- ಮೇ.4ರಂದು ಸಿಹಿಯೊಂದಿಗೆ, ಝಲ್ಮುರಿ ಹಂಚಿ ಬಿಜೆಪಿ ಗೆಲುವು ಸಂಭ್ರಮಿಸುತ್ತೇವೆ
- ಝಲ್ಮುರಿ ತಿಂದಿದ್ದು ಗಿಮಿಕ್ ಎಂದಿದ್ದ ದೀದಿ ವಿರುದ್ಧ ಮೋದಿ ಲೇವಡಿ
- ಬಂಗಾಳದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದ ಪ್ರಧಾನಿ ಮೋದಿ ವಿಶ್ವಾಸ
ಕೃಷ್ಣನಗರ: ಪಶ್ಚಿಮ ಬಂಗಾಳದ ಚುನಾವಣೆ ಸಲುವಾಗಿ ಪ್ರಧಾನಿ ಮೋದಿಯವರು ಇತ್ತೀಚೆಗೆ ಝಾರಾಗ್ರಾಮ್ನಲ್ಲಿ ಝಲ್ಮುರಿ ಸವಿದಿದ್ದರು. ಈ ಬಗ್ಗೆ ಉಲ್ಲೇಖಿಸಿ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಕಿಡಿಕಾರಿದ್ದರು. ಇದೊಂದು ಮೊದಲೇ ಪ್ಲ್ಯಾನ್ ಮಾಡಿಕೊಂಡಿದ್ದ 'ನಾಟಕ'. ಮೋದಿ ಎಲ್ಲೋ ನಿಂತು ಝಲ್ಮುರಿ ತಿನ್ನುತ್ತಾರೆ ಅಲ್ಲಿಗೆ ಕ್ಯಾಮೆರಾ ಹೇಗೆ ಬರುತ್ತದೆ. ಇದೆಲ್ಲ ಮೊದಲೇ ಕಟ್ಟಿಕೊಂಡ ಕತೆ ಎಂದು ದೀದಿ ಕಿಡಿಕಾರಿದ್ದರು.
ಗುರುವಾರ ಕೃಷ್ಣನಗರದಲ್ಲಿ ನಡೆದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು (PM Modi), ಝಲ್ಮುರಿ ತಿಂದದ್ದನ್ನು ರಾಜಕೀಯ ವಿಚಾರವಾಗಿ ಪರಿವರ್ತಿಸಿದ ವಿಚಾರವಾಗಿ ಕಿಡಿಕಾರಿದರು. 'ಕೆಲವರಿಗೆ ನಾನು ಝಲ್ಮುರಿ ತಿಂದಿರುವುದು ನೋವುಂಟು ಮಾಡಿದೆ' ಎಂದು ಟೀಕೆ ಮಾಡಿದ್ದಾರೆ.
ಬಿಜೆಪಿ ಗೆಲುವು ನಿಶ್ಚಿತ
ಝಲ್ಮುರಿ ತಿಂದದ್ದನ್ನು ನಾನು, ಉರ್ಕೊಂಡಿದ್ದು ಟಿಎಂಸಿ ಎಂದು ಲೇವಡಿ ಮಾಡಿದ ಪ್ರಧಾನಿ ಮೋದಿಯವರು, ಮೇ 4 ರಂದು ಫಲಿತಾಂಶ ಹೊರಬಿದ್ದಾಗ ನಾವು ಕೇವಲ ಸಿಹಿಯನ್ನಷ್ಟೇ ಅಲ್ಲ, ಅದರ ಜೊತೆಗೆ ಝಲ್ ಮುರಿಯನ್ನೂ ಹಂಚಿ ಸಂಭ್ರಮಿಸುತ್ತೇವೆ" ಇದು ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂಬ ಅವರ ದೃಢ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಬಂಗಾಳದ ರಾಜಕೀಯ ಸಮರದಲ್ಲಿ ಈ ಹೇಳಿಕೆಯು ಈಗ ಭಾರಿ ಸಂಚಲನ ಮೂಡಿಸಿದೆ.
ಮತದಾನದ ಮಧ್ಯೆ ಗಲಾಟೆ
ಪಶ್ಚಿಮ ಬಂಗಾಳದಲ್ಲಿ ಮತದಾನದ ಪ್ರಕ್ರಿಯೆ ಮುಂದುವರೆದಿದೆ. ಆದರೆ, ಮುರ್ಷಿದಾಬಾದ್ನಲ್ಲಿ ಟಿಎಂಸಿ ಮತ್ತು ಎಜೆಯುಪಿ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿತ್ತು. ಘಟನೆಯ ನಂತರ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಿ, ಸ್ಥಳದಲ್ಲಿ ಹೆಚ್ಚುವರಿ ಭದ್ರತಾ ತಂಡವನ್ನು ನಿಯೋಜಿಸಿದ್ದರು.
ಕಚ್ಚಾಬಾಂಬ್ ದಾಳಿ
ಬಂಗಾಳದ ಮುರ್ಷಿದಾಬಾದ್ನಲ್ಲಿ ಏಪ್ರಿಲ್ 22ರಂದು ಕಚ್ಚಾ ಬಾಂಬ್ ಎಸೆದ ಘಟನೆ ನಡೆದಿತ್ತು. ದಾಳಿ ನಡೆದ ಸ್ಥಳದಲ್ಲಿದ್ದ ಮಹಿಳೆಯೊಬ್ಬರು ಮಾತನಾಡಿದ್ದಾರೆ. ಕಬೀರ್ ಪಕ್ಷದವರ ವಿರುದ್ಧ ಕಿಡಿಕಾರಿದ್ದಾರೆ. ನಮಾಜ್ ಮಾಡಲೆಂದು ನಾನು ಹೊರಗಡೆ ತೆರಳಿದ್ದೆ. ಇಬ್ಬರು ಯುವಕರು ನನ್ನ ಪಾದದ ಬಳಿ ಕಚ್ಚಾ ಬಾಂಬ್ ಎಸೆದರು. ಹುಮಾಯೂನ್ ಕಬೀರ್ ಅವರ ಪಕ್ಷದ ಕಾರ್ಯಕರ್ತರು ಇದನ್ನು ಮಾಡಿದ್ದಾರೆ ಎಂದು ಸಂತ್ರಸ್ತೆ ಮಾತನಾಡಿದರು, (ಏಜೆನ್ಸೀಸ್).