ವ್ಲಾಡಿಮಿರ್ ಪುಟಿನ್-ನರೇಂದ್ರ ಮೋದಿ
- ರಷ್ಯಾ ಅಧ್ಯಕ್ಷ ಪುಟಿನ್ ಅವರ ಎರಡು ದಿನಗಳ ಭಾರತ ಪ್ರವಾಸ
- ಎರಡು ದೇಶಗಳ ದಿಗ್ಗಜ ನಾಯಕರು ಮಾತುಕತೆ
- ರಷ್ಯಾ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಕೊಟ್ಟ ಗಿಫ್ಟ್ಗಳಿವು
ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಎರಡು ದಿನಗಳ ಭಾರತ ಪ್ರವಾಸದಲ್ಲಿದ್ದಾರೆ. ನಾಲ್ಕು ವರ್ಷಗಳಲ್ಲಿ ಪುಟಿನ್ ಅವರ ಮೊದಲ ಭಾರತ ಭೇಟಿ ಇದಾಗಿದ್ದು, ಭಾರತ-ರಷ್ಯಾ ನಡುವೆ ಹೆಚ್ಚಿನ ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ, ರಕ್ಷಣೆ, ಇಂಧನ ಮತ್ತು ವ್ಯಾಪಾರ ಕ್ಷೇತ್ರಗಳ ಹಲವಾರು ಒಪ್ಪಂದಗಳ ಕುರಿತು ಎರಡು ದೇಶಗಳ ನಾಯಕರು ಮಾತುಕತೆ ನಡೆಸಿದ್ದಾರೆ.
ಪ್ರಧಾನಿ ಮೋದಿ ಅವರೊಂದಿಗೆ ಉತ್ತಮ ಮಾತುಕತೆ ನಡೆಸಿದ ಪುಟಿನ್, ರಷ್ಯಾ-ಭಾರತ ಸ್ನೇಹವನ್ನು ತೀರ ಕೊಂಡಾಡಿದರು. ಬಲಿಷ್ಠ ಕ್ಷಿಪಣಿಗಳನ್ನು ನೀಡುವ ಹಾಗೂ ಟ್ರಂಪ್ ರಾಷ್ಟ್ರಕ್ಕೆ ಖಡಕ್ ಎಚ್ಚರಿಕೆಗಳನ್ನು ನೀಡಿದರು. "ಅಮೆರಿಕ ತನ್ನ ಸ್ವಂತ ವಿದ್ಯುತ್ ಸ್ಥಾವರಗಳಿಗೆ ರಷ್ಯಾದಿಂದ ಇಂಧನವನ್ನು ಮತ್ತು ರಿಯಾಕ್ಟರ್‌ಗಳಿಗೆ ಯುರೇನಿಯಂ ಅನ್ನು ಖರೀದಿಸುತ್ತಿದೆ. ಇದೇ ಹಕ್ಕು ಭಾರತಕ್ಕೂ ಇದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಜತೆ ಚರ್ಚಿಸಲು ರಷ್ಯಾ ಸಿದ್ಧವಿದೆ" ಎಂಬ ಮಾತುಗಳ ಮೂಲಕ ಟ್ರಂಪ್ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಎರಡು ದಿನಗಳ ಭಾರತ ಪ್ರವಾಸದಲ್ಲಿದ್ದ ಪುಟಿನ್ಗೆ ದೇಶದ ಹಲವು ವಿಶಿಷ್ಟ ಹಾಗೂ ವೈಶಿಷ್ಟ್ಯತೆಯಿಂದ ಕೂಡಿದ ವಸ್ತುಗಳನ್ನು ಮೋದಿ ಉಡುಗೊರೆಯಾಗಿ ನೀಡಿದರು. ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಸಾಂಕೇತಿಕ ವಸ್ತುಗಳನ್ನು ನವದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರಷ್ಯಾದ ಅಧ್ಯಕ್ಷರಿಗೆ ಪ್ರಧಾನಿಗಳು ನೀಡಿದರು. ಇವುಗಳಲ್ಲಿ ಅಸ್ಸಾಂ ಬ್ಲಾಕ್ ಟೀ, ಮುರ್ಷಿದಬಾದ್ ಸ್ವಿಲರ್ ಟೀ ಸೆಟ್, ಹ್ಯಾಂಡ್ಕ್ರಾಫ್ಟ್ನಿಂದ ತಯಾರಿಸಿದ ಬೆಳ್ಳಿ ಕುದುರೆ, ಆಗ್ರಾದ ಅಮೃತಶಿಲೆಯ ಚೆಸ್ ಸೆಟ್, ಕಾಶ್ಮೀರಿ ಕೇಸರಿ ಮತ್ತು ಭಗವದ್ಗೀತೆಯ ರಷ್ಯನ್ ಅನುವಾದವು ಈ ಗಿಫ್ಟ್ಗಳಲ್ಲಿ ಸೇರಿವೆ,(ಏಜೆನ್ಸೀಸ್).