ಸೇನಾ ಕ್ಯಾಂಪ್ ಮೇಲೆ ದಾಳಿಗೆ ಸಂಚು ರೂಪಿಸಿದ ಆರೋಪದಡಿ ಬಂಧಿತನಾದ ಮೀರತ್ ಯುವಕ ಉಜೈದ್ 
ದೇಶ

ಸೇನಾ ಶಿಬಿರ ಉಡಾಯಿಸಲು ಸ್ಕೆಚ್: ಪಾಕ್ ಉಗ್ರರ ನಂಟು ಹೊಂದಿದ್ದ ಮೀರತ್ ಯುವಕ 'ಉಜೈದ್' ಬಂಧನ! Terror Plot

ಉತ್ತರ ಪ್ರದೇಶ: ಭಾರತೀಯ ಸೇನೆಯ ಕ್ಯಾಂಪ್​ ಮೇಲೆ ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಹಿನ್ನಲೆ ಉತ್ತರ ಪ್ರದೇಶದ ಮೀರತ್​ ನಿವಾಸಿ ಉಜೈದ್​ ಎಂಬಾತನನ್ನು ವಶಕ್ಕೆ ಪಡೆದ ಬಗ್ಗೆ ವರದಿಯಾಗಿದೆ.

22 ವರ್ಷದ ಬಂಧಿತ ಆರೋಪಿ ಉಜೈದ್​ ಇನ್​​ಸ್ಟಾಗ್ರಾಂ, ಫೇಸ್​ಬುಕ್​, ಯೂಟ್ಯೂಬ್​ ಸೇರಿದಂತೆ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಭಾರತ ವಿರೋಧಿ ಸಂಗತಿಗಳನ್ನು ವೀಕ್ಷಿಸಿ ಅದನ್ನು ಹಂಚಿಕೊಳ್ಳುತ್ತಿದ್ದು, ಜೈಶ್​-ಎ- ಮೊಹಮ್ಮದ್​ ಭಯೋತ್ಪಾದನಾ ಸಂಘಟನೆ ಮುಖ್ಯಸ್ಥ ಮಸೂದ್​ ಅಜರ್​ನ ಪ್ರಭಾವಕ್ಕೆ ಇವನು ಒಳಗಾಗಿದ್ದನೆಂದು ತಿಳಿದುಬಂದಿದೆ.

ಮಿಲಿಟರಿ ಕ್ಯಾಂಪ್​ ಉಡಾಯಿಸಲು ಸಂಚು!

ಇನ್ನು ಈ ಬಂಧಿದ ಆರೋಪಿ, ಜಮ್ಮು ಕಾಶ್ಮೀರದ ಮೊಹಮ್ಮದ್​ ಸಾಜಿದ್ ಎಂಬಾತನ ಸಂಪರ್ಕದಲ್ಲಿದ್ದು, ಈ ಸಾಜಿದ್​ನನ್ನು ಪೊಲೀಸರು ಕಳೆದ ವರ್ಷ ವಶಕ್ಕೆ ಪಡೆದಿದ್ದು, ಇವರಿಬ್ಬರು ಪಾಕಿಸ್ತಾನದ ಗ್ಯಾಂಗ್​​ಸ್ಟಾರ್​ ಶೆಹಜಾದ್​ ಭಟ್ಟಿ ಗ್ಯಾಂಗ್​ ಜತೆ ಸಂಪರ್ಕ ಹೊಂದಿದ್ದರೆಂದು ಹೇಳಲಾಗುತ್ತಿದೆ.

