ಹಲ್ಲೆಯ ಸಿಸಿಟಿವಿ ದೃಶ್ಯ 
ದೇಶ

ಗ್ರಾಹಕರ ಕಡಿಮೆ ರೇಟಿಂಗ್ ವಿಚಾರ; ಡೆಲಿವರಿ ಬಾಯ್ ಮೇಲೆ ಹಲ್ಲೆ ಮಾಡಿದ ಪಿಜ್ಜಾ ಹಟ್ ಸಿಬ್ಬಂದಿ | customer rating

ಹೈದರಾಬಾದ್: ಶಾಪ್​​ನ ಆನ್​ಲೈನ್​ ಗ್ರಾಹಕರ ಕಡಿಮೆ ರೇಟಿಂಗ್​ಗೆ ಡೆಲಿವರಿ ಬಾಯ್​​ ಕಾರಣ ಎಂದು ಜೊಮ್ಯಾಟೊ ಡೆಲಿವರಿ ಬಾಯ್ ಒಬ್ಬನ ಮೇಲೆ ಪಿಜ್ಜಾ ಹಟ್ ಔಟ್​ಲೆಟ್​ನ ಸಿಬ್ಬಂದಿ ಹಲ್ಲೆ ಮಾಡಿದ ಘಟನೆ ಭಾನುವಾರ(ಜ. 25) ನಡೆದಿದೆ.
ತೆಲಂಗಾಣದ ಹೈದರಾಬಾದ್​ನಲ್ಲಿ ಈ ಘಟನೆ ನಡೆದಿದ್ದು, ಪಿಜ್ಜಾ ಹಟ್ ಸಿಬ್ಬಂದಿ ಡೆಲಿವರಿ ಬಾಯ್ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಬಗ್ಗೆ ಡೆಲಿವರಿ ಬಾಯ್ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಡೆಲಿವರಿ ಬಾಯ್ ನೀಡಿದ ದೂರಿನ ಪ್ರಕಾರ, ಆನ್​ಲೈನ್​ ಆರ್ಡರ್ ಪಿಕಪ್ ಮಾಡಲು ತೆಳಿದ್ದಾಗ ಅಲ್ಲಿನ ಸಿಬ್ಬಂದಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅದಕ್ಕೆ ಕಾರಣ ಶಾಪ್​ಗೆ ಇತ್ತೀಚೆಗೆ ಆನ್​ಲೈನ್​ನಲ್ಲಿ ಶಾಪ್​ಗೆ ಗ್ರಾಹಕರು ಕಡಿಮೆ ರೇಟಿಂಗ್​ ನೀಡಿದ್ದು, ಶಾಪ್​ನ ಇಮೇಜ್​ ಮೇಲೆ ಪರಿಣಾಮ ಬೀರಿದೆ. ಅದಕ್ಕೆ ನಾನು ಕಾರಣ ಎಂದು ಆರೋಪಿಸಿ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ರೇಟಿಂಗ್‌ಗಳನ್ನು ಗ್ರಾಹಕರು ನೀಡುತ್ತಾರೆ, ವಿತರಣಾ ಕಾರ್ಮಿಕರಲ್ಲ ಎಂದು ಮನವರಿಕೆ ಮಾಡಿದ್ರು ಶಾಪ್​ನ ಸಿಬ್ಬಂದಿ ತನ್ನನ್ನು ಮೊದಲು ನಿಂದಿಸಿ, ಬಳಿಕ ಹಿಂಸಾತ್ಮಕವಾಗಿ ಹಲ್ಲೆ ಮಾಡಿದ್ದಾರೆ ಎಂದು ವಿವರಿಸಿದ್ದಾರೆ.
ಡೆಲಿವರಿಗೆ ಬಾಯ್ ನೀಡಿದ ದೂರಿನನ್ವಯ ಪೊಲೀಸರು ಪಿಜ್ಜಾ ಹಟ್ ಉದ್ಯೋಗಿಗಳ ವಿರುದ್ಧ ಹಲ್ಲೆ ಮತ್ತು ಬೆದರಿಕೆ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ಹಲ್ಲೆಯ ಸಿಸಿಟಿವಿ ಪರಿಶೀಲಿಸಿದ್ದು, ಹಲ್ಲೆ ಮಾಡಿದವರನ್ನು ವಿಚಾರಣೆ ಮಾಡುತ್ತಿದ್ದಾರೆ (ಏಜೆನ್ಸೀಸ್).