ಪ್ರಧಾನಿ ಮೋದಿ ಮತ್ತು ಬೆಂಜಮಿನ್ ನೆತನ್ಯಾಹು
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(PM Modi) ಫೆಬ್ರವರಿ 25 ರಿಂದ ಎರಡು ದಿನಗಳ ಕಾಲ ಇಸ್ರೇಲ್‌ಗೆ ಭೇಟಿ ನೀಡಲಿದ್ದಾರೆ ಎಂದು ಸೋಮವಾರ(ಫೆ. 16) ವರದಿಯಾಗಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಅದನ್ನು ಖಚಿತ ಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, "ಸಂಸತ್ತಿನ ಭಾಷಣ ಶೀಘ್ರದಲ್ಲೇ ಆರಂಭವಾಗಲಿದೆ. ಮುಂದಿನ ವಾರ ಇಲ್ಲಿಗೆ ಯಾರು ಬರಲಿದ್ದಾರೆ? ನರೇಂದ್ರ ಮೋದಿ. ಇಸ್ರೇಲ್ ಮತ್ತು ಭಾರತದ ನಡುವಿನ ಅದ್ಭುತ ಮೈತ್ರಿ, ಮತ್ತು ನಾವು ಎಲ್ಲಾ ರೀತಿಯ ಸಹಕಾರದ ಬಗ್ಗೆ ಚರ್ಚಿಸಲಿದ್ದೇವೆ ಎಂದು ಹೇಳಿದ್ದಾರೆ.
ನಿಮಗೆ ತಿಳಿದಿದೆ ಭಾರತವು ಒಂದು ಸಣ್ಣ ದೇಶವಲ್ಲ. ಇದು 1.4 ಬಿಲಿಯನ್ ಜನರನ್ನು ಹೊಂದಿರುವ ದೇಶ. ಭಾರತವು ಅತ್ಯಂತ ಶಕ್ತಿಶಾಲಿಯಾದ ಮತ್ತು ಅತ್ಯಂತ ಜನಪ್ರಿಯವಾದ ದೇಶ ಎಂದು ನೆತನ್ಯಾಹು ಬಣ್ಣಿಸಿದ್ದಾರೆ.
ಇಸ್ರೇಲ್-ಗಾಜಾ ಯುದ್ಧಕ್ಕೆ ಭಾರತ ಯಾವಾಗಲೂ ಎರಡು-ದೇಶಗಳ ಪರಿಹಾರಕ್ಕಾಗಿ ಕರೆ ನೀಡಿದೆ. ಅದ್ಯಾಗೂ ಭಾರತ ಟೆಲ್ ಅವಿವ್‌ನೊಂದಿಗೆ ಪರಸ್ಪರ ಪ್ರಯೋಜನಕಾರಿ ಕಾರ್ಯತಂತ್ರದ ಪಾಲುದಾರಿಕೆಯನ್ನು ಸಹ ಉಳಿಸಿಕೊಂಡಿದೆ.
ಕಳೆದ ವರ್ಷ ಪ್ರಧಾನಿ ಮೋದಿ ಮತ್ತು ನೆತನ್ಯಾಹು ದೂರವಾಣಿ ಸಂಭಾಷಣೆ ನಡೆಸಿದ್ದರು ಮತ್ತು ಇಬ್ಬರೂ ಪರಸ್ಪರ ಲಾಭಕ್ಕಾಗಿ ಈ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಪುನರುಚ್ಚರಿಸಿದ್ದರು (ಏಜೆನ್ಸೀಸ್).