ಸದ್ಯ ಬಂಧಿತ ಆರೋಪಿ ಉಜೈದ್​ನ ಚಾಟ್​ನಲ್ಲಿ, ಭಾರತದ ಸೇನಾ ಶಿಭಿರದ ಮೇಲೆ ಆತ್ಮಾಹುತಿ ದಾಳಿ ನಡೆಸಿ, ಶೇ. 100 ರಷ್ಟು ಯಶಸ್ಸನ್ನು ಗಳಿಸುವುದಾಗಿ ಹೇಳಿರುವ ಮೇಸೆಜ್​ ಈಗ ಸೋಷಿಯಲ್​ ಮೀಡಿಯಾನಲ್ಲಿ ಹಂಚಿಕೆಯಾಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಾಟ್​ನಲ್ಲಿ, ಉಜೈದ್, ಪಾಕಿಸ್ತಾನದ ಭಯೋತ್ಪಾದಕನ ಜತೆ ಸಂದೇಶ ರವಾನಿಸಿರುವುದು ರುಜುವಾತಾಗಿದೆ. 'ಡ್ರಗ್ಸ್​' ಎಂಬ ಕೋಡ್​ ನೇಮ್​ ಹೊಂದಿರುವವನ ಜತೆಗೆ ಚಾಟ್​ ಮಾಡಿರುವ ಉಜೈದ್, ಫ್ಲಾನ್ ಏನು? ಎಂಬ ಪ್ರಶ್ನೆಗೆ 'ಫ್ಲಾನ್ ಏನು ಎಂದರೆ ಸಾಜಿದ್​ಗೆ ಬಾಂಬ್​ ಕಟ್ಟಿ, ಮಿಲಿಟರಿ ಬೇಸ್​ಗೆ ಬೀಡುವುದು, ಅಲ್ಲಿ ಅವನು ಅದನ್ನು ಸ್ಪೋಟ ಮಾಡುತ್ತಾನೆ. ಓಕೆ ನಾ?' ಎಂದಿದ್ದಾನೆ. ಆಮೇಲೆ, ಜಾಕೆಟ್​ ರೆಡಿ ಆಗಿದೆಯಾ? ಎಂಬ ಪ್ರಶ್ನೆಗೆ ಅದನ್ನು ನಾವು ಮನೆಯಲ್ಲೇ ತಯಾರು ಮಾಡಿಕೊಳ್ಳುತ್ತೇವೆ. ಶೇ. 100 ರಷ್ಟು ಈ ಯೋಜನೆ ಸಫಲವಾಗುತ್ತದೆ ಎಂದು ಉತ್ತರಿಸಿದ್ದಾನೆ.

ಹತ್ತು ತಿಂಗಳಿನಿಂದ ನಡೆದಿದ್ದ ಕಾರ್ಯಾಚರಣೆ!

ಕಳೆದ ವರ್ಷ ಇತನ ಸ್ನೇಹಿತ ಸಾಜಿದ್​ನನ್ನು ವಶಕ್ಕೆ ಪಡೆದ ದಿನದಿಂದಲೇ ಜಮ್ಮು ಹಾಗೂ ಉತ್ತರ ಪ್ರದೇಶ ಪೊಲೀಸರು ಈ ಉಜೈದ್​ನನ್ನು ಹುಡುಕುತ್ತಿದ್ದರು. ಆದರೆ, ಕಳೆದ ಹತ್ತು ತಿಂಗಳಿನಿಂದ ಇತ ಪೊಲೀಸರ ಸಂಪರ್ಕಕ್ಕೆ ಬಂಧಿರಲಿಲ್ಲ. ಈಗ ಕಳೆದ ಒಂದು ವಾರದಿಂದ ಇತನ ಸೋಷಿಯಲ್​ ಮೀಡಿಯಾ ಖಾತೆಗಳ ಚಲನ ವಲನಗಳ ಮೇಲೆ ಕಣ್ಣಿಟ್ಟಿದ್ದ ಪೊಲೀಸರಿಗೆ ಇತನ ಜಾಡು ಪತ್ತೆಯಾಗಿದ್ದು, ಈಗ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ಇಗಷ್ಟೇ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಹಿತಿ ಹೊರಬರಬೇಕಿದೆ, (ಏಜೆನ್ಸೀಸ್​).