ಭಾರತೀಯ ಕ್ರಿಕೆಟಿಗ ಪೃಥ್ವಿ ಶಾ ಅವರ ಭಾವಿ ಪತ್ನಿ ಆಕೃತಿ ಅಗರ್ವಾಲ್  
ದೇಶ

ಪೋಸ್ಟ್ ಅನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ: ನಿಗೂಢ ಇನ್‌ಸ್ಟಾ ಸ್ಟೋರಿ ಬಗ್ಗೆ ಸ್ಪಷ್ಟೀಕರಣ ನೀಡಿದ ಪೃಥ್ವಿ ಶಾ ಭಾವಿ ಪತ್ನಿ | Prithvi Shaw

Prithvi Shaw: ಭಾರತೀಯ ಕ್ರಿಕೆಟಿಗ ಪೃಥ್ವಿ ಶಾ ಅವರ ಭಾವಿ ಪತ್ನಿ ಆಕೃತಿ ಅಗರ್ವಾಲ್ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರೆನ್ನಲಾದ ಮೋಸದ ವದಂತಿಯ ನಿಗೂಢ ಸ್ಟೋರಿ ಬಗ್ಗೆ, ಸ್ವತಃ ಅವರೇ ಮತ್ತೊಂದು ಪೋಸ್ಟ್ ಹಾಕಿ ಸ್ಪಷ್ಟೀಕರಣ ನೀಡಿದ್ದು, ಎಲ್ಲರೂ ಅದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಆಕೃತಿ ಅಗರ್ವಾಲ್ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರೆನ್ನಲಾದ ಮೋಸದ ವದಂತಿಯ ನಿಗೂಢ ಸ್ಟೋರಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಸ್ಟೋರಿ ಡಿಲೀಟ್ ಆಗಿದ್ದರೂ ಅದರ ಸ್ಕ್ರೀನ್​ಶಾಟ್​ಗಳು ಮಾತ್ರ ಜಾಲತಾಣದಲ್ಲಿ ಹರಿದಾಡಿ ಇಬ್ಬರ ಸಂಬಂಧದ ಬಗ್ಗೆ ಹಲವು ಊಹಾಪೋಹಗಳನ್ನು ಹರಡಿದ್ದವು.
ಆದಾಗ್ಯೂ ಅಗರ್ವಾಲ್ ಅಥವಾ ಪೃಥ್ವಿ ಶಾ ಇಬ್ಬರೂ ವದಂತಿಗಳ ಬಗ್ಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ. ದಂಪತಿಗಳು ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಇಬ್ಬರು ಫಾಲೋ ಮಾಡಿಕೊಂಡಿದ್ದಾರೆ. ಮತ್ತು ಅವರ ಸಂಬಂಧದಲ್ಲಿ ಯಾವುದೇ ಬದಲಾವಣೆಯನ್ನು ತೋರಿಸಿಕೊಂಡಿಲ್ಲ.

ಹಳೆಯ ಸ್ಟೋರಿಯಲ್ಲಿ ಏನಿತ್ತು?

ನಾನು ಸಾಕಷ್ಟು ಬಾರಿ ವಂಚನೆಗೆ ಒಳಗಾಗಿದ್ದರೂ ಸಹ, ಎಂದಿಗೂ ಒಂದೇ ಒಂದು ಮಾತನ್ನೂ ಆಡಲಿಲ್ಲ, ಆದರೆ ಒಂದು ಹೆಜ್ಜೆ ಮುಂದೆ ಇಟ್ಟ ಮೇಲೂ ಇದೆಲ್ಲಾ ನಡೆಯುತ್ತಿರುವುದನ್ನು ಇನ್ನು ನಂಬಲು ಸಾಧ್ಯವಾಗುತ್ತಿಲ್ಲ. ಎಲ್ಲವೂ ನಿಜ, ಪ್ರತಿಯೊಂದು ವದಂತಿಯೂ ನಿಜ. ಆತನ ಬಗ್ಗೆ ನೀವು ಸಾಮಾಜಿಕ ಜಾಲತಾಣಗಳಲ್ಲಿ ಏನೆಲ್ಲಾ ನೋಡುತ್ತಿದ್ದೀರೋ ಅದೆಲ್ಲವೂ ಸತ್ಯ ಎಂದು ಆಕೃತಿ ಅಗರ್ವಾಲ್ ಅವರು ಡಿಲೀಟ್ ಮಾಡುವ ಮುನ್ನ ತಮ್ಮ ಸೋಶಿಯಲ್ ಮೀಡಿಯಾ ಸ್ಟೋರಿಯಲ್ಲಿ ಬರೆದುಕೊಂಡಿದ್ದರು ಎನ್ನಲಾಗಿದೆ.
ಪೋಸ್ಟ್‌ನಲ್ಲಿ ಪೃಥ್ವಿ ಶಾ ಅವರ ಹೆಸರನ್ನು ಎಲ್ಲೂ ಉಲ್ಲೇಖಿಸದಿದ್ದರೂ ಸಹ, ನೆಟ್ಟಿಗರು ಮಾತ್ರ ಇದು ಪೃಥ್ವಿ ಶಾ ಅವರನ್ನು ಉದ್ದೇಶಿಸಿಯೇ ಹಾಕಿರುವ ಪೋಸ್ಟ್ ಎಂದು ವದಂತಿಗಳನ್ನು ಹಬ್ಬಿಸಿದ್ದರು (ಏಜೆನ್ಸೀಸ್).