ಸಾಂದರ್ಭಿಕ ಚಿತ್ರ 
ದೇಶ

100 ರೂ. ಮೌಲ್ಯದ ಗೋದಿ ಕಳ್ಳತನ; 45 ವರ್ಷಗಳ ಬಳಿಕ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು | Arrest

ಭೋಪಾಲ್: ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ 1980ರಲ್ಲಿ ಕೃಷಿ ಭೂಮಿಯಿಂದ 100 ರೂ. ಮೌಲ್ಯದ ಗೋದಿಯನ್ನು ಕಳ್ಳತನ ಮಾಡಿದ ಆರೋಪದ ಮೇಲೆ 45 ವರ್ಷಗಳ ಬಳಿಕ ಶನಿವಾರ(ಫೆ. 07) ವ್ಯಕ್ತಿಯೊಬ್ಬನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಸಲೀಂ ಶೇಖ್ 45 ವರ್ಷಗಳ ಗೋದಿ ಕಳ್ಳತನ ಆರೋಪ ಮೇಲೆ ಬಂಧಿತನಾದ ವೃದ್ಧ. ಧಾರ್ ಜಿಲ್ಲೆಯ ಬಾಗ್ ಪ್ರದೇಶದಲ್ಲಿ ಖಾರ್ಗೋನ್ ಜಿಲ್ಲಾ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬಂಧಿತ ಶೇಖ್ 20 ವರ್ಷದವರಿದ್ದಾಗ 1980ರಲ್ಲಿ ಬಾಲಸಮುದ್ ಕಾಕಡ್ ಗ್ರಾಮದಲ್ಲಿ ಕಳ್ಳತನ ಮಾಡಿದ್ದರು. ಕೇಸ್ ಮುಚ್ಚಿಹೋಗಿದೆ ಎಂದುಕೊಂಡಿದ್ದರು. ಆದರೆ ಈಗ 65 ವರ್ಷ ವಯಸ್ಸಿನಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, 1980 ರಲ್ಲಿ ಬಾಲಸಮುದ್ ಕಾಕಡ್ ಗ್ರಾಮದಲ್ಲಿ ಶೇಖ್ ಕಳ್ಳತನ ಮಾಡಿದಾಗ ಅವನಿಗೆ 20 ವರ್ಷ. ಈಗ ಆರೋಪಿಯನ್ನು ಬಂಧಿಸಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಕೋರ್ಟ್ ಅವರಿಗೆ ಜಾಮೀನು ನಿರಾಕರಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಇನ್ನೊಬ್ಬ ಆರೋಪಿ ಸಲೀಂ ಮೊಹಮ್ಮದ್ ಎಂಬುವರು ತಲೆ ಮರೆಸಿಕೊಂಡಿದ್ದಾರೆ, ನ್ಯಾಯಾಲಯ ಅವರಿಗೆ ಬಂಧನ ವಾರಂಟ್ ಹೊರಡಿಸಿದೆ ಎಂದು ಹೇಳಿದ್ದಾರೆ. 

45 ವರ್ಷಗಳ ಬಳಿಕ ಪತ್ತೆ ಹಚ್ಚಿದ್ದೇಗೆ?

45 ವರ್ಷಗಳ ಹಿಂದಿ ಗೋದಿ ಕಳ್ಳತನ ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು, ಗುಪ್ತಚರ ಮಾಹಿತಿ ಹಿನ್ನೆಲೆ ದೇವಾಸ್ ಜಿಲ್ಲೆಯಲ್ಲಿ ಮೊಹಮ್ಮದ್ ಬಗ್ಗೆ ಪತ್ತೆ ಹಚ್ಚಲಾಗಿತ್ತು. ಆದ್ಯಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಬಂಧಿಸಲು ಮನೆಗೆ ತೆರಳಿದಾಗ ಈಗಾಗಲೇ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರಿಗೆ ಕುಟುಂಬಸ್ಥರು ಹೇಳಿದ್ದಾರೆ.
ಹಾಗೇ ಸಲೀಂ ಶೇಖ್ ಇನ್ನು ಜೀವಂತವಾಗಿದ್ದಾರೆ. ಧಾರ್ ಜಿಲ್ಲಯೆ ಭಾಗ್ ಪ್ರದೇಶದಲ್ಲಿ ವಾಸವಿದ್ದಾರೆ ಎಂದು ಮೊಹಮ್ಮದ್ ಅವರ ಸಂಬಂಧಿಕರು ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ಕಾರ್ಯಪ್ರವೃತ್ತರಾದ ಪೊಲೀಸರು ಧಾರ್‌ನಿಂದ ಆರೋಪಿ ವೃದ್ಧ ಶೇಖ್‌ ಅವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).