Jhalmuri controversy (ಚಿತ್ರ X) 
ದೇಶ

ಮೋದಿ ಭೇಟಿಯಿಂದ ಝಲ್ಮುರಿ ಫೇಮಸ್...ರಾತ್ರೋರಾತ್ರಿ ಸೆನ್ಸೇಷನ್ ಆದ ಆ ಪುಟ್ಟ ಅಂಗಡಿಯವನ ಕಥೆ ಇಲ್ಲಿದೆ! Jhalmuri controversy

ಪ್ರಮುಖ ಮುಖ್ಯಾಂಶಗಳು

  • ರಸ್ತೆ ಬದಿಯ ಸಾಧಾರಣ ಅಂಗಡಿಯೊಂದರಲ್ಲಿ ಝಲ್ಮುರಿ ಸವಿದ ಪ್ರಧಾನಿ ನರೇಂದ್ರ ಮೋದಿ
  • ಪಫ್ಡ್ ರೈಸ್, ಮಸಾಲೆಗಳು ಮತ್ತು ಹಸಿರು ಮೆಣಸಿನಕಾಯಿಗಳಿಂದ ತಯಾರಿಸಿದ ಜನಪ್ರಿಯ ಬಂಗಾಳಿ ತಿಂಡಿ
  • ಈ ಸಂದರ್ಭದಲ್ಲಿ ಫೋಟೋ ಮತ್ತು ವಿಡಿಯೋವನ್ನು ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ
  • ಕೆಲವೇ ಗಂಟೆಗಳಲ್ಲಿ ಸುಮಾರು 100 ಮಿಲಿಯನ್​ ವೀಕ್ಷಣೆಯನ್ನು ಪಡೆದುಕೊಂಡಿದೆ ಎಂದು ವರದಿಯಾಗಿದೆ
ಕೋಲ್ಕತ್ತಾಪಶ್ಚಿಮ ಬಂಗಾಳದ ಚುನಾವಣಾ ಕಣದಲ್ಲಿ ಜಿದ್ದಾಜಿದ್ದಿ ಜೋರಾಗಿರುವಾಗಲೇ, ಜಾರ್ಗ್ರಾಮ್‌ನ ಬೀದಿಯೊಂದರಲ್ಲಿ ನಡೆದ ಘಟನೆಯೊಂದು ಇಡೀ ದೇಶದ ಗಮನ ಸೆಳೆದಿದ್ದು, ಪ್ರಧಾನಿ ನರೇಂದ್ರ ಮೋದಿ ತಮ್ಮ ಬಿಡುವಿಲ್ಲದ ಪ್ರಚಾರದ ನಡುವೆ ವಾಹನ ನಿಲ್ಲಿಸಿ, ರಸ್ತೆ ಬದಿಯ ಸಾಧಾರಣ ಅಂಗಡಿಯೊಂದರಲ್ಲಿ ಝಲ್ಮುರಿ (Jhalmuri controversy)  ಸವಿದಿದ್ದು ಈಗ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದೆ.
ಬಿಹಾರದ ಗಯಾ ಮೂಲದವರಾದ ವಿಕ್ರಮ್​ ಕುಮಾರ್​ ಜಾರ್ಗ್ರಾಮ್ ನಲ್ಲಿ ಪುಟ್ಟ ಅಂಗಡಿ ಇಟ್ಟುಕೊಂಡಿದ್ದಾರೆ. ಇಲ್ಲಿಗೆ ಹಠಾತ್ ಭೇಟಿ ನೀಡಿದ ಪ್ರಧಾನಿ ಮೋದಿ, ಪಫ್ಡ್ ರೈಸ್, ಮಸಾಲೆಗಳು ಮತ್ತು ಹಸಿರು ಮೆಣಸಿನಕಾಯಿಗಳಿಂದ ತಯಾರಿಸಿದ ಜನಪ್ರಿಯ ಬಂಗಾಳಿ ತಿಂಡಿ ಝಲ್ಮುರಿಯನ್ನು ಸವಿದರು. ಈ ಸಂದರ್ಭದಲ್ಲಿ ಫೋಟೋ ಮತ್ತು ವಿಡಿಯೋವನ್ನು ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅದು ಕೆಲವೇ ಗಂಟೆಗಳಲ್ಲಿ ಸುಮಾರು 100 ಮಿಲಿಯನ್​ ವೀಕ್ಷಣೆಯನ್ನು ಪಡೆದುಕೊಂಡಿದೆ ಎಂದು ವರದಿಯಾಗಿದೆ.
ರಾತ್ರೋರಾತಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿರುವ ಯುವಕ ಇಂಡಿಯಾ ಟುಡೇಯೊಂದಿಗೆ ಮಾತನಾಡಿದ್ದು, ಪ್ರಧಾನಿ ನಮ್ಮ ಅಂಗಡಿ ಬಳಿ ಬಂದು ಹೋದ ಬಳಿಕ ಫೋನ್​ ಕರೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ನನ್ನ ಮೊಬೈಲ್​ ಸ್ವಿಚ್​ ಆಫ್​ ಮಾಡಲಾಯಿತು. ತುಂಬಾ ಜನ ನನ್ನ ಅಂಗಡಿಗೆ ಬಂದು ರೀಲ್ಸ್​ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಆದಾಗ್ಯೂ, ಮೋದಿಯವರು ಜಾರ್ಗ್ರಾಮ್‌ನ ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೇ ಮುಗಿಸಿ ತೆರಳುವ ಸಮಯದಲ್ಲಿ ಯಾವುದೇ ಮುನ್ಸೂಚನೆ ನೀಡದೇ ನಮ್ಮ ಶಾಪ್​ ಬಳಿ ನಿಲ್ಲಿಸಿ ಝಲ್ಮುರಿ ಖರೀದಿಸಿದರು. ನಂತರ ನನ್ನ ಹೆಸರು, ನನ್ನ ತಂದೆಯ ಹೆಸರು ಮತ್ತು ನನ್ನ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸಿದರು ಎಂದು ವಿಕ್ರಮ್ ಕುಮಾರ್ ತಿಳಿಸಿದ್ದಾರೆ.
ವಿಕ್ರಮ್ ಅವರ ಕುಟುಂಬವು ಸುಮಾರು 12 ವರ್ಷಗಳ ಹಿಂದೆ ಬಿಹಾರದಿಂದ ಜಾರ್ಗ್ರಾಮ್‌ಗೆ ಸ್ಥಳಾಂತರಗೊಂಡಿತು. ಸಣ್ಣ ರಸ್ತೆಬದಿಯ ವ್ಯವಸ್ಥೆಗಳ ನಡುವೆ ಸ್ಥಳಾಂತರಗೊಂಡ ನಂತರ, ರಾಜ್ ಕಾಲೇಜ್ ಮೋರ್ ಬಳಿ ಝಲ್ಮುರಿ ಮಾರಾಟ ಮಾಡುವ ಜೀವನೋಪಾಯವನ್ನು ಕಂಡುಕೊಂಡರು.  ಕಾಲಾನಂತರದಲ್ಲಿ, ಕುಟುಂಬ ಝಾರ್‌ಗ್ರಾಮ್‌ನ ಬಚುರ್ದೋಹಾ ಪ್ರದೇಶದಲ್ಲಿ ಮನೆ ನಿರ್ಮಿಸಲು ಪ್ರಾರಂಭಿಸಿತು, ಇದಕ್ಕೆ ಹೆಚ್ಚಿನ ಹಣವನ್ನು ಸಣ್ಣ ವ್ಯವಹಾರದ ಮೂಲಕ ಪಡೆಯಲಾಯಿತು.

