6 ರಾಜ್ಯಗಳಿಗೆ ನೂತನ ಗವರ್ನರ್​ ನೇಮಿಸಿದ ರಾಷ್ಟ್ರಪತಿ ಮುರ್ಮು! ಕರ್ನಾಟಕದ ರಾಜ್ಯಪಾಲರಾಗಿ ಸುಧಾ ಯಾದವ್ | New Governors  
ದೇಶ

6 ರಾಜ್ಯಗಳಿಗೆ ನೂತನ ಗವರ್ನರ್​ ನೇಮಿಸಿದ ರಾಷ್ಟ್ರಪತಿ ಮುರ್ಮು! ಕರ್ನಾಟಕದ ರಾಜ್ಯಪಾಲರಾಗಿ ಸುಧಾ ಯಾದವ್ | New Governors

ಇನ್ನುಳಿದಂತೆ, ಒಡಿಶಾ ರಾಜ್ಯಪಾಲರಾಗಿ ಬ್ರಿಜ್ ಮೋಹನ್ ರಾಮ್, ಕರ್ನಾಟಕದ ರಾಜ್ಯಪಾಲರಾಗಿ ಸುಧಾ ಯಾದವ್, ಉತ್ತರಾಖಂಡಕ್ಕೆ ಧಾಲ್ ಸಿಂಗ್ ಬಿಸೆನ್ ಹಾಗೂ ಸಿಕ್ಕಿಂ ರಾಜ್ಯಪಾಲರಾಗಿ ದುಷ್ಯಂತ್ ಗೌತಮ್ ಅವರನ್ನು ನೇಮಕ ಮಾಡಲಾಗಿದೆ.

ನವದೆಹಲಿ: ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ( New Governors ) ನೇಮಕ ಮಾಡಿ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆದೇಶ ಹೊರಡಿಸಿದ್ದಾರೆ. ಈ ಪೈಕಿ, ಕರ್ನಾಟಕಕ್ಕೆ ಸುಧಾ ಯಾದವ್ ಹೊಸ ಗವರ್ನರ್​ ಆಗಿ ನೇಮಕಗೊಂಡಿದ್ದಾರೆ.

ಕೇರಳದ ರಾಜ್ಯಪಾಲರಾಗಿರುವ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರಿಗೆ ತಮಿಳುನಾಡು ರಾಜ್ಯದ ಪೂರ್ಣಾವಧಿ ಹೊಣೆಯನ್ನು ವಹಿಸಲಾಗಿದೆ. ಅಂತೆಯೇ, ಸಿಕ್ಕಿಂ ರಾಜ್ಯಪಾಲರಾಗಿದ್ದ ಓಂ ಪ್ರಕಾಶ್ ಮಾಥುರ್​ರನ್ನು ಇದೀಗ ಕೇರಳದ ಗವರ್ನರ್​ ಆಗಿ ವರ್ಗಾಯಿಸಲಾಗಿದೆ. ಇನ್ನುಳಿದಂತೆ, ಒಡಿಶಾ ರಾಜ್ಯಪಾಲರಾಗಿ ಬ್ರಿಜ್ ಮೋಹನ್ ರಾಮ್, ಕರ್ನಾಟಕದ ರಾಜ್ಯಪಾಲರಾಗಿ ಬಿಜೆಪಿ ಮಾಜಿ ಸಂಸದೆ, ಡಾ. ಸುಧಾ ಯಾದವ್, ಉತ್ತರಾಖಂಡಕ್ಕೆ ಧಾಲ್ ಸಿಂಗ್ ಬಿಸೆನ್ ಹಾಗೂ ಸಿಕ್ಕಿಂ ರಾಜ್ಯಪಾಲರಾಗಿ ದುಷ್ಯಂತ್ ಗೌತಮ್ ಅವರನ್ನು ನೇಮಕ ಮಾಡಲಾಗಿದೆ. ಹೊಸ ರಾಜ್ಯಪಾಲರು ಆಯಾ ರಾಜ್ಯಗಳ ರಾಜಭವನಗಳಲ್ಲಿ ಅಧಿಕಾರ ಸ್ವೀಕರಿಸಿದ ದಿನದಿಂದ ಈ ನೇಮಕಾತಿಗಳು ಜಾರಿಗೆ ಬರಲಿವೆ ಎಂದು ರಾಷ್ಟ್ರಪತಿ ಭವನ ಮಾಹಿತಿ ಹಂಚಿಕೊಂಡಿದೆ.

ಪ್ರಸ್ತುತ ಕರ್ನಾಟಕದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿರುವ ಥಾವರಚಂದ್ ಗೆಹ್ಲೋಟ್ ಅವರ ಸ್ಥಾನವನ್ನು ಶೀಘ್ರವೇ ಸುಧಾ ಯಾದವ್ ಅವರು ಸ್ವೀಕರಿಸಲಿದ್ದಾರೆ. 1999ರಿಂದ 2004 ರವರೆಗೆ 13ನೇ ಲೋಕಸಭೆಯಲ್ಲಿ ಹರಿಯಾಣದ ಮಹೇಂದ್ರಗಢವನ್ನು ಪ್ರತಿನಿಧಿಸಿದ ಹಿರಿಯ ಬಿಜೆಪಿ ನಾಯಕಿ ಸುಧಾ ಅವರು, 2022ರ ಆಗಸ್ಟ್​ನಲ್ಲಿ ಬಿಜೆಪಿಯ ಸಂಸದೀಯ ಮಂಡಳಿಗೆ, ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಗೆ ನೇಮಕಗೊಂಡರು. 2019ರಿಂದ 2022 ರವರೆಗೆ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

6 ರಾಜ್ಯಗಳ ನೂತನ ರಾಜ್ಯಪಾಲರ ಪಟ್ಟಿ

1. ಕರ್ನಾಟಕ: ಡಾ.ಸುಧಾ ಯಾದವ್

2. ಕೇರಳಂ: ಓಂ ಪ್ರಕಾಶ್ ಮಾಥುರ್

3. ತಮಿಳುನಾಡು: ರಾಜೇಂದ್ರ ವಿಶ್ವನಾಥ್ ಅರ್ಲೇಕರ್

4. ಒಡಿಶಾ: ಬ್ರಜ್ ಮೋಹನ್ ರಾಮ್

5. ಉತ್ತರಾಖಂಡ: ಧಾಲ್ ಸಿಂಗ್ ಬಿಸೆನ್

6. ಸಿಕ್ಕಿಂ: ದುಷ್ಯಂತ್ ಗೌತಮ್