ಸುಧಾ ಮೂರ್ತಿ  
ದೇಶ

ದಯವಿಟ್ಟು ಇದನ್ನೆಲ್ಲ ನಂಬಬೇಡಿ! ಫೇಕ್​ ವಿಡಿಯೋ ವೈರಲ್​ ಬೆನ್ನಲ್ಲೇ ಜನತೆಗೆ ಸುಧಾ ಮೂರ್ತಿ ಮನವಿ | Sudha Murty

ಪ್ರಮುಖ ಮುಖ್ಯಾಂಶಗಳು

  • ಸುಧಾ ಮೂರ್ತಿ ಅವರನ್ನೇ ಹೋಲು ಡೀಪ್​ಫೇಕ್​ ವಿಡಿಯೋ ವೈರಲ್
  • ವಿಡಿಯೋ ಮೂಲಕ ನಕಲಿ ಹೂಡಿಕೆಗೆ ಯತ್ನ
  • ಫೇಕ್​ ವಿಡಿಯೋವನ್ನು ದಯವಿಟ್ಟು ನಂಬಬೇಡಿ ಎಂದು ವಿನಂತಿ
ನವದೆಹಲಿ: ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರನ್ನೇ ಹೋಲುವ ನಕಲಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ತಾವು ಶಿಫಾರಸು ಮಾಡಿದ ಕಂಪನಿಗಳಲ್ಲಿ ಹೂಡಿಕೆ ಮಾಡುವಂತೆ ಜನರಲ್ಲಿ ಕೇಳಿಕೊಂಡ ವಿಡಿಯೋ ಸದ್ಯ ನಕಲಿ ಎಂಬುದು ಸ್ಪಷ್ಟವಾಗಿದೆ. ಈ ಬಗ್ಗೆ ಸ್ವತಃ ಸುಧಾ ಮೂರ್ತಿ ಅವರೇ ಪ್ರತಿಕ್ರಿಯಿಸಿದ್ದು, ಇದನ್ನೆಲ್ಲ ದಯವಿಟ್ಟು ನಂಬಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.    
ಹರಿದಾಡುತ್ತಿರುವ ಡೀಪ್​ಫೇಕ್​ ವಿಡಿಯೋಗೆ ಪ್ರತಿಕ್ರಿಯಿಸಿದ ಸುಧಾ ಮೂರ್ತಿ, "ಇದು ಕೃತಕ ಬುದ್ಧಿಮತ್ತೆಯ ಮೂಲಕ ರಚಿಸಲಾದ ವಿಡಿಯೋ. ಜನತೆ ಇದನ್ನು ನಂಬಬೇಡಿ. ನಂಬಿ ಮೋಸ ಹೋಗಬೇಡಿ. ಹೂಡಿಕೆದಾರರಿಗೆ ನಾನು ಹೇಳಲು ಬಯಸುವ ವಿಷಯ ಒಂದೇ. ಹೂಡಿಕೆಗಳ ಬಗ್ಗೆ ನಾನು ಎಲ್ಲಿಯೂ ಮಾತನಾಡಿಲ್ಲ" ಎಂದರು. 
"ಅಂತಹ ವಿಷಯಗಳಲ್ಲಿ ನಾನೆಂದಿಗೂ ಹಸ್ತಕ್ಷೇಪ ಮಾಡುವುದಿಲ್ಲ. ಅಕಸ್ಮಾತ್​, ನಾನು ಇನ್ವೆಸ್ಟ್​ಮೆಂಟ್​ ಕುರಿತಾಗಿ ಮಾತನಾಡಿರುವ ವಿಡಿಯೋಗಳು ನಿಮ್ಮ ಕಣ್ಣಿಗೆ ಬಿದ್ದರೆ ದಯವಿಟ್ಟು ನಂಬಬೇಡಿ. ಯಾಕೆಂದರೆ, ನಾನೆಲ್ಲಿಯೂ ಆ ವಿಷಯಗಳ ಬಗ್ಗೆ ಮಾತನಾಡಲ್ಲ. ಜನರಿಗೆ ಹಣ ಹೂಡಿಕೆ ಮಾಡಿ ಅಥವಾ ಹಣವನ್ನು ಕೊಡಿ ಎಂದು ಕೇಳುವುದಿಲ್ಲ" ಎಂದಿದ್ದಾರೆ,(ಏಜೆನ್ಸೀಸ್).