'ಎಥೆನಾಲ್ ಪರ್ಸೆಂಟೇಜ್​​ ಬಂಕ್​ನ ಬಿಲ್‌ನಲ್ಲಿ ತೋರಿಸಬೇಕು': ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್​ ಹೇಳಿದ್ದಿಷ್ಟು | Ethanol Percentage  
ದೇಶ

'ಎಥೆನಾಲ್ ಪರ್ಸೆಂಟೇಜ್​​ ಬಂಕ್​ನ ಬಿಲ್‌ನಲ್ಲಿ ತೋರಿಸಬೇಕು': ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್​ ಹೇಳಿದ್ದಿಷ್ಟು | Ethanol Percentage

ಪ್ರಮುಖ ಮುಖ್ಯಾಂಶಗಳು

  • ಪೆಟ್ರೋಲ್‌ನಲ್ಲಿ ಬಳಸುವ ಎಥನಾಲ್ ಶೇಕಡಾವಾರು ಮಾಹಿತಿಯನ್ನು ಬಿಲ್​ನಲ್ಲಿ ತೋರಿಸಬೇಕು
  • ಪೆಟ್ರೋಲ್​ ಬಂಕ್​ನ ಮಿಷಿನ್​ ಮತ್ತು ಬಿಲ್​ಗಳಲ್ಲಿ ಬಳಕೆ ಮಾಡುವ ಪರ್ಸಟೆಂಜ್​ ತೋರಿಸಬೇಕೆಂಬ ಅರ್ಜಿ ವಜಾ
  • ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್ ಹೇಳಿದ್ದಿಷ್ಟು
ನವದೆಹಲಿ: ಪೆಟ್ರೋಲ್ ಬಂಕ್‌ಗಳ ಡಿಸ್ಪೆನ್ಸಿಂಗ್ ಯಂತ್ರಗಳು ಮತ್ತು ರಶೀದಿಗಳಲ್ಲಿ ಇಂಧನಕ್ಕೆ ಬೆರೆಸಲಾದ ಎಥೆನಾಲ್‌ನ (Ethanol Percentage) ನಿಖರ ಶೇಕಡಾವಾರು ಪ್ರಮಾಣವನ್ನು ಕಡ್ಡಾಯವಾಗಿ ಬಂಕ್​ಗಳಲ್ಲಿ ಪ್ರದರ್ಶಿಸಬೇಕೆಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್​) ಅನ್ನು ಸುಪ್ರೀಂ ಕೋರ್ಟ್​ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪ್ರಸನ್ನ ಬಿ. ವರಾಳೆ ಅವರನ್ನೊಳಗೊಂಡ ಪೀಠವು, ಈ ಅರ್ಜಿಯ ವಿಚಾರಣೆ ನಡೆಸಲು ನಿರಾಕರಿಸಿತು. ಬದಲಿಗೆ ಅರ್ಜಿದಾರರಾದ ನರೇಂದ್ರ ಕುಮಾರ್ ಗೋಸ್ವಾಮಿ ಅವರಿಗೆ, ವಿಷಯಕ್ಕೆ ಸಂಬಂಧಿಸಿದಂತೆ ಬೇಕಾದರೆ ಸಂಬಂಧಪಟ್ಟ ಹೈಕೋರ್ಟ್​ನಲ್ಲಿ ಪ್ರಶ್ನಿಸುವಂತೆ ಸ್ವಾತಂತ್ರ್ಯ ನೀಡಿದೆ.

ಅರ್ಜಿಯಲ್ಲಿ ಮುಂದಿಟ್ಟ ಬೇಡಿಕೆಯೇನು?

