ಪ್ರಭಾಸ್ ‘ಫೌಜಿ’ ಅವತಾರ 
ದೇಶ

7 ವರ್ಷಗಳ ಬಳಿಕ ‘ಬಾಹುಬಲಿ’ ಡಿಪಿಗೆ ಗುಡ್‌ಬೈ! ಪ್ರಭಾಸ್​ನ ‘ಫೌಜಿ’ ಅವತಾರಕ್ಕೆ ಫ್ಯಾನ್ಸ್ ಫಿದಾ | Prabhas’ ‘Fauji’ Look Wows Fans!

ಪ್ರಮುಖ ಮುಖ್ಯಾಂಶಗಳು

  • 7 ವರ್ಷಗಳ ಬಳಿಕ ಪ್ರಭಾಸ್ ಪ್ರೊಫೈಲ್ ಚೇಂಜ್​
  • ಬಾಹುಬಲಿ ಐಕಾನಿಕ್ ಲುಕ್‌ಗೆ ಗುಡ್‌ಬೈ
  • ‘ಫೌಜಿ’ ಅವತಾರದಲ್ಲಿ ಪ್ರಭಾಸ್ ರಗಡ್ ಎಂಟ್ರಿ
ಹೈದರಾಬಾದ್: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಹೊಸ ಲುಕ್​ಗೆ ಇದೀಗ ಅಭಿಮಾನಿಗಳು ಫಿದಾ ಆಗಿದ್ದಾರೆ. ಬರೋಬ್ಬರಿ ಏಳು ವರ್ಷಗಳಿಂದ ಡಿಜಿಟಲ್ ಲೋಕದಲ್ಲಿ ತಮ್ಮ ಸಾಮ್ರಾಜ್ಯದ ಮುದ್ರೆಯಂತಿದ್ದ 'ಬಾಹುಬಲಿ'ಯ ಐಕಾನಿಕ್ ಪ್ರೊಫೈಲ್ ಪಿಕ್ಚರ್ ಅನ್ನು ಅಂತಿಮವಾಗಿ ಬದಲಾಯಿಸುವ ಮೂಲಕ ಹೊಸ ಇತಿಹಾಸಕ್ಕೆ ನಾಂದಿ ಹಾಡಿರುವ ಪ್ರಭಾಸ್, ಮುಂಬರುವ ‘ಫೌಜಿ’ ಸಿನಿಮಾಗಾಗಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
‘ಬಾಹುಬಲಿ’ ಸಿನಿಮಾದ ಬಳಿಕ ಪ್ರಭಾಸ್ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿತ್ತು. ಇದೇ ಕಾರಣಕ್ಕೆ ಅವರ ಸೋಶಿಯಲ್ ಮೀಡಿಯಾ ಡಿಪಿಯಲ್ಲೂ ಬಾಹುಬಲಿಯ ಛಾಪು ಇಷ್ಟು ವರ್ಷಗಳ ಕಾಲ ಮುಂದುವರಿದಿತ್ತು. ಇದೀಗ ಅದಕ್ಕೆ ತೆರೆ ಎಳೆದಿರುವ ಪ್ರಭಾಸ್, ‘ಫೌಜಿ’ ಚಿತ್ರದ ರಗಡ್ ಲುಕ್‌ ಮೂಲಕ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದಾರೆ.

ಫೌಜಿ’ ಸಿನಿಮಾಗಾಗಿ ಪ್ರಭಾಸ್ ಹೊಸ ಲುಕ್

ಸ್ವಾತಂತ್ರ್ಯ ಮಾಸದ ಆರಂಭದಲ್ಲೇ ಈ ಈ ಬಿಗ್ ಅಪ್‌ಡೇಟ್ ನಡೆದಿರುವುದು ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ದೇಶಭಕ್ತಿಯ ಹಿನ್ನೆಲೆಯ ಕಥೆಯನ್ನು ಹೊಂದಿರುವ ‘ಫೌಜಿ’ ಸಿನಿಮಾದ ಪಾತ್ರಕ್ಕೆ ಪ್ರಭಾಸ್ ಅವರ ಹೊಸ ಲುಕ್ ಸೂಕ್ತವಾಗಿ ಹೊಂದಿಕೆಯಾಗುತ್ತೆ ಎಂಬ ಮಾತುಗಳು ಕೇಳಿಬರುತ್ತಿವೆ.

ಪ್ರಭಾಸ್ ಫ್ಯಾನ್ಸ್ ಖುಷ್​

ಪ್ರಭಾಸ್ ಅವರ ಹೊಸ ಡಿಪಿ ಬದಲಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಫೌಜಿ ಸಿನಿಮಾದ ಮೇಕಿಂಗ್, ಚಿತ್ರದ ಸ್ಕೇಲ್ ಮತ್ತು ಪ್ರಭಾಸ್ ಅವರ ಪಾತ್ರ ಹೇಗಿರಲಿದೆ ಎಂಬ ಬಗ್ಗೆ ಚರ್ಚೆಗಳು ಜೋರಾಗಿವೆ. ಅಭಿಮಾನಿಗಳ ಪಾಲಿಗೆ ಇದು ಕೇವಲ ಪ್ರೊಫೈಲ್ ಪಿಕ್ಚರ್ ಬದಲಾವಣೆಯಲ್ಲ. ಬಾಹುಬಲಿಯಿಂದ ಬಳಿಕ ಪ್ರಭಾಸ್ ಅವರ ಮತ್ತೊಂದು ಸಿನಿ ಅಧ್ಯಾಯ ಶುರುವಾಗಲಿದೆ ಎಂಬಂತೆ ಫ್ಯಾನ್ಸ್ ಇದನ್ನು ನೋಡುತ್ತಿದ್ದಾರೆ.

'ಫೌಜಿ'ಯಾಗಿ ಕಣಕ್ಕಿಳಿಯಲು ಕೌಂಟ್‌ಡೌನ್

ಪ್ರಪಂಚದಾದ್ಯಂತ ಇರುವ ಕೋಟ್ಯಂತರ ಫ್ಯಾನ್ಸ್‌ಗೆ ಪಾಲಿಗೆ ನಂಬರ್ ಒನ್ ಹೀರೊ ಆಗಿರುವ ಪ್ರಭಾಸ್, ಈಗ 'ಫೌಜಿ'ಯಾಗಿ ಕಣಕ್ಕಿಳಿಯಲು ಕೌಂಟ್‌ಡೌನ್ ಶುರುವಾಗಿದೆ. ಈ ಹೊಸ ಚಾಪ್ಟರ್ ಭಾರತ ಸಿನಿಮಾರಂಗದ ಬಾಕ್ಸ್ ಆಫೀಸ್ ಲೆಕ್ಕಾಚಾರವನ್ನೇ ಬದಲಿಸುವುದು ಅಂದಾಜಿದೆ. ಚಿತ್ರದ ಅಧಿಕೃತ ಅಪ್‌ಡೇಟ್‌ಗಳು ಮತ್ತು ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ,(ಏಜೆನ್ಸೀಸ್​).