ಮೂರ್ತ ವಿಸರ್ಜಿಸಿ, ಕೈ ತೊಳಿಯದೆ ಪಾಪ್​ಕಾರ್ನ್​ ಮಾರಿದ ವ್ಯಾಪಾರಿ 
ದೇಶ

ಪಾಪ್‌ಕಾರ್ನ್ ಪ್ರೀಯರೇ ಎಚ್ಚರ: ಮೂತ್ರ ವಿಸರ್ಜಿಸಿ ಅದೇ ಕೈಯಿಂದ ತಿಂಡಿ ಮಾರಿದ ವ್ಯಾಪಾರಿ; ವಿಡಿಯೋ ವೈರಲ್​! Viral Video

ಪ್ರಮುಖ ಮುಖ್ಯಾಂಶಗಳು

  • ರಸ್ತೆಯಲ್ಲಿ ಮೂರ್ತ ವಿಸರ್ಜನೆ ಮಾಡಿದ ವ್ಯಾಪಾರಿ
  • ಕೈ ತೊಳಿಯದೆ ಪಾಪ್​ಕಾರ್ನ್​ ಮಾರಿದ ವ್ಯಕ್ತಿ
  • ವೈರಲ್​ ವಿಡಿಯೋಗೆ ಭಾರಿ ಆಕ್ರೋಶ
ಮುಂಬೈ: ನೀವು ರಸ್ತೆ ಬದಿಯಲ್ಲಿ ದೊರೆಯುವ ಚಾಟ್ಸ್​ ಅಥವಾ ತಿಂಡಿ ತಿನಿಸುಗಳನ್ನು ಇಷ್ಟ ಪಡುತ್ತಿರಾ? ನಿಮಗೆ ಹಾದಿಯಲ್ಲಿ ಸಿಗುವ ಪಾನಿಪುರಿ, ಪಾಪ್​ ಕಾರ್ನ್​ ಮತ್ತು ಗೋಬಿ ಮಂಚೂರಿ ನೋಡಿದರೆ ಬಾಯಲ್ಲಿ ನೀರು ಬರುತ್ತದೆ ಎಂದರೆ ಈ ಸುದ್ದಿಯನ್ನು ತಪ್ಪದೆ ಓದಿ.
ಭಾರತದಲ್ಲಿ ದಿನ ಕಳೆದಂತೆ ಆಹಾರದ ಗುಣಮಟ್ಟದಲ್ಲಿ ಕೊರತೆ, ಕಲಬೆರಿಕೆ ನಡೆಯುತ್ತಿರುವ ಸುದ್ದಿಗಳು ಕೇಳಿ ಬರುತ್ತವೆ. ಆದರೆ ಈಗ ಮುಂಬೈನಲ್ಲಿ ನಡೆದಿದೆ ಎಂದು ಹೇಳಲಾಗುತ್ತಿರುವ ಅಸಹ್ಯಕರ ಘಟನೆ ಬಗ್ಗೆ ಕೇಳಿದರೆ, ನೀವು ಇನ್ನ್ಮುಂದೆ ರಸ್ತೆಬದಿಯಲ್ಲಿ ದೊರೆಯುವ ಆಹಾರಗಳನ್ನು ತಿನ್ನಲು ನೂರು ಸಲ ಯೋಚಿಸುತ್ತಿರಿ.

ಬಾಲ್ಕನಿಯಿಂದ ಬಯಲಾದ ಸತ್ಯ!

ಮುಂಬೈ ಮೂಲದ ಸಬ್ಯಸಾಚಿ ದಾಸ್ ಎಂಬುವವರು ತಮ್ಮ ಕಟ್ಟಡದ ಬಾಲ್ಕನಿಯಿಂದ ರೆಕಾರ್ಡ್ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ (Viral Video) ಕಾಡ್ಗಿಚ್ಚಿನಂತೆ ಹರಡುತ್ತಿದೆ. ಈ ವಿಡಿಯೋದಲ್ಲಿ ಒಬ್ಬ ಪಾಪ್‌ಕಾರ್ನ್ ವ್ಯಾಪಾರಿಯು ಸಾರ್ವಜನಿಕವಾಗಿ ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ಕಾಣಬಹುದು.
ಮೂತ್ರ ವಿಸರ್ಜನೆ ಮುಗಿಸಿದ ಆ ವ್ಯಾಪಾರಿ, ಕನಿಷ್ಠ ತನ್ನ ಕೈಗಳನ್ನೂ ತೊಳೆಯದೆ ನೇರವಾಗಿ ತನ್ನ ಪಾಪ್‌ಕಾರ್ನ್ ಅಂಗಡಿಗೆ ಹಿಂತಿರುಗುತ್ತಾನೆ. ಅಷ್ಟೇ ಅಲ್ಲದೆ, ಅದೇ ಕೈಗಳಿಂದ ಪಾಪ್‌ಕಾರ್ನ್​ನ್ನು ಪ್ಯಾಕೆಟ್‌ಗಳಿಗೆ ತುಂಬಿಸಿ ಗ್ರಾಹಕರಿಗೆ ನೀಡಲು ಶುರು ಮಾಡುತ್ತಾನೆ. ಈ ದೃಶ್ಯವನ್ನು ವಿವರಿಸಿರುವ ದಾಸ್, ಅವನು ಕೈ ತೊಳೆಯಬಹುದು ಎಂದು ನಾನು ಕಾಯುತ್ತಿದ್ದೆ, ಆದರೆ ಅವನು ಅದರ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಬಡವರಿಂದ ಖರೀದಿಸಿ ಸರಿ, ಆದರೆ ನೈರ್ಮಲ್ಯ ಎಲ್ಲಿ?