ಝಲ್ಮುರಿ ಸವಿದ ಮೋದಿ

ಪಶ್ಚಿಮ ಬಂಗಾಳದ ಜಾರ್ಗ್ರಾಮ್‌ನಲ್ಲಿ ಆಯೋಜಿಸಲಾಗಿದ್ದ ಬೃಹತ್ ಚುನಾವಣಾ ಪ್ರಚಾರ ಸಭೆಯನ್ನು ಮುಗಿಸಿ ವಾಪಸಾಗುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ಹಠಾತ್ ಆಗಿ ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿ ರಸ್ತೆಬದಿಯ ಸಣ್ಣ ಅಂಗಡಿಯೊಂದಕ್ಕೆ ಭೇಟಿ ನೀಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಬಂಗಾಳದ ಅತ್ಯಂತ ಜನಪ್ರಿಯ ತಿಂಡಿಯಾದ ಝಲ್ಮುರಿ ಅಂಗಡಿಯ ಮುಂದೆ ನಿಂತ ಪ್ರಧಾನಿ, ಅಲ್ಲಿನ ಸ್ಥಳೀಯ ಸಂಸ್ಕೃತಿಯೊಂದಿಗೆ ಬೆರೆತರು. ಅಂಗಡಿಯ ಮಾಲೀಕರು ಮೋದಿ ಸಮ್ಮುಖದಲ್ಲೇ ತಾಜಾ ಝಲ್ಮುರಿಯನ್ನು ಸಿದ್ಧಪಡಿಸಿದರು. ಇದನ್ನು ಕುತೂಹಲದಿಂದ ಗಮನಿಸಿದ ಪ್ರಧಾನಿ ಮೋದಿ ತಿಂಡಿಯ ರುಚಿ ನೋಡಿದರು.
ಇದು ಕೇವಲ ತಿಂಡಿ ಸವಿಯುವುದಕ್ಕೆ ಸೀಮಿತವಾಗದೆ, ಅಂಗಡಿಯ ಮಾಲೀಕರು ಮತ್ತು ಸುತ್ತಮುತ್ತಲ ನಿವಾಸಿಗಳೊಂದಿಗೆ ಅತ್ಯಂತ ಸಹಜವಾಗಿ ಸಂವಹನ ನಡೆಸಿದರು. ಅವರ ದೈನಂದಿನ ಜೀವನೋಪಾಯ ಮತ್ತು ಕೆಲಸದ ಬಗ್ಗೆ ವಿಚಾರಿಸಿದರು. ಈ ಅನಿರೀಕ್ಷಿತ ಭೇಟಿಯಿಂದ ಉತ್ತೇಜಿತರಾದ ಸ್ಥಳೀಯರು ಮೋದಿ, ಮೋದಿ ಮತ್ತು ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗುವ ಮೂಲಕ ಆ ಪ್ರದೇಶದಲ್ಲಿ ಹಬ್ಬದ ವಾತಾವರಣ ನಿರ್ಮಿಸಿದರು. ಬಂಗಾಳದಲ್ಲಿ ಏಪ್ರಿಲ್ 23 ಮತ್ತು ಏಪ್ರಿಲ್ 29 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ (ಏಜೆನ್ಸೀಸ್​​).