗನಾಮ ಹಾಕಿದ ವಂಚಕರು..Double Money Scam

ಪುಣೆ: 11 ದಿನದಲ್ಲಿ ಹೂಡಿಕೆ ಹಣ ದುಪ್ಪಟ್ಟು ಮಾಡಿಸುವ ಆಮಿಷವೊಡ್ಡಿ 75 ವರ್ಷದ ವೈದ್ಯರೊಬ್ಬರಿಂದ ಸೈಬರ್​ ವಂಚಕರು 12.31 ಕೋಟಿ ರೂ. ಪೀಕಿದ ಘಟನೆ ಪುಣೆಯಲ್ಲಿ ನಡೆದಿದೆ. ಸೈಬರ್​ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. 

12.31  ಕೋಟಿ ರೂ. ವಂಚನೆ

ಜನವರಿಯಲ್ಲಿ ವೃದ್ಧನನ್ನು ಪರಿಚಯ ಮಾಡಿಕೊಂಡ ಸೈಬರ್​ ವಂಚಕರು ಮೊದಲು, ಆತನಿಗೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಲು ಕೇಳಿಕೊಂಡರು. ಜೊತೆಗೆ 12.31  ಕೋಟಿ ರೂ. ಹಣ ಹೂಡಿಕೆ ಮಾಡಿದರೆ, 11 ದಿನದಲ್ಲಿ 54 ಕೋಟಿ ರೂ. ಲಾಭ ಸಿಗುತ್ತದೆ ಎಂದು ಮನವೊಲಿಸಿ ವಂಚಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.

ವಂಚಿಸಿದ್ದು ಹೇಗೆ?

ವಂಚಕರು ವೃದ್ಧನ ವಾಟ್ಸಾಪ್​ ಸಂಖ್ಯೆಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ, ಹೆಚ್ಚಿನ ಆದಾಯವನ್ನು ಗಳಿಸುವ ಬಗ್ಗೆ ಸಂದೇಶ ಬಂದಿತ್ತು. ಇದರಲ್ಲಿ ಆಸಕ್ತಿ ತೋರಿದವರನ್ನು ವಿಐಪಿ ಸ್ಟಾಕ್​ 24 ಎಂಬುವ ಗುಂಪಿಗೆ ಸೇರಿಸಲಾಗಿತ್ತು.  ಈ ಗುಂಪಿನ ಮೂಲಕ, ಆರೋಪಿಗಳು ಆಕರ್ಷಕ ಮತ್ತು ಲಾಭದಾಯಕವೆಂದು ತೋರುವ ಹೂಡಿಕೆ ಯೋಜನೆಗಳನ್ನು ಹಂಚಿಕೊಂಡರು. 11 ದಿನದಲ್ಲಿ ನೀವು ಹಾಕಿರುವ ಹೂಡಿಕೆ ದುಪ್ಪಾಟ್ಟಾಗುತ್ತದೆ ಎಂದು ನಂಬಿಸಿದರು ಎನ್ನಲಾಗಿದೆ.
ಹೂಡಿಕೆ ಬಗ್ಗೆ ಆಸಕ್ತಿ ತೋರಿದವರನ್ನು ನಂಬಿಸಲು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಂಪನಿಗಳ ನಕಲಿ ಅರ್ಜಿಯನ್ನು ನೀಡಲಾಗಿತ್ತಿತ್ತು. ವೈಯಕ್ತಿಕ ಮತ್ತು ಆರ್ಥಿಕ ವಿವರ ಕೇಳಿ ಹಣ ಹೂಡಿಕೆ ಮಾಡಿಸಿಕೊಂಡಿದ್ದಾರೆ. ಮತ್ತಷ್ಟು ನಂಬುವಂತೆ ಮಾಡಲು ಅವರಿಗೆ ಈಗಾಗಲೇ ಲಾಭ ಕಂಡ ಷೇರುಗಳ ಬಗ್ಗೆ ನಕಲಿ ಮಾಹಿತಿಯನ್ನು ಕ್ಲೈಂಟ್​ಗಳಿಗೆ ತೋರಿಸಿದ್ದಾರೆ.

ಮೂರು ತಿಂಗಳು ಮೋಸ

ಮಾರ್ಚ್​​7ರಿಂದ ಮಾರ್ಚ್​18ರವರೆಗೂ  ಎಂಟು ಬಾರಿ ಸೈಬರ್​ ವಂಚಕರು ಮತ್ತು ವೃದ್ಧ ನಡುವೆ ಹೂಡಿಕೆ ವ್ಯವಹಾರ ನಡೆದಿದ್ದು.. ಸರಣಿಯಾಗಿ 12.31 ಕೋಟಿ ಪೀಕಿ, ವಿಭಿನ್ನ ಬ್ಯಾಂಕ್​​ಗಳಿಗೆ ಹಣ ವರ್ಗಾಯಿಸಿಕೊಂಡಿದ್ದಾರೆ. ಇನ್ನು ಹೆಚ್ಚಿನ ಹಣ ಹೂಡಿಕೆ ಮಾಡಲು ವೃದ್ಧ ಹಿಂಜರಿದಾಗ ಅವರಿಗೆ  ಬೆದರಿಕೆ ಹಾಕಿ,  ಹಣಕ್ಕೆ ಮತ್ತೆ ಬೇಡಿಕೆಯಿಟ್ಟಿದ್ದಾನೆ
ಮೂರು ತಿಂಗಳು ಹಣ ನೀಡುತ್ತಲೇ ಇದ್ದ ವೃದ್ಧನಿಗೆ ಲಾಭದ ಹಣ ಸಿಗಲೇ ಇಲ್ಲ ಆಗ ತಾನು ಮೋಸ ಹೋಗಿರುವುದು ಗಮನಕ್ಕೆ ಬಂದು ಪೊಳಿಸ್​ ಠಾಣೆಗೆ ದೂರು ನೀಡಿದ್ದಾರೆ. ವೃದ್ಧನ ದೂರಿನ ಆದಾರದ ಮೇಲೆ ಸೈಬರ್​ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ, (ಏಜೆನ್ಸೀಸ್).