ಫೋಟೊ ತೆಗೆದಿದ್ದ ರಷ್ಯನ್​ ಛಾಯಾವಚಿತ್ರಗಾರ್ತಿ ಜೂಲಿಯಾ ಬುರುಲೆವಾ 
ದೇಶ

ಗುಲಾಬಿ ಆನೆ ಚಂಚಲ್ ಸಾವು: ರಷ್ಯನ್ ಫೋಟೋಗ್ರಾಫರ್ ಗಳಿಸಿದ 3 ಲಕ್ಷ ವಾಪಸ್ ನೀಡುವಂತೆ PETA ಆಗ್ರಹ! Pink Elephant Chanchal

ಪ್ರಮುಖ ಮುಖ್ಯಾಂಶಗಳು

  • ಗುಲಾಬಿ ಬಣ್ಣದ ಆನೆ ಚಂಚಲ್​ ಸಾವು
  • ಫೋಟೊ ತೆಗೆದಿದ್ದ ರಷ್ಯನ್​ ಛಾಯಾವಚಿತ್ರಗಾರ್ತಿ ಜೂಲಿಯಾ ಬುರುಲೆವಾ
  • ಜೂಲಿಯಾ ಬುರುಲೆವಾಗೆ ಚಂಚಲ್​ ಫೋಟೊ ಮಾರಿ ಗಳಿಸಿದ್ದ ಹಣವನ್ನು ದಾನ ಮಾಡುವಂತೆ ಪೆಟಾ ಆಗ್ರಹ
ನವದೆಹಲಿ: ರಾಜಸ್ಥಾನದ ಜೈಪುರದಲ್ಲಿ ಗುಲಾಬಿ ಬಣ್ಣ ಬಳಿದ ಆನೆ ಚಂಚಲ್​ (Pink Elephant Chanchal) ಸಾವಿನ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಲು ಪ್ರಾರಂಭಿಸಿದ ಹಿನ್ನಲೆಯಲ್ಲಿ ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ಈ ವಿಷಯದಲ್ಲಿ ತನ್ನ ನಿಲುವನ್ನು ಸ್ಪಷ್ಟ ಪಡಿಸಿದೆ.

ಮಾರಾಟ ಮಾಡಿದ ಫೋಟೊವನ್ನು ಹಿಂಪಡೆಯಿರಿ

ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಷ್ಯನ್​ ಫೋಟೊಗ್ರಾಫರ್​ ಜೂಲಿಯಾ ಬುರುಲೆವಾ ಅವರು ಆನೆ ಚಂಚಲ್​ಗೆ ಗುಲಾಬಿ ಬಣ್ಣ ಬಳಿದು ಫೋಟೊಶೂಟ್​ ಮಾಡಿದಿದ್ದರು.
ಈ ಘಟನೆಗೆ ಪ್ರತಿಕ್ರಿಯೆ ನೀಡಿರುವ ಪೆಟಾ ಭಾರತದ ಪಶುವೈದ್ಯಕೀಯ ವ್ಯವಹಾರಗಳ ಹಿರಿಯ ನಿರ್ದೇಶಕಿಯಾಗಿರುವ ಡಾ. ಮಿನಿ ಅರವಿಂದನ್, ಫೋಟೊಗ್ರಾಫರ್​ ಜೂಲಿಯಾ ಬುರುಲೆವಾ ಚಂಚಲ್​ನ ಫೋಟೊವನ್ನು ಸುಮಾರು 3 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಅವರು ಈ ಕೂಡಲೇ ಆ ಫೋಟೊವನ್ನು ಹಿಂಪಡೆಯಬೇಕು ಮತ್ತು ಗಳಿಸಿದ ಹಣವನ್ನು ಭಾರತದಲ್ಲಿ ಆನೆಗಳ ಶ್ರೇಯೋಭಿವೃದ್ಧಿಗೆ ನೀಡಬೇಕೆಂದು ಕೇಳಿಕೊಳ್ಳುತ್ತೆನೆ ಎಂದು ಹೇಳಿದ್ದಾರೆ.
ಜೂಲಿಯಾ ಬುರುಲೆವಾ ಅವರು ತನ್ನಿಂದ ಆನೆಯ ಸಾವು ಸಂಭವಿಸಿಲ್ಲ, ಅದಕ್ಕೆ ವಯಸ್ಸಾಗಿತ್ತು ಎಂದು ಹೇಳಿದ್ದಾರೆ. ಆದರೆ 65 ವರ್ಷವನ್ನು ದಾಟಿದ ಅನೆಗಳನ್ನು ವ್ಯವಹಾರಿಕವಾಗಿ ಬಳಸಿ ಕೊಳ್ಳುವಂತಿಲ್ಲ. ಹೀಗಾಗಿ ಬಣ್ಣದಿಂದ ಚಂಚಲ್​ಳ ಸಾವು ಸಂಭವಿಸಿಲ್ಲ ಎನ್ನುವುದನ್ನು ಸಂಪೂರ್ಣವಾಗಿ ನಂಬದೆ ಇರಲು ಆಗುವುದಿಲ್ಲ. ಹೀಗಾಗಿ ನಾನು ಬುರುಲೆವಾ ಅವರಿಗೆ ಚಂಚಲ್​ ಮೂಲಕ ಗಳಿಸಿದ ಮೊತ್ತವನ್ನು ಭಾರತದಲ್ಲಿ ಆನೆಗಳ ಆರೈಕೆಗೆ ಬಳಕೆಯಾಗುವಂತೆ ದಾನ ಮಾಡಲು ನಾನು ವಿನಂತಿಸಿ ಕೊಳ್ಳುತ್ತೆನೆ ಎಂದು ಅವರು ಹೇಳಿದ್ದಾರೆ.

