ಪ್ರಿಯಾ ಘಾಂಗ್ಹಾಸ್ ಮತ್ತು ಅರುಂಧತಿ ಚೌಧರಿ
CWC 2026: ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾನುವಾರ(ಆ. 01) ಮಹಿಳೆಯರ 60 ಕೆಜಿ ಬಾಕ್ಸಿಂಗ್ ಫೈನಲ್‌ನಲ್ಲಿ ಭಾರತದ ಪ್ರಿಯಾ ಘಾಂಗ್ಹಾಸ್, 70 ಕೆಜಿ ವಿಭಾಗದಲ್ಲಿ ಅರುಂಧತಿ ಚೌಧರಿ ಚಿನ್ನದ ಪದಕಗಳಿಗೆ ಮುತ್ತಿಟ್ಟಿದ್ದು, ಒಟ್ಟಾರೆ ಭಾರತದ ಚಿನ್ನದ ಪದಕಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಮಹಿಳೆಯರ 60 ಕೆಜಿ ಬಾಕ್ಸಿಂಗ್ ಫೈನಲ್‌ನಲ್ಲಿ ಭಾರತದ ಪ್ರಿಯಾ ಘಾಂಗ್ಹಾಸ್, ಕೆನಡಾದ ಮೇರಿ-ಬಥೌಲ್ ಅಲ್-ಅಹ್ಮದಿಹ್ ಅವರನ್ನು 4-1 ಅಂತರದಿಂದ ಸೋಲಿಸಿ ಚಿನ್ನದ ಪದಕ ಗೆದ್ದರೆ, ಅರುಂಧತಿ ಚೌಧರಿ, ಇಂಗ್ಲೆಂಡ್‌ನ ಚಾಂಟೆಲ್ಲೆ ರೀಡ್ ಅವರನ್ನು 5-0 ಅಂತರದಿಂದ ಸೋಲಿಸಿ 5-0 ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಅರುಂಧತಿ ಚೌಧರಿ ಅವರ ಬಾಕ್ಸಿಂಗ್ ಚಿನ್ನದ ಪದಕದೊಂದಿಗೆ, ಭಾರತದ ಪದಕಗಳ ಸಂಖ್ಯೆ 34 ಕ್ಕೆ ಏರಿದೆ. ಇದರೊಂದಿಗೆ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ದೇಶವು ನಾಲ್ಕನೇ ಸ್ಥಾನಕ್ಕೆ ಏರಿದೆ. ಭಾರತದ ಕ್ರೀಡಾಪಟುಗಳು ಇದುವರೆಗೂ 11 ಚಿನ್ನ, 15 ಬೆಳ್ಳಿ ಮತ್ತು 8 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ಇನ್ನು ಮಹಿಳೆಯರ 75 ಕೆಜಿ ವಿಭಾಗದ ಫೈನಲ್‌ನಲ್ಲಿ ಭಾರತದ ಲವ್ಲಿನಾ ಬೊರ್ಗೊಹೈನ್ ಆಸ್ಟ್ರೇಲಿಯಾದ ಎಮ್ಮಾ-ಸ್ಯೂ ಗ್ರೀನ್‌ಟ್ರೀ ಅವರನ್ನು ಎದುರಿಸಲಿದ್ದಾರೆ (ಏಜೆನ್ಸೀಸ್).