PM ಆವಾಸ್ ಯೋಜನೆ ಹಗರಣದ ಆರೋಪಿ, ಟಿಎಂಸಿ ನಾಯಕ ಬ್ರಹ್ಮಾನಂದ ಚಕ್ರವರ್ತಿ ಬಂಧನ
- PM ಆವಾಸ್ ಯೋಜನೆ ಹಗರಣದ ಆರೋಪಿ, ಟಿಎಂಸಿ ನಾಯಕ ಬ್ರಹ್ಮಾನಂದ ಚಕ್ರವರ್ತಿ
- ಪೊಲೀಸರ ದಾಳಿ ವೇಳೆ ಬಟ್ಟೆ ರಾಶಿಯೊಳಗೆ ಅಡಗಿದ್ದ ವಿಡಿಯೋ ವೈರಲ್
- ಕಟ್ ಮನಿ ಹಗರಣದ ಆರೋಪಿ TMC ನಾಯಕ ಬ್ರಹ್ಮಾನಂದ ಚಕ್ರವರ್ತಿ
ಹೌರಾ: ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಸಿನಿಮೀಯ ಶೈಲಿಯ ಘಟನೆಯೊಂದು ನಡೆದಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಹಗರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ತೃಣಮೂಲ ಕಾಂಗ್ರೆಸ್ (TMC) ನಾಯಕ ಬ್ರಹ್ಮಾನಂದ ಚಕ್ರವರ್ತಿಯನ್ನು (TMC Brahmananda Chakraborty) ಬಂಧಿಸಲು ಪೊಲೀಸರು ಮನೆಗೆ ಹೋದಾಗ, ಆತ ಸಿಕ್ಕಿಬಿದ್ದ ರೀತಿ ಈಗ ಇಡೀ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಖಾಕಿ ಪಡೆ ಮನೆಗೆ ನುಗ್ಗುತ್ತಿದ್ದಂತೆ ಎಸ್ಕೇಪ್ ಆಗಲು ದಾರಿ ಕಾಣದ ಈ ಟಿಎಂಸಿ ನಾಯಕ, ಮನೆಯಲ್ಲಿದ್ದ ಬಟ್ಟೆಗಳ ರಾಶಿಯ ಕೆಳಗೆ ನುಗ್ಗಿ ಅಡಗಿಕೊಂಡಿದ್ದ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಬಟ್ಟೆ ರಾಶಿಯೊಳಗಿದ್ದ ನಾಯಕನನ್ನ ಎಳೆದೊಯ್ದ ಪೊಲೀಸರು!
ಸ್ಥಳೀಯ ನಾಯಕ ಬ್ರಹ್ಮಾನಂದ ಚಕ್ರವರ್ತಿ ವಿರುದ್ಧ ಆವಾಸ್ ಯೋಜನೆಯಲ್ಲಿ ಭ್ರಷ್ಟಾಚಾರ ನಡೆಸಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ವಶಕ್ಕೆ ಪಡೆಯಲು ಹೌರಾದಲ್ಲಿರುವ ಆತನ ನಿವಾಸಕ್ಕೆ ದಾಳಿ ನಡೆಸಿದ್ದರು. ಪೊಲೀಸರು ಬರುತ್ತಿದ್ದಂತೆ ಕಂಗಾಲಾದ ನಾಯಕ, ಮನೆಯಲ್ಲಿದ್ದ ಬಟ್ಟೆಗಳ ರಾಶಿಯೊಳಗೆ ಅಡಗಿ ಕುಳಿತಿದ್ದ.
ಮನೆ ತುಂಬಾ ಬ್ರಹ್ಮಾನಂದನಿಗಾಗಿ ಜಾಲಾಡಿದ ಪೊಲೀಸರಿಗೆ ಬಟ್ಟೆಗಳ ರಾಶಿಯಲ್ಲಿ ಏನೋ ಅನುಮಾನಾಸ್ಪದವಾಗಿ ಕಂಡಿದೆ. ತಕ್ಷಣ ಪೊಲೀಸರು ಬಟ್ಟೆಗಳನ್ನು ಒಂದೊಂದಾಗಿ ಎಳೆಯಲಾರಂಭಸಿದಾಗ ಒಳಗಿದ್ದ ನಾಯಕನ ಅಸಲಿ ಮುಖ ದರ್ಶನವಾಗಿದೆ. ಪೊಲೀಸರು ಆತನನ್ನು ಬಟ್ಟೆಗಳ ರಾಶಿಯಿಂದ ಹೊರಗೆಳೆದು ಅರೆಸ್ಟ್ ಮಾಡುತ್ತಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ.
ಏನಿದು ಕಟ್ ಮನಿ ಹಗರಣ?
ಟಿಎಂಸಿ ವಿರುದ್ಧ ಹರಿಹಾಯ್ದ ಭಾಜಪಾ!
ಇತ್ತ ಬ್ರಹ್ಮಾನಂದ ಚಕ್ರವರ್ತಿ ವಿಡಿಯೋ ವೈರಲ್ ಆಗುತ್ತಿದ್ದಂತೆ, ಆಡಳಿತ ಪಕ್ಷವಾದ ಬಿಜೆಪಿ, ಟಿಎಂಸಿ ಮೇಲೆ ದಾಳಿ ನಡೆಸಿದೆ. ರಾಜ್ಯದಲ್ಲಿ 15 ವರ್ಷ ಭ್ರಷ್ಟ ಆಡಳಿತ ನಡೆಸಿ, ಜನರನ್ನು ಬಡವರನ್ನಾಗಿಸಿದೆ. ಕೇಂದ್ರ ಸರ್ಕಾರದಿಂದ ಜನರ ಉನ್ನತಿಕರಣಕ್ಕೆ ಬಿಡುಗಡೆಯಾಗಿದ್ದ ಹಣವನ್ನು ಸಹ ಬಿಡದ ಟಿಎಂಸಿ ನಾಯಕರು ಈಗ ಸೀರೆಯಡಿಯಲ್ಲಿ ಅಡಗುವಂತಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ, (ಏಜನ್ಸೀಸ್).