ಅರ್ಜಿದಾರ ನರೇಂದ್ರ ಕುಮಾರ್ ಗೋಸ್ವಾಮಿ ಅವರು ದೇಶದ ಪ್ರತಿಯೊಬ್ಬ ಗ್ರಾಹಕನಿಗೂ ತಾನು ಖರೀದಿಸುತ್ತಿರುವ ಇಂಧನದ ಮಾಹಿತಿಯನ್ನು ತಿಳಿಯುವ ಹಕ್ಕಿದೆ. ಈ ನಿಟ್ಟಿನಲ್ಲಿ, ರಸೀದಿಯಲ್ಲಿ ಮಾಹಿತಿ ಕಡ್ಡಾಯಗೊಳಿಸಬೇಕು. ಪೆಟ್ರೋಲ್ ವಿತರಣಾ ಯಂತ್ರಗಳ (Nozzle) ಮೇಲೆ ಹಾಗೂ ಕೊಡುವ ಬಿಲ್​ಗಳಲ್ಲಿ ಎಥನಾಲ್‌ನ ನಿಖರ ಪ್ರಮಾಣವನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕು ಎಂದಿದ್ದಾರೆ.
ಯಾವ ವಾಹನಕ್ಕೆ ಎಷ್ಟು ಪ್ರಮಾಣದ ಎಥನಾಲ್ ಮಿಶ್ರಿತ ಪೆಟ್ರೋಲ್ ಸೂಕ್ತ ಎಂಬ ಮಾಹಿತಿಯನ್ನು ಸಾರ್ವಜನಿಕವಾಗಿ ನೀಡಲು ತಯಾರಿಕಾ ಕಂಪನಿಗಳು ಹಾಗೂ ಮಾದರಿ ಆಧಾರಿತ ಡೇಟಾಬೇಸ್ ರೂಪಿಸಬೇಕು. ಇ20 (ಶೇ.20 ಎಥನಾಲ್) ಇಂಧನವು ದೇಶದ ಪ್ರಸ್ತುತ ಚಾಲನೆಯಲ್ಲಿರುವ ವಾಹನಗಳ ಇಂಜಿನ್, ಮೈಲೇಜ್, ನಿರ್ವಹಣಾ ವೆಚ್ಚ ಮತ್ತು ಪರಿಸರದ ಮೇಲೆ ಉಂಟುಮಾಡುವ ಪರಿಣಾಮಗಳನ್ನು ಅಧ್ಯಯನ ಮಾಡಲು ಪೆಟ್ರೋಲಿಯಂ ಸಚಿವಾಲಯ, ಮೋಟಾರು ವಾಹನ ಸಂಶೋಧನಾ ಸಂಸ್ಥೆಗಳು (ARAI/ICAT) ಮತ್ತು ಪರಿಸರ ತಜ್ಞರನ್ನೊಳಗೊಂಡ ಸಮಿತಿ ರಚಿಸಬೇಕು.

ನಮಗೆ ತಿಳಿಯುವ ಹಕ್ಕಿದೆ

ನಾನು ಖರೀದಿಸಿದ ಇಂಧನದ ರಶೀದಿಯನ್ನು ನೋಡಿ, ಅದರಲ್ಲಿ ಎಥನಾಲ್ ಪ್ರಮಾಣದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ನಾಗರಿಕನಾಗಿ ನಾನೇನು ಖರೀದಿಸುತ್ತಿದ್ದೇನೆ ಎಂದು ತಿಳಿಯುವ ಹಕ್ಕು ನನಗಿದೆ ಎಂದು ವಾದಿಸಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಭಾರತದ ಅಟಾರ್ನಿ ಜನರಲ್, "ಅರ್ಜಿದಾರರು ಭಾರತ ಸರ್ಕಾರವು ತಮಗೆ ಉತ್ತರಿಸಬೇಕೆಂದು ಬಯಸುತ್ತಿದ್ದಾರೆ. ಇದೊಂದು ಪ್ರಾಕ್ಸಿ ಅರ್ಜಿಯಾಗಿದೆ. ಅಲ್ಲದೆ, ಕಳೆದ ವರ್ಷವೂ ಇದೇ ರೀತಿಯ ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು ಎಂಬುದನ್ನು ಕೋರ್ಟ್ ಗಮನಕ್ಕೆ ತಂದರು.
ವಾದ ಮತ್ತು ಪ್ರತಿವಾದ ಆಲಿಸಿದ ಪೀಠವು, ಅರ್ಜಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಮುಂದುವರಿಸಲು ನಿರಾಕರಿಸಿ, ಪರಿಹಾರಕ್ಕಾಗಿ ಹೈಕೋರ್ಟ್‌ಗೆ ಮನವಿ ಸಲ್ಲಿಸುವಂತೆ ಸೂಚಿಸಿ ಪ್ರಕರಣದ ವಿಚಾರಣೆಗೆ ಪುಲ್​ ಸ್ಟಾಪ್​ ಹಾಕಿತು,(ಏಜೆನ್ಸೀಸ್).