ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ 
ದೇಶ

ಡ್ರಗ್ಸ್ ಮುಕ್ತ ದೇಶ, 1 ಕೋಟಿ ಯುವಕರಿಗೆ ಎಐ ಕೌಶಲ್ಯ ತರಬೇತಿ... ಕೆಂಪುಕೋಟೆಯಲ್ಲಿ 'ನಮೋ' ಭಾಷಣದ ಮುಖ್ಯಾಂಶಗಳು ಇಲ್ಲಿವೆ

ಪ್ರಮುಖ ಮುಖ್ಯಾಂಶಗಳು

  • ಐತಿಹಾಸಿಕ ಕೆಂಪುಕೋಟೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ
  • ಸತತ 13ನೇ ಬಾರಿಗೆ ಧ್ವಜಾರೋಹಣ ನೆರವೇರಿಸುವ ಮೂಲಕ ಶುಭಕೋರಿದ ಪ್ರಧಾನಿ ನರೇಂದ್ರ ಮೋದಿ
  • ಭಾಷಣದಲ್ಲಿ ದೇಶಕ್ಕೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳನ್ನೇ ಹಂಚಿಕೊಂಡ ಮೋದಿ
ನವದೆಹಲಿ: ಐತಿಹಾಸಿಕ ಕೆಂಪುಕೋಟೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ಸತತ 13ನೇ ಬಾರಿಗೆ ಧ್ವಜಾರೋಹಣ ನೆರವೇರಿಸುವ ಮೂಲಕ ಶುಭಕೋರಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಜನತೆಯನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಹಲವು ಪ್ರಮುಖ ವಿಚಾರಗಳನ್ನು ಹಂಚಿಕೊಂಡರು.

2047ರ ವೇಳೆಗೆ ವಿಕಸಿತ ಭಾರತದ ಸಂಕಲ್ಪ

ನಮ್ಮ ಕನಸುಗಳು ಮತ್ತು ಸಂಕಲ್ಪಗಳು ದೊಡ್ಡದಾಗಿದ್ದಾಗ ಮಾತ್ರವೇ ದೇಶದ ಸಾಮರ್ಥ್ಯವೂ ಉನ್ನತ ಮಟ್ಟಕ್ಕೇರುತ್ತದೆ ಎಂದ ಪ್ರಧಾನಿ, ಭಾರತವು ಹೊಸ ಎತ್ತರಗಳನ್ನು ತಲುಪಲು ದೊಡ್ಡ ಕನಸುಗಳನ್ನು ಕಾಣುತ್ತಿದೆ. 2047ರ ವೇಳೆಗೆ ಭಾರತವನ್ನು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ನಾನು ಶ್ರಮಿಸುತ್ತೇನೆ. ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತವು ಅಭಿವೃದ್ಧಿ ಹೊಂದಿದ ದೇಶವಾದಾಗ ಇಡೀ ಜಗತ್ತೇ ನಮ್ಮ ದೇಶವನ್ನು ತಿರುಗಿ ನೋಡುವ ಸಮಯ ಬರುವುದು ಖಚಿತ. ಕಳೆದ 12 ವರ್ಷಗಳಿಂದ ಪ್ರತಿಯೊಬ್ಬ ಭಾರತೀಯನೂ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದರು.
ನಮ್ಮ ಕನಸುಗಳು ಮತ್ತು ಸಂಕಲ್ಪಗಳು ದೊಡ್ಡದಾಗಿದ್ದಾಗ ಮಾತ್ರವೇ ದೇಶದ ಸಾಮರ್ಥ್ಯವೂ ಉನ್ನತ ಮಟ್ಟಕ್ಕೇರುತ್ತದೆ ಎಂದ ಪ್ರಧಾನಿ, ಭಾರತವು ಹೊಸ ಎತ್ತರಗಳನ್ನು ತಲುಪಲು ದೊಡ್ಡ ಕನಸುಗಳನ್ನು ಕಾಣುತ್ತಿದೆ. ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತವು ಅಭಿವೃದ್ಧಿ ಹೊಂದಿದ ದೇಶವಾದಾಗ ಇಡೀ ಜಗತ್ತೇ ನಮ್ಮ ದೇಶವನ್ನು ತಿರುಗಿ ನೋಡುವ ಸಮಯ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ಭಾಷಣದ ಪ್ರಮುಖ ಮುಖ್ಯಾಂಶಗಳು

  • ದೇಶದಲ್ಲಿ 25 ಕೋಟಿ ಜನ ಬಡತನದಿಂದ ನಿರ್ಮೂಲನೆ
  • ಆಧುನಿಕ ಮೂಲಸೌಕರ್ಯಕ್ಕಾಗಿ ದೇಶವ್ಯಾಪಿ ಮೆಟ್ರೋ ಸೇವೆಗಳ ವಿಸ್ತರಣೆ
  • 700 ನಗರಗಳಲ್ಲಿ ಪೈಪ್​ಗ್ಯಾಸ್​ ಸಂಪರ್ಕ
  • ಪರಮಾಣು ಕ್ಷೇತ್ರದಲ್ಲಿ ಆತ್ಮನಿರ್ಭರ ಯಶಸ್ಸು
  • 2047ರೊಳಗೆ 100 ಗಿಗಾ ವ್ಯಾಟ್​ ವಿದ್ಯುತ್​ ಉತ್ಪಾದನೆಯ ಗುರಿ
  • ಒಂದು ವರ್ಷದಲ್ಲಿ 1 ಕೋಟಿ ಯುವಕರಿಗೆ ಎಐ ಕೌಶಲ್ಯ ತರಬೇತಿ
  • ಭಾರತವನ್ನು ಡ್ರಗ್ಸ್ ಮುಕ್ತ ದೇಶ
  • ಪರೀಕ್ಷೆಗಾಗಿ ಯುವಕರಿಗೆ ಉಚಿತ ಆನ್​ಲೈನ್​ ಕೋಚಿಂಗ್​
  • ರಕ್ಷಣಾ ಉತ್ಪಾದನೆಯು 12 ವರ್ಷಗಳಲ್ಲಿ 4 ಪಟ್ಟು ಹೆಚ್ಚು
  • ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಯೂರಿಯಾ, ಗ್ಯಾಸ್​ ಲಭ್ಯ
  • ವಿಶ್ವದ 5 ಪ್ರಮುಖ ಬ್ಯಾಂಕ್​ಗಳಲ್ಲಿ ಭಾರತ ಇರಬೇಕು
  • ಈಗಾಗಲೇ 40 ದೇಶಗಳೊಂದಿಗೆ ಮುಕ್ತ ವ್ಯಾಪಾರ
  • ಕಳೆದ 10ರಿಂದ 12 ವರ್ಷಗಳಲ್ಲಿ 650 ವಿಶ್ವವಿದ್ಯಾಲಯಗಳ ಸೇರ್ಪಡೆ
  • ವೈದ್ಯಕೀಯ ಸೀಟುಗಳು ಈಗ 850ಕ್ಕೆ ಏರಿಕೆ
  • ಭಾರತದಲ್ಲಿ ಈಗ 2.5 ಲಕ್ಷಕ್ಕೂ ಹೆಚ್ಚು ನೋಂದಾಯಿತ ಸ್ಟಾರ್ಟ್‌ಅಪ್‌ಗಳು
  • ರಾಜಕೀಯ ಪಕ್ಷಗಳು ಒಗ್ಗೂಡಿ ರಾಜ್ಯ ವಿಧಾನಸಭೆಗಳು ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಪ್ರಾತಿನಿಧ್ಯ ಖಚಿತಪಡಿಸಿ