ಪ್ರಧಾನಿ ಮೋದಿ ನೇತೃತ್ವದ ಸಭೆ 
ದೇಶ

LPG ಮತ್ತು ಕಚ್ಚಾತೈಲ ಬಿಕ್ಕಟ್ಟಿನ ಬಗ್ಗೆ ರಾಜ್ಯಗಳೊಂದಿಗೆ ಸಭೆ ನಡೆಸಿದ ಪ್ರಧಾನಿ ಮೋದಿ: ರಾಜ್ಯದ ಪರವಾಗಿ ಸಚಿವ ಕೆ.ಹೆಚ್.ಮುನಿಯಪ್ಪ ಭಾಗಿ

ಬೆಂಗಳೂರು: ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕಾ ನಡೆಸುತ್ತಿರುವ ಯುದ್ಧ ಪರಿಣಾಮ ದೇಶದಲ್ಲಿ ಎಲ್​ಪಿಜಿ ಮತ್ತು ಕಚ್ಚಾತೈಲ ಬಿಕ್ಕಟ್ಟು ಎದುರಾದ ಹಿನ್ನಲೆ ಶುಕ್ರವಾರ(ಮಾ. 27) ರಾಜ್ಯಗಳೊಂದಿಗೆ ಪ್ರಧಾನಿ ಮೋದಿ ವಿಡಿಯೋ ಸಂವಾದ ಮೂಲಕ ಸಭೆ ನಡೆಸಿದ್ದಾರೆ.
ಪ್ರಧಾನಿಯವರ ನೇತೃತ್ವದ ಸಂವಾದದ ಸಭೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ಭಾಗವಹಿಸಿದ್ದರು.
ಸಭೆಯಲ್ಲಿ ಮಾತನಾಡಿರುವ ಪ್ರಧಾನಿ ಮೋದಿ, ಕೋವಿಡ್ ಸಮಯದಲ್ಲಿ ಹೇಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಂತೆ ಕೆಲಸ ಮಾಡಿದವೋ ಅದೇ ರೀತಿ ಈಗಿನ ಯುದ್ಧದ ಸಮಯದಲ್ಲಿ ಎದುರಾಗಿರುವ ಸಮಸ್ಯೆಯನ್ನು ಎದುರಿಸಲು ಬದ್ಧರಾಗಬೇಕು ಎಂದು ಹೇಳಿದ್ದಾರೆ.
ಮುಂದುವರೆದು, ರಾಜ್ಯದಲ್ಲಿ ಅಡಿಗೆ ಅನಿಲ ಸಮಸ್ಯೆಗಳ ಕುರಿತು ಚರ್ಚಿಸಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಬೇಕಾಗುವಷ್ಟು ಅಡಿಗೆ ಅನಿಲವನ್ನು ಪೂರೈಸಲಿದ್ದು ನಾಗರಿಕರು ಆತಂಕ ಪಡುವಂತಿಲ್ಲ ಎಂದು ತಿಳಿಸಿದ್ದಾರೆ.
ಈ ವೇಳೆ ಸಭೆಯಲ್ಲಿ ಮಾತನಾಡಿರುವ ಸಚಿವ ಕೆ.ಹೆಚ್.ಮುನಿಯಪ್ಪ, ಹೋಟೆಲ್​ಗಳಿಗೆ 20% ರಷ್ಟು ಅಡಿಗೆ ಅನಿಲ ನೀಡುತ್ತಿದ್ದು, ಇನ್ನೂ 20%ರಷ್ಟು ಹೆಚ್ಚಿಸಲು ಸಭೆಯಲ್ಲಿ ಒತ್ತಾಯಿಸಿದರು. ಮತ್ತು ಸೋಲಾರ್ ಇಂಧನ ಮತ್ತು ಭಯೋ ಅನಿಲ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಿದ್ದಲ್ಲಿ ಆಯಾ ರಾಜ್ಯಗಳೇ ಇಂಧನ ಉತ್ಪಾದನೆಗೆ ಸಹಕಾರಿಯಾಗಲಿದೆ. ಈ ಕುರಿತು ಕ್ರಮವಹಿಸುವಂತೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.