- ಒಂದು ಸಲ ವೈಯಕ್ತಿಕವಾಗಿ ತಮ್ಮೊಂದಿಗೆ ಸಭೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಕೇಳಿಕೊಂಡಿದ್ದಾರೆ
- ಸುಂಕಗಳು, ತೈಲ ಆಮದು ಮತ್ತು ಅಪಾಚೆ ಹೆಲಿಕಾಪ್ಟರ್ ಖರೀದಿಗಳ ಬಗ್ಗೆಯೂ ಉಲ್ಲೇಖಿಸಿದ್ದರು
- ನನ್ನ ಬಳಿ ಬಂದು ಸರ್, ನಾನು ನಿಮ್ಮನ್ನು ಭೇಟಿಯಾಗಬಹುದೇ? ಎಂದು ಕೇಳಿದರು
- ನನ್ನ ಮತ್ತು ಅವರ ನಡುವೆ ಉತ್ತವ ಭಾಂದವ್ಯವಿದೆ ಎಂದು ಹೇಳಿದ ಡೊನಾಲ್ಡ್ ಟ್ರಂಪ್!
ವಾಷಿಂಗ್ಟನ್ : ಒಂದು ಸಲ ವೈಯಕ್ತಿಕವಾಗಿ ತಮ್ಮೊಂದಿಗೆ ಸಭೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಕೇಳಿಕೊಂಡಿದ್ದು, ಸುಂಕಗಳು, ತೈಲ ಆಮದು ಮತ್ತು ಅಪಾಚೆ ಹೆಲಿಕಾಪ್ಟರ್ ಖರೀದಿಗಳ ಬಗ್ಗೆಯೂ ಉಲ್ಲೇಖಿಸಿದ್ದರು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮಂಗಳವಾರ (ಜ.06) ಹೇಳಿದ್ದಾರೆ.
ಹೌಸ್ GOP ಸದಸ್ಯ ರಿಟ್ರೀಟ್‌ನಲ್ಲಿ ಮಾತನಾಡಿದ ಟ್ರಂಪ್, ಪ್ರಧಾನಿ ಮೋದಿ ನನ್ನ ಬಳಿ ಬಂದು ಸರ್, ನಾನು ನಿಮ್ಮನ್ನು ಭೇಟಿಯಾಗಬಹುದೇ? ಎಂದು ಕೇಳಿದರು. ಆಗ ನಾನು ಹೌದು ಎಂದೆ. ನನ್ನ ಮತ್ತು ಅವರ ನಡುವೆ ಉತ್ತವ ಭಾಂದವ್ಯವಿದೆ ಎಂದರು.
ಮುಂದುವರೆದು ಮಾತನಾಡಿದ ಟ್ರಂಪ್, ಪ್ರಧಾನಿ ಮೋದಿಗೆ ನನ್ನ ಮೇಲೆ ಈಗ ಅಷ್ಟೊಂದು ವಿಶ್ವಾಸವಿಲ್ಲ. ನಾವು ಹೆಚ್ಚುವರಿ ಸುಂಕ ವಿಧಿಸಿರುವುದೇ ಇದಕ್ಕೆಲ್ಲಾ ಕಾರಣ ಎನ್ನುವುದು ಎಲ್ಲರಿಗೂ ತಿಳಿದಿದೆ. ಅವರು ಈಗ ನಮ್ಮಿಂದ ಹೆಚ್ಟಿನ ತೈಲವನ್ನು ಖರೀದಿಸುತ್ತಿಲ್ಲ. ರಷ್ಯಾದಿಂದಲೂ ಕಡಿಮೆ ತೈಲವನ್ನು ಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದರು.
ಹಲವು ವರ್ಷಗಳಿಂದ ಬಾಕಿ ಇರುವ ಅಪಾಚೆ ಹೆಲಿಕಾಪ್ಟರ್‌ಗಳ ಮೇಲೆ ಟ್ರಂಪ್ ಸರ್ಕಾರ ಶೇ. 50 ರಷ್ಟು ಸುಂಕ ವಿಧಿಸಿರುವುದು ಜಾಗತಿಕ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನ ಮೂಡಿಸಿದ್ದು, ಪ್ರಮುಖವಾಗಿ ಇಂತಹ ಕ್ರಮಗಳು ರಷ್ಯಾದೊಂದಿಗೆ ಭಾರತ ಹೊಂದಿರುವ ಇಂಧನ ಸಂಬಂಧವನ್ನು ಗುರಿಯಾಗಿಸಿಕೊಂಡಿದೆ ಎನ್ನುವುದಂತು ಸ್ಪಷ್ಟವಾಗಿದೆ.
ಭಾರತ ಸರ್ಕಾರವು ರಷ್ಯಾದೊಂದಿಗೆ ತೈಲ ಆಮದನ್ನು ಮತ್ತಷ್ಟು ಕಡಿಮೆ ಮಾಡದಿದ್ದರೆ, ಹೆಚ್ಚುವರಿ ದಂಡವನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಪದೇ ಪದೇ ಎಚ್ಚರಿಕೆ ನೀಡಿದ್ದಾರೆ.
ವ್ಯಾಪಾರ ಸಮಸ್ಯೆಗಳ ಜೊತೆಗೆ, ಟ್ರಂಪ್ ಎರಡೂ ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಉಲ್ಲೇಖಿಸಿದ್ದು, ದೀರ್ಘಕಾಲದಿಂದ ಬಾಕಿ ಇರುವ ಮಿಲಿಟರಿ ವಿತರಣೆಗಳ ಬಗ್ಗೆ ಸೂಚಿಸಿದ್ದರು.
ಭಾರತ ಹಲವಾರು ವರ್ಷಗಳಿಂದ ಅಪಾಚೆ ಹೆಲಿಕಾಪ್ಟರ್‌ಗಳಿಗಾಗಿ ಕಾಯುತ್ತಿದೆ. ಆದರೆ, ನಾವು ಅದನ್ನು ಬದಲಾಯಿಸುತ್ತಿದ್ದೇವೆ. ಈಗಾಗಲೇ ಭಾರತ 68 ಅಪಾಚೆಗಳನ್ನು ಆದೇಶಿಸಿದೆ ಎಂದು ಟ್ರಂಪ್ ವಿವರಗಳನ್ನು ನೀಡಿದ್ದಾರೆ (ಏಜೆನ್ಸೀಸ್).