Ayodhya 
ದೇಶ

ಪ್ರಧಾನಿ ಮೋದಿ ಅವರಿಂದ ಅಯೋಧ್ಯೆ ರಾಮ ಮಂದಿರದ ಮೇಲೆ ಇಂದು ಧ್ವಜಾರೋಹಣ

ಉತ್ತರಪ್ರದೇಶ: ಶ್ರೀರಾಮ ಜನ್ಮಭೂಮಿ ಅಯೋಧ್ಯೆ ರಾಮ ಮಂದಿರದ 161 ಅಡಿ ಎತ್ತರದ ಗೋಪುರದ ಮೇಲೆ ಇಂದು(ನ.25) ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಲಿದ್ದಾರೆ.
ಅಯೋಧ್ಯೆಯಲ್ಲಿ ಇಂದು ರಾಮ ಮಂದಿರದ ಧ್ವಜಾರೋಹಣ (ಧ್ವಜಾರೋಹಣ) ಸಮಾರಂಭಕ್ಕೆ ಅಯೋಧ್ಯೆ ಸಜ್ಜಾಗುತ್ತಿದ್ದು, ಕೆಲವೇ ಗಂಟೆಗಳಲ್ಲಿ ಮಧ್ಯಾಹ್ನ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ. 5 ವರ್ಷದ ಬಳಿಕ ಅಯೋಧ್ಯೆ ರಾಮಮಂದಿರ ನಿರ್ಮಾಣ ಪೂರ್ಣಗೊಂಡಿದೆ.
ಇದರ ಸಂಕೇತವಾಗಿ ಇಂದು ಅಯೋಧ್ಯೆಗೆ ಪ್ರಧಾನಿ ಮೋದಿ ಭೇಟಿ ನೀಡಿ, ರಾಮಮಂದಿರ ಗೋಪುರ ಮೇಲೆ 22 ಅಡಿ ಎತ್ತರದ ಭಗವಾ ಧ್ವಜಾರೋಹಣ ನೆರವೇರಿಸಲಿದ್ದಾರೆ.22 ಅಡಿ ಉದ್ದ ಮತ್ತು 11 ಅಡಿ ಅಗಲವಿರುವ ಭಾಗವ ಧ್ವಜವನ್ನು ರಾಮ ದೇವಾಲಯದ ಗೋಪುರದ ಮೇಲೆ 42 ಅಡಿ ಎತ್ತರದ ಕಂಬದ ಮೇಲೆ ಹಾರಿಸಲಾಗುತ್ತದೆ.
ಈ ಧ್ವಜವು ಗಂಟೆಗೆ 60 ಕಿ.ಮೀ ವೇಗದ ಗಾಳಿ, ಮಳೆ ಮತ್ತು ಸೂರ್ಯನ ಬೆಳಕನ್ನು ತಡೆದುಕೊಳ್ಳಬಲ್ಲದು.ಇದು ನೈಲಾನ್ ಹಗ್ಗ ಮತ್ತು 42 ಅಡಿ ತಿರುಗುವ ಕಂಬದ ಮೇಲೆ ಸ್ವಯಂಚಾಲಿತ ವ್ಯವಸ್ಥೆಯಿಂದ ಕೂಡಿದೆ. ಬೆಂಬಲಿತವಾಗಿದೆ. ಈ ಅದ್ದೂರಿ ಕಾರ್ಯಕ್ರಮದಲ್ಲಿ ಸುಮಾರು 6,000 ರಿಂದ 8,000 ಆಹ್ವಾನಿತರು ಭಾಗವಹಿಸುವ ನಿರೀಕ್ಷೆಯಿದೆ,(ಏಜೆನ್ಸೀಸ್​).