- ದೇಶಾದ್ಯಂತ ಎರಡನೇ ಬಾರಿ ಇಂಧನ ದರ ಏರಿಸಿದ ಕೇಂದ್ರ ಸರ್ಕಾರ
- ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಲೀಟರ್ಗೆ 90 ಪೈಸೆ ಹೆಚ್ಚಳ
ನವದೆಹಲಿ:
ಇತ್ತೀಚೆಗಷ್ಟೇ, ದೇಶಾದ್ಯಂತ ಪೆಟ್ರೋಲ್-ಡಿಸೇಲ್ ಬೆಲೆಯನ್ನು 3 ರೂ.ಗೆ ಹೆಚ್ಚಿಸಿದ್ದ ಸರ್ಕಾರ, ಇದೀಗ ಎರಡನೇ ಬಾರಿಗೆ ಏರಿಕೆ ಮಾಡುವ ಮೂಲಕ ವಾಹನ ಸವಾರರಿಗೆ ಬಿಗ್ ಶಾಕ್ ನೀಡಿದೆ. ಪ್ರತಿ ಲೀಟರ್ಗೆ 90 ಪೈಸೆ ಏರಿಸಿ ಗ್ರಾಹಕರಿಗೆ ಜೇಬಿಗೆ ಕತ್ತರಿ ಹಾಕಿದೆ.
ಇಂಧನವನ್ನು ಮಿತವಾಗಿ ಬಳಕೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯ ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರ ಇಂಧನ ಬೆಲೆಯನ್ನು ಲೀಟರ್ಗೆ 3 ರೂ. ಏರಿಕೆ ಮಾಡಿತ್ತು. ಅಲ್ಲಿಗೆ ಪೆಟ್ರೋಲ್ ಲೀಟರ್ಗೆ 103ರಿಂದ 106 ರೂ.ಗೆ ತಲುಪಿತ್ತು. ಆದರೀಗ, ಐದು ದಿನಗಳ ಅಂತರದಲ್ಲಿ ಎರಡನೇ ಬಾರಿಗೆ 0.90 ಪೈಸೆ ಹೆಚ್ಚಳ ಮಾಡುವ ಮೂಲಕ ದೇಶದ ಜನತೆಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿದೆ.
ಯಾವ ರಾಜ್ಯಗಳಲ್ಲಿ ಎಷ್ಟಾಗಿದೆ? (ಪ್ರತಿ ಲೀ.)
- ನವದೆಹಲಿ: ಪೆಟ್ರೋಲ್- 98.64 ರೂ. ಡೀಸೆಲ್ - 91.58 ರೂ.
- ಬೆಂಗಳೂರು: 107.12 ರೂ., ಡಿಸೇಲ್ - 95.04 ರೂ.
- ಮುಂಬೈ: 107.59 ರೂ., ಡೀಸೆಲ್ - 94.08 ರೂ.
- ಕೋಲ್ಕತ: 109.70 ರೂ., ಡೀಸೆಲ್ - 96.07 ರೂ.
- ಚೆನ್ನೈ: 104.49 ರೂ., ಡೀಸೆಲ್ - 96.11 ರೂ.