ಸಾಂದರ್ಭಿಕ ಚಿತ್ರ 
ದೇಶ

ಮುಂದಿನ ಎರಡ್ಮೂರು ವಾರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ 10 ರೂ. ಏರಿಕೆಯಾಗುವ ಸಾಧ್ಯತೆ | Petrol prices

ನವದೆಹಲಿ: ಶುಕ್ರವಾರ(ಮೇ 15) ಮುಂಜಾನೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ(Petrol prices) ತಲಾ 3 ರೂ. ಏರಿಸಿದ್ದ ಕೇಂದ್ರ ಸರ್ಕಾರ, ಮುಂದಿನ ಎರಡ್ಮೂರು ವಾರಗಳಲ್ಲಿ ಮತ್ತೆ 10 ರೂಪಾಯಿಗಳಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹಣಕಾಸು ಸೇವಾ ಸಂಸ್ಥೆ ಎಂಕೆ ಗ್ಲೋಬಲ್ ವರದಿ ಬಿಡುಗಡೆ ಮಾಡಿದೆ.
ವರದಿ ಪ್ರಕಾರ, ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಏರುತ್ತಿವೆ. ಇದರ ಪರಿಣಾಮವಾಗಿ ದೇಶೀಯ ಬೆಲೆಗಳನ್ನು ಸಹ ಹೆಚ್ಚಿಸದಿದ್ದರೆ, ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳ ನಷ್ಟವು ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹೇಳಿದೆ.
ಕೇಂದ್ರ ಸರ್ಕಾರವು ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಸರಾಸರಿ 3 ರೂ.ಗಳಷ್ಟು ಹೆಚ್ಚಿಸಿದೆ. ಅದಕ್ಕೂ ಮೊದಲು, ಸರ್ಕಾರವು ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 10 ರೂ.ಗಳಷ್ಟು ಕಡಿತಗೊಳಿಸಿತ್ತು. ತೈಲ ಮಾರುಕಟ್ಟೆ ಕಂಪನಿಗಳ ನಷ್ಟವನ್ನು ಕನಿಷ್ಠ ಅರ್ಧದಷ್ಟು ಕಡಿಮೆ ಮಾಡಲು ಮುಂದಿನ ಎರಡು ಮೂರು ವಾರಗಳಲ್ಲಿ ಏಕಕಾಲ ಅಥವಾ ಒಂದೇ ಹಂತದಲ್ಲಿ ಲೀಟರ್‌ಗೆ 10 ರೂ.ಗಳಷ್ಟು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ತಿಳಿಸಿದೆ (ಏಜೆನ್ಸೀಸ್).