ಪೆಲಟ್ ಗನ್ ಬಳಕೆ ಬಗ್ಗೆ ಸುಪ್ರೀಂ ಕೋರ್ಟ್ ಸ್ಪಷ್ಟನೆ
- ಜಂತರ್ ಮಂತರ್ ಪ್ರತಿಭಟನೆ ನಿಯಂತ್ರಿಸಲು ಪೆಲೆಟ್ ಗನ್ ಬಳಕೆ
- ಪೊಲೀಸರು ತುರ್ತು ಪರಿಸ್ಥಿತಿಯಲ್ಲಿ ಪೆಲೆಟ್ ಗನ್ಅನ್ನು ಬಳಸಬಹುದು
- ಪೆಲಟ್ ಗನ್ ಬಳಕೆ ಬಗ್ಗೆ ಸುಪ್ರೀಂ ಕೋರ್ಟ್ ಸ್ಪಷ್ಟನೆ
ನವದೆಹಲಿ: ನೀಟ್ ಅಕ್ರಮ ವಿರೋಧಿಸಿ ದೆಹಲಿಯಲ್ಲಿ ನಡೆದ ಪ್ರತಿಭಟನೆ ವೇಳೆ ರ‍್ಯಾಪಿಡ್ ಅ್ಯಕ್ಷನ್ ಪೋರ್ಸ್ನವರು ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ನಿಂದ ದಾಳಿ ನಡೆಸಿದ್ದನ್ನು ವಿರೋಧಿಸಿ ಸುಪ್ರೀಂ ಕೋರ್ಟ್ (Supreme Court on Pellet Gun) ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಗುರುವಾರ (ಜು.30) ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಸಿಜೆಐ ಸೂರ್ಯಕಾಂತ್, ಜ. ಜ್ಯೋಮಾಲಾ ಬಾಗ್ಚಿ ಹಾಗೂ ಜ. ವಿ. ಮೋಹನ್ ಅವರ ನ್ಯಾಯಪೀಠ, ಅತ್ಯಂತ ತುರ್ತು ಪರಿಸ್ಥಿತಿಯಲ್ಲಿ ಪೆಲೆಟ್ಗಳನ್ನು ಪೊಲೀಸರು ಬಳಸಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಜು.20 ರಂದು ಜಂತರ್-ಮಂತರ್ನಲ್ಲಿ ನಡೆದಿದ್ದ ಪ್ರತಿಭಟನೆ ತೀವ್ರ ಸ್ವರೂಪವನ್ನು ಪಡೆದುಕೊಂಡ ಹಿನ್ನಲೆ ರ‍್ಯಾಪಿಡ್ ಅ್ಯಕ್ಷನ್ ಪೋರ್ಸ್ ಅಧಿಕಾರಿಗಳು ಪ್ರತಿಭಟನಾಕಾರರ ಮೇಲೆ ಪೆಲೆಟ್ಗಳನ್ನು ಪ್ರಯೋಗಿಸುವಂತೆ ಆದೇಶ ನೀಡಿದ್ದರು.
ಲಾಠಿಗೆ ಬಗ್ಗದಿದ್ದರೆ ಮಾತ್ರ ಪೆಲೆಟ್ ಬಳಕೆ!
ಈ ಕುರಿತು ಸುಧೀರ್ಫವಾಗಿ ಮಾತನಾಡಿದ ನ್ಯಾಯಪೀಠ, ಯಾವುದೇ ಪ್ರತಿಭಟನೆಯಿರಲಿ ಅದನ್ನು ಮೊದಲು ಮಾತುಕತೆ ಮೂಲಕ ಸುಧಾರಿಸಿಕೊಳ್ಳಬೇಕು. ನಂತರ ಪ್ರತಿಭಟನೆ ಕೈ ಮೀರಲಿದೆ ಎಂದಾಗ ಲಾಠಿ ಚಾರ್ಜ್ ಮಾಡಬೇಕು. ಆ ನಂತರ ಅಶ್ರುವಾಯುವನ್ನು ಬಳಸಬೇಕು. ಏನೂ ಮಾಡಿದರೂ ಉದ್ವಿಗ್ನತೆ ಕಡಿಮೆಯಾಗುತ್ತಿಲ್ಲ ಎಂಬ ಪಕ್ಷದಲ್ಲಿ ಮಾತ್ರ ಪೆಲೆಟ್ ಗನ್ಗಳನ್ನು ಬಳಸಬಹುದು ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.
ಅರ್ಜಿದಾರರಿಗೆ ಕೋರ್ಟ್ ಪ್ರಶ್ನೆ!
ಭಾರತದಲ್ಲಿ ಪ್ರತಿಭಟನೆ ನಿರತರ ಮೇಲೆ ಪೆಲೆಟ್ ಗನ್ಗಳನ್ನು ಪ್ರಯೋಗಿಸಬಾರದೆಂದು ನಿವೃತ್ತ ಐಪಿಎಸ್ ಅಧಿಕಾರಿ ಯಶೋವರ್ಧನ್ ಆಜಾದ್, ಅರ್ಜಿ ಸಲ್ಲಿಸಿದ್ದು, ನ್ಯಾಯಪೀಠ ಏಕೆ ಪೆಲೆಟ್ ಗನ್ಗಳನ್ನು ಬಳಸಬಾರದೆಂದು ಅರ್ಜಿದಾರರಿಗೆ ಪ್ರಶ್ನಿಸಿದೆ.
ಹಾಗೆಯೇ ಜು. 20 ರಂದು ಪೆಲಟ್ ಗನ್ನಿನ ಗುಂಡಿನಿಂದ ಗಾಯಗೊಂಡಿರುವವರಿಗೆ ಸೂಕ್ತ ಚಿಕಿತ್ಸೆ ನೀಡಬೇಕೆಂದು ಕೋರ್ಟ್ ಆದೇಶಿಸಿದೆ. ಇದೇ ಸಂದರ್ಭದಲ್ಲಿ ಸಿಆರ್ಪಿಎಫ್ ಸಿಬ್ಬಂದಿಗಳು ಜು.20 ರಂದು ಜಂತರ್-ಮಂತರ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಎಲ್ಲಾ ರೀತಿಯ ಕಾನೂನನ್ನು ಪಾಲಿಸಲಾಗಿದ್ದು, ಪ್ರತಿಭಟನೆ ಇನ್ನೇನು ಕೈಮೀರಿ ಹೋಗಲಿದೆ ಎನ್ನುವಾಗ ಪೆಲೆಟ್ ಗನ್ನನ್ನು ಬಳಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದೆ, (ಏಜನ್ಸೀಸ್).