Virat Kohli 
ದೇಶ

ಪಂದ್ಯದ ನಡುವೆ ಮೈದಾನದಲ್ಲಿಯೇ ಉಪ್ಪಿನಕಾಯಿ ರಸ ಕುಡಿದ ವಿರಾಟ್ ಕೊಹ್ಲಿ! ಇದು ಫಿಟ್‌ನೆಸ್ ಟ್ರಿಕ್....Virat Kohli

ನವದೆಹಲಿ: ( Virat Kohli ) ವಿರಾಟ್ ಕೊಹ್ಲಿ ಮೈದಾನದಲ್ಲಿ ಏನೇ ಮಾಡಿದರೂ ಅದು ಸುದ್ದಿಯಾಗುತ್ತದೆ. ಇತ್ತೀಚೆಗೆ ಇಂದೋರ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ವೇಳೆ ಕೊಹ್ಲಿ ಕುಡಿದ ಒಂದು ಪಾನೀಯ ಕುಡಿದು ಅವರು ನೀಡಿದ ವಿಚಿತ್ರ ಪ್ರತಿಕ್ರಿಯೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಏನಿದು ಘಟನೆ?

ಪಂದ್ಯದ ನಡುವೆ ವಿರಾಟ್ ಕೊಹ್ಲಿ ಸಣ್ಣ ಗ್ಲಾಸ್‌ನಲ್ಲಿ ಕಂದು ಬಣ್ಣದ (Brown color) ಪಾನೀಯವೊಂದನ್ನು ಕುಡಿದರು. ಅದನ್ನು ಕುಡಿದ ತಕ್ಷಣ ಅವರ ಮುಖದ ಭಾವನೆ ಸಂಪೂರ್ಣ ಬದಲಾಯಿತು. ಏನೋ ಕಹಿ ಅಥವಾ ವಿಚಿತ್ರ ರುಚಿಯ ವಸ್ತುವನ್ನು ಸೇವಿಸಿದಂತೆ ಅವರು ಮುಖ ಮಾಡಿದರು. ನಂತರ ನೀರು ಕುಡಿದು ಬಾಳೆಹಣ್ಣು ತಿನ್ನುತ್ತಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಕೊಹ್ಲಿ ಅಂತಹದ್ದೇನು ಕುಡಿದರು? ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿತು.
ಸ್ಪೋರ್ಟ್ಸ್ ತಂಡದ ಆಡಳಿತ ಮಂಡಳಿ ಮೈದಾನಕ್ಕೆ ತಂದಿರುವ ಈ ಪಾನೀಯ ಯಾವುದು ಎಂದು ಖಚಿತಪಡಿಸಲು ಸಾಧ್ಯವಾಗದಿದ್ದರೂ, ಅದು ಉಪ್ಪಿನಕಾಯಿ ರಸ ಎಂದು ಮೂಲಗಳಿಂದ ತಿಳಿದು ಬಂದಿದೆ. ಮೈದಾನದಲ್ಲಿ ಸ್ನಾಯು ಸೆಳೆತವನ್ನು ತಪ್ಪಿಸಲು ಆಟಗಾರರು ಇದನ್ನು ಸಾಮಾನ್ಯವಾಗಿ ತೆಗೆದುಕೊಳ್ಳುತ್ತಾರೆ ಎನ್ನಲಾಗುತ್ತಿದೆ ಆದರೆ ಯಾವುದೇ ಖಚಿತ ಮಾಹಿತಿ ಇಲ್ಲ. ಇತ್ತೀಚಿನ ಟೆಸ್ಟ್ ಪಂದ್ಯದ ಸಮಯದಲ್ಲಿ ಯಶಸ್ವಿ ಜೈಸ್ವಾಲ್ ಕೂಡ ಇದನ್ನು ತೆಗೆದುಕೊಳ್ಳುತ್ತಿರುವುದು ಕಂಡುಬಂದಿದೆ.
