ಭಾರೀ ಮಳೆಯಿಂದಾಗಿ ತ್ಯಾಜ್ಯ ವಿಲೇವಾರಿ ಕಚೇರಿ ಕಟ್ಟಡ ಕುಸಿತ  
ದೇಶ

ಪಿಂಪ್ರಿ-ಚಿಂಚ್ವಾಡ್‌ನಲ್ಲಿ ಭೀಕರ ದುರಂತ: ಮಳೆಗೆ ಕುಸಿದು ಬಿದ್ದ ತ್ಯಾಜ್ಯ ವಿಲೇವಾರಿ ಕಚೇರಿ; ಅವಶೇಷಗಳ ಅಡಿಯಲ್ಲಿ ಸಿಲುಕಿದ 15 ಪೌರ ಕಾರ್ಮಿಕರು! Pimpri Chinchwad Building Collapse

ಪ್ರಮುಖ ಮುಖ್ಯಾಂಶಗಳು

  • ಮಹಾರಾಷ್ಟ್ರದ ಪಿಂಪ್ರಿ-ಚಿಂಚ್ವಾಡ್‌ನಲ್ಲಿ ಭೀಕರ ದುರಂತ!
  • ಭಾರೀ ಮಳೆಯಿಂದಾಗಿ ತ್ಯಾಜ್ಯ ವಿಲೇವಾರಿ ಕಚೇರಿ ಕಟ್ಟಡ ಕುಸಿತ
  • ಕಟ್ಟಡದ ಅಡಿಯಲ್ಲಿ ಸಿಲುಕಿರುವ 15 ಕಾರ್ಮಿಕರು
  • ಮುಂದುವರಿದ ಎನ್‌ಡಿಆರ್‌ಎಫ್ ಕಾರ್ಯಾಚರಣೆ
ಮಹಾರಾಷ್ಟ್ರ: ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಅತ್ಯಧಿಕ ಮಳೆ ಬೀಳುತ್ತಿದ್ದು, ಬುಧವಾರ (ಜು.8) ಪಿಂಪ್ರಿ-ಚಿಂಚ್ವಾಡ್​​ದಲ್ಲಿ (Pimpri Chinchwad Building Collapse) ಅಧಿಕ ಮಳೆಯಿಂದಾಗಿ ಕಟ್ಟಡವೊಂದು ಕುಸಿದ್ದಿದ್ದು, ಇದರಲ್ಲಿ ಸುಮಾರು 15 ಜನ ಸಿಲುಕಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.
ಪಿಂಪ್ರಿ-ಚಿಂಚ್ವಾಡ್ ಮೇಯರ್ ರವಿ ಲ್ಯಾಂಡ್ಜೆ ಹೇಳಿಕೆ ಪ್ರಕಾರ, ಭಾರೀ ಮಳೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾದ ಕಸ ಮತ್ತು ಅವಶೇಷಗಳು ಕಚೇರಿ ಕಟ್ಟಡದ ಮೇಲೆ ಕುಸಿದು, ಕಾಂಕ್ರೀಟ್ ಚಪ್ಪಡಿ ಉರುಳಿಬಿದ್ದಿದೆ. ಇದರಡಿಯಲ್ಲಿ ಸುಮಾರು 17 ಜನ ಸಿಲುಕಿಕೊಂಡಿದ್ದರು, ಆದರೆ ಇಬ್ಬರು ತಾವಾಗಿಯೇ ಆಚೆ ಬಂದಿದ್ದು ಉಳಿದ 15 ಜನ ಸಿಲುಕಿ ಕೊಂಡಿದ್ದಾರೆ.

ಮುಂದುವರಿದ ರಕ್ಷಣಾ ಕಾರ್ಯ!

ಘಟನೆ ಸಂಭವಿಸುತ್ತಿದ್ದಂತೆ ಎನ್​ಡಿಆರ್​ಎಫ್​ ಹಾಗೂ ಪೊಲೀಸ್​ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಅಂತಯೇ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾ ಎಂಬ ಮಾಹಿತಿ ಲಭ್ಯವಾಗಿದೆ.
ಕುಸಿತ ಕಂಡ ಕಟ್ಟಡವು ತ್ಯಾಜ್ಯ ವಿಲೇವಾರಿ ಇಲಾಖೆಗೆ ಸಂಬಂಧಿಸಿದ್ದು, ಅಧಿಕ ಮಳೆ ಕಾರಣ ಕಸದ ರಾಶಿ ಕಚೇರಿ ಕಟ್ಟಡದ ಮೇಲೆ ಜಾರಿದೆ. ಬೃಹತ್​ ಕಸದ ಬೆಟ್ಟದ ಭಾರವನ್ನು ಸಹಿಸದ ಕಟ್ಟಡ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇಲ್ಲಿವರೆಗೆ ಯಾವುದೇ ಕಾರ್ಮಿಕರ ಸಾವಿನ ಬಗ್ಗೆ ವರದಿಯಾಗಿಲ್ಲ.
ಮಹಾರಾಷ್ಟ್ರದಲ್ಲಿ ನಿಲ್ಲದ ಮಳೆರಾಯ
ಕಳೆದ ಒಂದು ವಾರದಿಂದ ಮಹಾರಾಷ್ಟ್ರದಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಈಗಾಗಲೇ ಸುಮಾರು 6,000 ಕುಟುಂಬಗಳನ್ನು ನಿರಾವರಿ ಪ್ರದೇಶದಿಂದ ಸುರಕ್ಷತಾ ಸ್ಥಳಕ್ಕೆ ಸಾಗಿಸಲಾಗಿದೆ. ರಾಜ್ಯದಾದ್ಯಂತ ಇನ್ನೂ ಒಂದು ವಾರ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದ್ದು, ಸುರಕ್ಷತಾ ಕ್ರಮವನ್ನು ಅನುಸರಿಸಿ ಎಂದು ರಾಜ್ಯ ಸರ್ಕಾರ ತಿಳಿಸಿದೆ, (ಏಜನ್ಸೀಸ್​).