110 ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆ ಸಾಧ್ಯತೆ! ಹಾಗಿದ್ರೆ, ರೋಗಿಗಳಿಗೆ ವಾರ್ಷಿಕ ಎಷ್ಟು ಉಳಿತಾಯ?  
ದೇಶ

110 ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆ ಸಾಧ್ಯತೆ! ಹಾಗಿದ್ರೆ, ರೋಗಿಗಳಿಗೆ ವಾರ್ಷಿಕ ಎಷ್ಟು ಉಳಿತಾಯ? | Cancer Medicines

ಬ್ರ್ಯಾಂಡೆಡ್, ಜೆನೆರಿಕ್, ದೇಶೀಯ, ಆಮದು ಮಾಡಿಕೊಂಡ ಹಾಗೂ ಪೇಟೆಂಟ್ ಹೊಂದಿರುವ ಮತ್ತು ಹೊಂದಿರದ ಔಷಧಗಳು ಇದರಲ್ಲಿ ಸೇರಲಿವೆ. ಈ ಕ್ರಮದಿಂದ 35 ಪೇಟೆಂಟ್ ಔಷಧಗಳು ಸೇರಿದಂತೆ 110 ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ.

  • 110 ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆ ಸಾಧ್ಯತೆ

  • ಔಷಧಗಳ ವಹಿವಾಟು ಮಾರ್ಜಿನ್ ಶೇ. 30ಕ್ಕೆ ಮಿತಿ

  • ರೋಗಿಗಳಿಗೆ ವಾರ್ಷಿಕ 2,500 ಕೋಟಿ ರೂ. ಉಳಿತಾಯ ನಿರೀಕ್ಷೆ

ನವದೆಹಲಿ: ಕ್ಯಾನ್ಸರ್ ಔಷಧಗಳ ಬೆಲೆ ಇಳಿಸುವ ಉದ್ದೇಶದಿಂದ ಎಲ್ಲ ನಾನ್-ಶೆಡ್ಯೂಲ್ಡ್ ಔಷಧಗಳ ವಹಿವಾಟು ಮಾರ್ಜಿನ್‌ ಅನ್ನು ಗರಿಷ್ಠ ಚಿಲ್ಲರೆ ಬೆಲೆಯ ಶೇ. 30ಕ್ಕೆ ಸೀಮಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

110 ಕ್ಯಾನ್ಸರ್ ಔಷಧ

ತಿಂಗಳಾಂತ್ಯದಲ್ಲಿ ಹೊಸ ನಿಯಮ ಜಾರಿಗೆ ಬರುವ ಸಾಧ್ಯತೆಯಿದ್ದು, ರೋಗಿಗಳಿಗೆ ವಾರ್ಷಿಕ 2,500 ಕೋಟಿ ರೂ. ಉಳಿತಾಯವಾಗುವ ನಿರೀಕ್ಷೆ ಇದೆ. ಬ್ರ್ಯಾಂಡೆಡ್, ಜೆನೆರಿಕ್, ದೇಶೀಯ, ಆಮದು ಮಾಡಿಕೊಂಡ ಹಾಗೂ ಪೇಟೆಂಟ್ ಹೊಂದಿರುವ ಮತ್ತು ಹೊಂದಿರದ ಔಷಧಗಳು ಇದರಲ್ಲಿ ಸೇರಲಿವೆ. ಈ ಕ್ರಮದಿಂದ 35 ಪೇಟೆಂಟ್ ಔಷಧಗಳು ಸೇರಿದಂತೆ 110 ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ.

2019ರಿಂದಲೇ ಪರಿಶೀಲನೆ

ಹೆಚ್ಚಿನ ಮಾರ್ಜಿನ್ ಇರುವ ಔಷಧಗಳನ್ನೇ ಮಾರಾಟ ಮಾಡುವ ಪ್ರವೃತ್ತಿಗೆ ಕಡಿವಾಣ ಹಾಕುವುದು ಇದರ ಮುಖ್ಯ ಉದ್ದೇಶ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಈ ನಿರ್ಧಾರ 2019ರಿಂದಲೇ ಪರಿಶೀಲನೆಯಲ್ಲಿತ್ತು. ಇತರ ಔಷಧಗಳ ಬೆಲೆ ನಿಯಂತ್ರಣಕ್ಕೆ ಹಂತ ಹಂತದ ಕ್ರಮ ಅಗತ್ಯ ಎಂದು ಮೂಲಗಳು ತಿಳಿಸಿವೆ. ಆದರೆ, ನಿರ್ದಿಷ್ಟ ಔಷಧಗಳ ಹೆಸರುಗಳನ್ನು ಸರ್ಕಾರದ ಮೂಲಗಳು ಇನ್ನೂ ಬಹಿರಂಗಪಡಿಸಿಲ್ಲ.

ಆರೋಗ್ಯ ಇಲಾಖೆಯ ಸಮಿತಿಯು ಅಂತಿಮ ಔಷಧಗಳ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದು, ಹೊಸ ದರ ಜಾರಿಗೆ ಬಂದ ಬಳಿಕ ಈ ಔಷಧಗಳು ಆಸ್ಪತ್ರೆಗಳಲ್ಲೂ ಲಭ್ಯವಾಗಲಿವೆ ಎಂದು ತಿಳಿಸಲಾಗಿದೆ.