Narendra Modi 
ದೇಶ

ಚಳಿಗಾಲದಲ್ಲಿ ಹಿಮಾಲಯ ಪ್ರವಾಸ ಕೈಗೊಳ್ಳಿ : ಪ್ರಾಧಾನಿ ಮೋದಿ ಸಲಹೆ..Narendra Modi

ನವದೆಹಲಿ :  ಚಳಿಗಾಲದಲ್ಲಿನ ರಜಾ ಪ್ರಯಾಣ ಪಟ್ಟಿಯಲ್ಲಿ ಹಿಮಾಲಯವನ್ನು ಸೇರಿಸಿಕೊಳ್ಳಿ.  ಹಿಮಾಲಯದ ಮನಮೋಹಕತೆಯನ್ನು ಆಸ್ವಾಧಿಸಿ ಎಂದು ನರೇಂದ್ರ ಮೋದಿ (  Narendra Modi)  ಅವರು ಹೇಳಿದ್ದಾರೆ.
ಭಾನುವಾರ ನಡೆದ 128 ನೇ ಮನ್ ಕಿ ಬಾತ್ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಜೀವನದಲ್ಲಿ ಒಮ್ಮೆಯಾದರೂ ಹಿಮಾಲಯಕ್ಕೆ ಪ್ರವಾಸ ಮಾಡಿ ಅಲ್ಲಿನ ಮನಮೋಹಕತೆಯನ್ನು ಆಸ್ವಾಧಿಸಿಸಬೇಕು. ಈ ಚಳಿಗಾಲಯದ ರಜೆಯ ಅವಧಿಯಲ್ಲಿ ಹಿಮಾಲಯದ ಶ್ರೇಣಿಗಳನ್ನು ನೋಡಿಬನ್ನಿ ಎಂದು ಸಲಹೆ ನೀಡಿದ್ದಾರೆ.
ಮೊದಲು ಆದಿ ಕೈಲಾಶ ಪರ್ವತವನ್ನು ಕೇವಲ 2000 ಜನ ನೋಡಲು ಹೊಗುತ್ತಿದ್ದರು. ಆದರೆ ಈಗ ಮೂರು ವರ್ಷದಿಂದ ಈ ಸಂಖ್ಯೆ 30000 ವನ್ನು ದಾಟಿದ್ದು ಯುವ ಸಮುದಾಯವು ಧಾರ್ಮಿಕ ತಾಣಗಳತ್ತ ತೆರಳುತ್ತಿರುವುದು ಸಂತಸದ ಸಂಗತಿಯಾಗಿದ್ದು, ಭಾರತದಲ್ಲಿ  ಚಳಿಗಾಲದಲ್ಲಿ ಪ್ರವಾಸೋದ್ಯಮವನ್ನು ವೃದ್ದಿಸಲು ವಿವಿಧ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.
ಈ ಚಳಿಗಾಲವನ್ನು ಸಮರ್ಥವಾಗಿ ಬಳಸಿಕೊಳ್ಳಲಿರುವ ಉತ್ತರಾಖಂಡ ರಾಜ್ಯವು ಮಸ್ಸೂರಿ, ಅವಳಿ, ಚ್ಪೌಟಾ, ಡೇಯರಾ ರಾಜ್ಯಗಳಲ್ಲಿ ಐಸ್ ಕ್ಲೈಂಬಿಂಗ್, ಸ್ನೋ ಬೋರ್ಡಿಂಗ್ ಮೊದಲಾದ ಆಟಗಳನ್ನು ಆಯೋಜಿಸಲಿದೆ ಇದರ ಲಾಭವನ್ನು ಪ್ರವಾಸಿಗರು ಪಡೆಯಬಹುದು. ಭಾರತದಲ್ಲಿ ಪ್ರವಾಸೋದ್ಯಮವನ್ನು ಉತ್ತಮಗೊಳಿಸಲು ಮೂಲಸೌಕರ್ಯಗಳ ಉನ್ನತಿಕರಣದ ಜೊತೆಗೆ ನೂತನ ಹೋಂ ಸ್ಟೇ ನೀತಿಯನ್ನು ರೂಪಿಸಲಾಗುವುದು ಎಂದು ಆಶ್ವಾಸನೆ ನೀಡಿದರು.
ನವೆಂಬರ್ 26 ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಸಂವಿಧಾನ ದಿನವನ್ನು ಆಚರಿಸಲಾಯಿತು, ನವೆಂಬರ್​ 7 ರಂದು ವಂದೇ ಮಾತರಂನ 150 ನೇ ವಾರ್ಷಿಕೋತ್ಸವವನ್ನು ರಾಷ್ಟ್ರವ್ಯಾಪಿ ಕಾರ್ಯಕ್ರಮಗಳ ಮೂಲಕ ಸಂಭ್ರಮಿಸಲಾಯಿತು, ನವೆಂಬರ್ 25 ರಂದು, ಅಯೋಧ್ಯೆಯ ರಾಮ ಮಂದಿರದಲ್ಲಿ ಧರ್ಮ ಧ್ವಜವನ್ನು ಹಾರಿಸದ ಬಗ್ಗೆ ಸಹ ಮಾತನಾಡಿದರು.
ಐಎನ್ಎಸ್ ಮಾಹೆಯ ಭಾರತೀಯ ನೌಕಾಪಡೆಯ ಸೇರ್ಪಡೆ, ವಾಯುಯಾನ ವಲಯದಲ್ಲಿ ನಿರ್ವಹಣೆ, ದುರಸ್ತಿ ಮತ್ತು ಪರೀಕ್ಷೆಯಲ್ಲಿ ಯುವಜನರ ಉತ್ಸಾಹ ಮತ್ತು ವಿಜ್ಞಾನಿಗಳ ಸಮರ್ಪಣೆಯನ್ನು ನೋಡಿದಾಗಲೆಲ್ಲಾ ಹೃದಯ ತುಂಬಿ ಬರುತ್ತದೆ ಎಂದು ಹೇಳಿದ್ದಾರೆ.