ಕ್ರೀಡಾ ತಜ್ಞರ ವಿಶ್ಲೇಷಣೆಯ ಪ್ರಕಾರ, ಉಪ್ಪಿನಕಾಯಿ ರಸವನ್ನು ಆಟಗಾರರು ಸೇವಿಸುತ್ತಾರೆ. ಸುಡುವ ಬಿಸಿಲಿನಲ್ಲಿ ಆಡುವಾಗ ಅಥವಾ ದೀರ್ಘಕಾಲ ಕ್ರೀಸ್‌ನಲ್ಲಿದ್ದಾಗ ಸ್ನಾಯು ಸೆಳೆತ ಉಂಟಾಗುವುದು ಸಹಜ. ಈ ಉಪ್ಪಿನಕಾಯಿ ರಸವು ಈ ಸಮಸ್ಯೆಯನ್ನು ತಕ್ಷಣವೇ ಕಡಿಮೆ ಮಾಡಲು ಅತ್ಯುತ್ತಮ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಸೋಡಿಯಂ ಮತ್ತು ಪೊಟ್ಯಾಸಿಯಮ್‌ನಂತಹ ಎಲೆಕ್ಟ್ರೋಲೈಟ್‌ಗಳು ಸಮೃದ್ಧವಾಗಿವೆ. ಇವು ಸಾಮಾನ್ಯ ನೀರಿಗಿಂತ ಶೇಕಡಾ 40 ರಷ್ಟು ವೇಗವಾಗಿ ಸ್ನಾಯು ನೋವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆ ತೋರಿಸುತ್ತದೆ.
ಬಾಯಿಯಲ್ಲಿರುವ ನರ ಸಂಕೇತಗಳ ಮೂಲಕ ಮೆದುಳಿಗೆ ಸಂದೇಶವನ್ನು ಕಳುಹಿಸುತ್ತದೆ, ಇದರಿಂದಾಗಿ ಸ್ನಾಯುಗಳು ವಿಶ್ರಾಂತಿ ಪಡೆಯುತ್ತವೆ. ಅದಕ್ಕಾಗಿಯೇ ತಜ್ಞರು ಇದನ್ನು ಕುಡಿಯುವ ಬದಲು, ಬಾಯಿಗೆ ಸುರಿಯುವುದು, 20 ರಿಂದ 30 ಸೆಕೆಂಡುಗಳ ಕಾಲ ಗುನುಗುವುದು, ನುಂಗುವುದು ಅಥವಾ ಉಗುಳುವುದು ಹೆಚ್ಚು ಪರಿಣಾಮಕಾರಿ ಎಂದು ಹೇಳುತ್ತಾರೆ.
ವರದಿಗಳ ಪ್ರಕಾರ, ಅದು ಯಾವುದೇ ಸಾಮಾನ್ಯ ಜ್ಯೂಸ್ ಅಥವಾ ಎನರ್ಜಿ ಡ್ರಿಂಕ್ ಆಗಿರಲಿಲ್ಲ. ಅದು 'ಬೀಟ್ ರೂಟ್ ಜ್ಯೂಸ್' (Beetroot Juice) ಎನ್ನಲಾಗಿದೆ. ಕ್ರೀಡಾಪಟುಗಳು ಸ್ಟ್ಯಾಮಿನಾ ಹೆಚ್ಚಿಸಿಕೊಳ್ಳಲು ಮತ್ತು ಸ್ನಾಯುಗಳ ಚೇತರಿಕೆಗಾಗಿ ಆಗಾಗ ಬೀಟ್ ರೂಟ್ ಜ್ಯೂಸ್ ಅಥವಾ ಪ್ರೋಟೀನ್ ಮಿಶ್ರಿತ ಪಾನೀಯಗಳನ್ನು ಸೇವಿಸುತ್ತಾರೆ.
ಈ ಹಿಂದೆ ಕೊಹ್ಲಿ ತಾವು ಕುಡಿಯುವ ನೀರಿನ ಬಗ್ಗೆಯೂ (Black Water) ಸುದ್ದಿಯಾಗಿದ್ದರು. ಈಗ ಈ 'ಮಿಸ್ಟರಿ ಡ್ರಿಂಕ್' ಮೂಲಕ ಮತ್ತೊಮ್ಮೆ ಅಭಿಮಾನಿಗಳ ಗಮನ ಸೆಳೆದಿದ್ದಾರೆ.