Hit And Run (ಚಿತ್ರ X) 
ದೇಶ

ಸಾವಿನ ಸವಾರಿ ಮಾಡಿದ ಟ್ರಕ್: ಅಮಾಯಕ ಮಹಿಳೆಯ ಪ್ರಾಣ ಹೀರಿದ ಚಾಲಕನಿಗಾಗಿ ಬಲೆ ಬೀಸಿದ ಪೊಲೀಸ್​ ! Hit And Run

ಅಜ್ಮೀರ್: ಅಜ್ಮೀರ್​-ಬೀವರ್​ ಹೆದ್ದಾರಿಯ ನರೇಲಿ ಬೈಪಾಸ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು (Hit And Run) ಗುರುವಾರ (ಫೆ.21) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಬಳಿಕ ಟ್ರಕ್​ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಘಟನೆ ಏನು?

ರಸೂಲ್‌ಪುರ ನಿವಾಸಿ ಸರಿತಾ ದೇವಿ (39) ಎಂಬ ಮಹಿಳೆಯೊಬ್ಬಳು ರಸ್ತೆ ದಾಟುತ್ತಿದ್ದಾಗ ಬೀವರ್ ಕಡೆಯಿಂದ ವೇಗವಾಗಿ ಬಂದ ಟ್ರಕ್​ ಮಹಿಳೆಗೆ ಡಿಕ್ಕಿ ಹೊಡೆದ ಹಿನ್ನಲೆ ಅಪಘಾತ ಸಂಭವಿಸಿದೆ. ಈ ವೇಳೆ ಸ್ಥಳೀಯರು ತಕ್ಷಣವೇ ಸಹಾಯಕ್ಕೆ ಧಾವಿಸಿದ್ದು, ತೀವ್ರ ರಕ್ತಸ್ರಾವದಿಂದಾಗಿ ಮಹಿಳೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಹೆದ್ದಾರಿ ಬಂದ್: ಸ್ಥಳೀಯರ ಪ್ರತಿಭಟನೆ
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ನರೇಲಿ ಬೈಪಾಸ್ ಸುತ್ತಮುತ್ತಲಿನ ನೂರಾರು ನಿವಾಸಿಗಳು ಮತ್ತು ಪ್ರಯಾಣಿಕರು ಅಪಘಾತದ ಸ್ಥಳಕ್ಕೆ ಆಗಮಿಸಿ, ಸತತವಾಗಿ ನಡೆಯುತ್ತಿರುವ ಅಪಘಾತಗಳು ಮತ್ತು ವೇಗದ ವಾಹನಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಈ ವೇಳೆ ಮೃತ ಮಹಿಳೆಯ ಕುಟುಂಬಕ್ಕೆ ನ್ಯಾಯ ಸಿಗಬೇಕು ಜೊತೆಗೆ ಪರಾರಿಯಾಗಿರುವ ಚಾಲಕನನ್ನು ಕೂಡಲೇ ಬಂಧಿಸಬೇಕು ಎಂದು ಘೋಷಣೆಯನ್ನು ಕೂಗಿದರು.
ಘಟನಾ ಸ್ಥಳಕ್ಕೆ ಅಲ್ವಾರ್ ಗೇಟ್ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸಿದರು. ಆದಾಗ್ಯೂ, ಪ್ರತಿಭಟನಾ ನಿರತ ಗ್ರಾಮಸ್ಥರನ್ನು ಬಂದ್​​ ಮಾಡಿದ ಹೆದ್ದಾರಿಯನ್ನು ತೆರವುಗೊಳಿಸುವುದರ ಜೊತೆಗೆ ರಸ್ತೆ ಸುರಕ್ಷತೆಯ ವಿಷಯದ ಬಗ್ಗೆ ಆಡಳಿತ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ಎಸ್‌ಎಚ್‌ಒ ನರೇಂದ್ರ ಝಾಕರ್ ಭರವಸೆ ನೀಡಿದರು (ಏಜೆನ್ಸೀಸ್​).