ಮಳೆಯಿಂದ ವಿದ್ಯಾರ್ಥಿಗಳನ್ನು ರಕ್ಷಿಸಲು ಟೆಂಟ್ ಹಾಕಲು ಬಿಡಿ ಎಂದು ದೆಹಲಿ ಪೊಲೀಸರ ಕಾಲಿಗೆ ಬಿದ್ದ ಅಭಿಜಿತ್ ದೀಪ್ಕೆ! 
ದೇಶ

ನೀವು ಇಷ್ಟೊಂದು ಕ್ರೂರಿಗಳಾಗಬೇಡಿ: ವಿದ್ಯಾರ್ಥಿಗಳ ಟೆಂಟ್‌ಗಾಗಿ ದೆಹಲಿ ಪೊಲೀಸರ ಕಾಲು ಹಿಡಿದ ಅಭಿಜಿತ್ ದೀಪ್ಕೆ! Abhijit Diptke in Protest

ಪ್ರಮುಖ ಮುಖ್ಯಾಂಶಗಳು

  • ನೀಟ್ ಪೇಪರ್ ಸೋರಿಕೆ ವಿರುದ್ಧ: ನೀಟ್ ಪೇಪರ್ ಸೋರಿಕೆ ವಿರುದ್ಧ ಕಾಕ್ರೋಚ್​ ಜನತಾ ಪಾರ್ಟಿ ಹೋರಾಟ
  • ಮಳೆಯಿಂದ ವಿದ್ಯಾರ್ಥಿಗಳನ್ನು ರಕ್ಷಿಸಲು ಟೆಂಟ್ ಹಾಕಲು ಬಿಡಿ ಎಂದು ದೆಹಲಿ ಪೊಲೀಸರ ಕಾಲಿಗೆ ಬಿದ್ದ ಅಭಿಜಿತ್ ದೀಪ್ಕೆ!
  • ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿರುವ ವಿಡಿಯೋ
ನವದೆಹಲಿ: ನೀಟ್​ ಪೇಪರ್​ ಸೋರಿಕೆ, ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ ಆಗ್ರಹಿಸಿ ಕಾಕ್ರೋಚ್​ ಜನತಾ ಪಾರ್ಟಿ ನಡೆಸುತ್ತಿರುವ ಹೋರಾಟ ಮುಂದುವರಿಯುತ್ತಿದೆ.
ಸಿಜೆಪಿ ಪಕ್ಷದ ಪ್ರನಾಳಿಕೆಗಳು ಈಡೇರುವವರೆಗೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹವಾಮಾನ ಸಂರಕ್ಷಣಾ ಕಾರ್ಯಕರ್ತ ಸೋನಮ್​ ವಾಗ್ಚುಕ್​ ನಿರತರಾಗಿದ್ದಾರೆ. ಆದರೆ ಇಂದು (ಗುರುವಾರ, ಜು.9) ಚಿಜೆಪಿ ಪಕ್ಷದ ಸ್ಥಾಪಕ ಅಭಿಜಿತ್​ ದೀಪ್ಕೆ (Abhijit Diptke in Protest) ದೆಹಲಿ ಪೊಲೀಸರ ಕಾಲಿಗೆ ಬಿದ್ದಿರುವ ವಿಡಿಯೋವೊಂದು ಸಖತ್​ ವೈರಲ್​ ಆಗುತ್ತಿದೆ.

ದೀಪ್ಕೆ ಕಾಲಿಗೆ ಬೀಳಲು ಕಾರಣವೇನು?

ಕಾಕ್ರೋಜ್​ ಜನತಾ ಪಾರ್ಟಿ ಸ್ಥಾಪಕ ಅಭಿಜಿತ್​ ದೀಪ್ಕೆ ಟ್ವಿಟರ್​ನಲ್ಲಿ ಹಂಚಿಕೊಂಡಿರುವ ವಿಡಿಯೋನಲ್ಲಿ, ಉಪವಾಸ ಸತ್ಯಗ್ರಹದಲ್ಲಿ ನಿರತರಾಗಿರುವ ವಿದ್ಯಾರ್ಥಿಗಳು ಮಳೆಯಿಂದ ರಕ್ಷಣೆ ಪಡೆಯಲು ಟೆಂಟ್​ಗಳನ್ನು ಹಾಕಿಕೊಂಡಿದ್ದಾರೆ. ಅದನ್ನು ದಯಮಾಡಿ ತೆಗೆಯಲು ಹೇಳಬೇಡಿ ಎಂದು ದೆಹಲಿ ಪೊಲೀಸರಲ್ಲಿ ಮನವಿ ಮಾಡಿದ್ದೆನೆಂದು ಬರೆದುಕೊಂಡಿದ್ದಾರೆ.
ವಿಡಿಯೋನಲ್ಲಿ ದೀಪ್ಕೆ ಪೊಲೀಸರಿಗೆ ಕೈ ಮುಗಿದು ಕೇಳಿಕೊಳ್ಳುತ್ತಿರುವ ಹಾಗೂ ಪೊಲೀಸರ ಕಾಲಿಗೆ ಬಿದ್ದಿರುವುದನ್ನು ನೋಡಬಹುದಾಗಿದೆ. ಆದರೆ ದೀಪ್ಕೆ ಹೀಗೆ ಕಾಲಿಗೆ ಬೀಳಲು ಬರುತ್ತಿದ್ದಂತೆ ಪೊಲೀಸರು ದೀಪ್ಕೆಯನ್ನು ತಡೆದಿದ್ದಾರೆ.

ಪೊಲೀಸರು ಕ್ರೂರಿಗಳಾಗಿದ್ದಾರೆ!

ನಾವು ಟೆಂಟ್​ ಹಾಕಿಕೊಳ್ಳಲು ಪೊಲೀಸರಲ್ಲಿ ಕಳೆದ ಮೂರು ದಿನಗಳಿಂದ ಮನವಿ ಸಲ್ಲಿಸುತ್ತಿದ್ದೆವೆ. ಆದರೆ ಅವರಿಂದ ಇಲ್ಲಿವರೆಗೆ ಏನು ಪ್ರತಿಕ್ರಿಯೆ ಬಂದಿಲ್ಲ. ಹೋರಾಟಕ್ಕೆ ಬಂದಿರುವ ವಿದ್ಯಾರ್ಥಿಗಳ ವಸ್ತುಗಳು ಮಳೆ ಕಾರಣದಿಂದ ಒದ್ದೆಯಾಗುತ್ತಿದೆ. ಇದಕ್ಕಾಗಿ ನಾನು ಟೆಂಟ್​ ಹಾಕಿಕೊಳ್ಳಲು ಮನವಿ ಮಾಡಿದ್ದೇವೆ. ಪೊಲೀಸರು ಇಷ್ಟೊಂದು ಕ್ರೂರಿಗಳಾಗಬಾರದೆಂದು ಅವರು ಹೇಳಿದ್ದಾರೆ, (ಏಜನ್ಸೀಸ್).