ಏನಿದು ಗುಲಾಬಿ ಆನೆ ಕತೆ?

2025 ರ ಡಿಸೆಂಬರ್​ನಲ್ಲಿ ರಷ್ಯಾದ ಟ್ರಾವೆಲಿಂಗ್ ಫೋಟೊಗ್ರಾಫರ್​ ಆದ ಜೂಲಿಯಾ ಬುರುಲೆವಾ ಜೈಪುರಕ್ಕೆ ಆಗಮಿಸಿದ್ದಾಗ, ಪಿಂಕ್ ಸಿಟಿ ಎಂಬ ಥೀಮ್​ನಲ್ಲಿ ಆನೆಯೊಂದಕ್ಕೆ ಗುಲಾಬಿ ಬಣ್ಣ ಬಳಿದು ಅದರ ಮೇಲೆ ಒಬ್ಬ ಮಾಡೆಲ್​ನ್ನು ಕುಳಿಸಿ ಫೋಟೊಶೂಟ್​ ನಡೆಸಲಾಗಿತ್ತು. ಆದರೆ ಈ ಫೋಟೊಶೂಟ್​ ನಡೆದ ಕೆಲವೇ ತಿಂಗಳಲ್ಲಿ ಆನೆ ಚಂಚಲ್​ ಮೃತ ಪಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ.

ಆನೆ ಸಾವಿಗೆ ನಾನು ಹೊಣೆಯಲ್ಲ!

ಆನೆ ಚಂಚಲ್​ ಸಾವಿಗೆ ಪ್ರತಿಕ್ರಿಯೆ ನೀಡಿರುವ ರಷ್ಯನ್​ ಫೋಟೊಗ್ರಾಫರ್​ ಜೂಲಿಯಾ ಬುರುಲೆವಾ, ಚಂಚಲ್​ ಸಾವನ್ನಪ್ಪಿರುವ ಸುದ್ದಿ ತಿಳಿಯಿತು, ನನಗೆ ಇದರಿಂದ ತುಂಬಾ ದಃಖವಾಗಿದೆ.
ಆದರೆ ಜನ ಈ ಆನೆಯ ಸಾವಿಗೆ ನಾನೇ ಕಾರಣ ಎಂದು ಬಿಂಬಿಸುತ್ತಿರುವದು ನೋವಿನ ಸಂಗತಿಯಾಗಿದೆ. ನಾನು ಈ ಫೋಟೊಶೂಟ್​ ಮಾಡಲು ಬೇಕಾದ ಎಲ್ಲಾ ಅನುಮತಿಗಳನ್ನು ಪಡೆದಿದ್ದೆ ಹಾಗೆಯೇ ಆನೆಗೆ ನೈಸರ್ಗಿಕ ಬಣ್ಣವನ್ನೇ ಬಳಿಯಲಾಗಿತ್ತು. ಫೋಟೊಶೂಟ್​ ಕೇವಲ 10 ನಿಮಿಷದಲ್ಲಿ ಮುಗಿದ್ದಿದ್ದು, ಕೂಡಲೇ ಚಂಚಲ್​ಗೆ ಸ್ನಾಹವನ್ನು ಮಾಡಿಸಲಾಗಿತ್ತು ಎಂದು ಜೂಲಿಯಾ ಬುರುಲೆವಾ ತಿಳಿಸಿದ್ದಾರೆ.
ಚಂಚಲ್​ಗೆ ಈಗಾಗಲೇ 65-70 ವರ್ಷ ವಯಸ್ಸಾಗಿತ್ತೆಂದು ಆನೆ ಮಾಲೀಕ ಸಾದಿಕ್​ ಖಾನ್​ ಹೇಳಿದ್ದಾರೆ. ಆದ್ದರಿಂದ ಇದೊಂದು ವಯೋಸಹಜ ಸಾವೆಂದು ಅನ್ನಿಸುತ್ತದೆ. ನನಗೆ ಈ ಸಾವಿನ ರೂವಾರಿ ಎಂದು ಬಿಂಬಿಸುವುದನ್ನು ನಿಲ್ಲಿಸಿ ಎಂದು ಅವರು ಕೇಳಿ ಕೊಂಡಿದ್ದಾರೆ, (ಏಜನ್ಸೀಸ್​).