ಸಾಮಾನ್ಯವಾಗಿ ದುಬಾರಿ ಹೋಟೆಲ್‌ಗಳ ಬದಲು ಬಡ ವ್ಯಾಪಾರಿಗಳಿಂದ ಆಹಾರ ಖರೀದಿಸಿ ಅವರಿಗೆ ಸಹಾಯ ಮಾಡಿ ಎಂಬ ಮಾತುಗಳು ಕೇಳಿಬರುತ್ತವೆ. ಆದರೆ, ಈ ವಿಡಿಯೋ ಅಂತಹ ನಂಬಿಕೆಗಳ ಮೇಲೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ. ನೈರ್ಮಲ್ಯವಿಲ್ಲದ ಇಂತಹ ಆಹಾರವನ್ನು ಸೇವಿಸಿ ಅನಾರೋಗ್ಯಕ್ಕೆ ತುತ್ತಾಗುವುದು ಸರಿಯೇ? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ನೆಟ್ಟಿಗರ ಆಕ್ರೋಶದ ಅಲೆ

ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇಂದಿನಿಂದಲೇ ರಸ್ತೆ ಬದಿಯ ಆಹಾರವನ್ನು ಸಂಪೂರ್ಣವಾಗಿ ಬಹಿಷ್ಕರಿಸಿ ಎಂದು ಒಬ್ಬರು ಹೇಳಿದರೆ, ಇದನ್ನು ತಿನ್ನುವ ಬದಲು ಒಂದಿಷ್ಟು ವಿಷ ತಿನ್ನುವುದು ಒಳ್ಳೆಯದು ಎಂದು ಮತ್ತೊಬ್ಬರು ಆಕ್ರೋಶ ಹೊರಹಾಕಿದ್ದಾರೆ.
ಇನ್ನೊಬ್ಬ ಮಹಿಳೆ ತಮ್ಮ ಅನುಭವ ಹಂಚಿಕೊಳ್ಳುತ್ತಾ, ಪರಾಠಾ ಮಾಡುವ ಮಹಿಳೆಯೊಬ್ಬಳು ಟೇಬಲ್ ಒರೆಸುವ ಬಟ್ಟೆಯಿಂದಲೇ ಜೇಡವನ್ನು ಎಸೆದು ಮತ್ತೆ ಅದೇ ಬಟ್ಟೆಯಿಂದ ತವಾ ಒರೆಸುವುದನ್ನು ನೋಡಿ ನಾನು ಅಲ್ಲಿಂದ ಓಡಿ ಬಂದೆ ಎಂದು ಅಸಹ್ಯ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರಿಗೆ ಕಿವಿಮಾತು

ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಬೀದಿ ಬದಿಯ ಆಹಾರ ಸೇವಿಸುವ ಮುನ್ನ ಆ ಅಂಗಡಿಯ ಸ್ವಚ್ಛತೆ ಮತ್ತು ವ್ಯಾಪಾರಿಯ ನೈರ್ಮಲ್ಯದ ಬಗ್ಗೆ ಗಮನಹರಿಸುವುದು ಅತ್ಯಗತ್ಯ. ಕೇವಲ ರುಚಿಗಾಗಿ ನಮ್ಮ ಆರೋಗ್ಯವನ್ನು ಪಣಕ್ಕಿಡುವುದು ಬುದ್ಧಿವಂತಿಕೆಯಲ್ಲ ಎನ್ನುವುದು ನೆಟ್ಟಿಗರ ಕಿವಿಮಾತಾಗಿದೆ,(ಏಜನ್ಸೀಸ್​).