ಚಿತ್ರ Instagram 
ದೇಶ

ನನ್ನ ನೋವು ಕೇಳಲು ಮಹಾದೇವನಿದ್ದಾನೆ...ಭಾವುಕ ಪೋಸ್ಟ್ ಹಂಚಿಕೊಂಡ ರೇಣು ದೇಸಾಯಿ ಅಸಲಿ ಕಥೆಯೇನು ಗೊತ್ತಾ..? Renu Desai

Renu Desai: ಇತ್ತೀಚೆಗೆ ಹೈದರಾಬಾದ್‌ನಲ್ಲಿ ಬೀದಿ ನಾಯಿಗಳಿಗೆ ವಿಷ ಹಾಕಿ ಸಾಯಿಸುತ್ತಿರುವ ಕ್ರೂರ ಘಟನೆಗಳ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದ ರೇಣು ದೇಸಾಯಿ, ಈ ವೇಳೆ ವ್ಯಕ್ತಿಯೊಬ್ಬರ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಅವರು ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿದ್ದರು.
ಈ ಟ್ರೋಲ್​ಗಳಿಗೆ ಅನೇಕರು ಅವರ ಮಾಜಿ ಪತಿ, ನಟ ಪವನ್ ಕಲ್ಯಾಣ್ ಹೆಸರನ್ನು ಎಳೆದು ತಂದಿರುವುದು, ರೇಣು ಅವರಿಗೆ ತುಂಬಾ ನೋವುಂಟು ಮಾಡಿದ್ದು, ಈ ವಿಚಾರದ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲೇನಿದೆ?

ನನ್ನನ್ನು ರಕ್ಷಿಸಲು ನನಗೆ ತಂದೆ, ತಾಯಿ, ಅಣ್ಣ ಅಥವಾ ಗಂಡ ಇಲ್ಲ. ನನ್ನದಲ್ಲದ ತಪ್ಪಿಗೆ ನೀವು ನನ್ನ ಮೇಲೆ ದ್ವೇಷ ಸಾಧಿಸುತ್ತಿರುವುದನ್ನು ನಾನು ನೇರವಾಗಿ ಮಹಾದೇವನಿಗೆ ಒಪ್ಪಿಸುತ್ತಿದ್ದೇನೆ. ದೇವರೇ ನನ್ನ ನೋವನ್ನು ಕೇಳುತ್ತಾರೆ, ಹಾಗೆಯೇ ನನ್ನ ಕಣ್ಣೀರನ್ನು ಒರೆಸುತ್ತಾರೆ ಎಂಬ ನಂಬಿಕೆ ಇದೆ ಎಂದರು.
ನಾನು ನನ್ನ ವೈಯಕ್ತಿಕ ವಿಚಾರಗಳನ್ನು ಸಾರ್ವಜನಿಕವಾಗಿಸಿ ಹೋರಾಡಿಲ್ಲ. ಆದರೆ, ಕೆಲವೊಂದು ನಾಯಿಗಳ ತಪ್ಪಿಗೆ ಎಲ್ಲಾ ಮುಗ್ಧ ಜೀವಗಳನ್ನು ಕೊಲ್ಲುವುದು ತಪ್ಪು ಎಂದು ಎಲ್ಲರೂ ಅರ್ಥಮಾಡಿಕೊಳ್ಳುವವರೆಗೂ ನಾನು ಧ್ವನಿ ಎತ್ತುತ್ತೇನೆ. ಈ ವಿಷಯವಾಗಿ ಯಾರು, ಎಷ್ಟೇ ಕೆಟ್ಟದಾಗಿ ಮಾತನಾಡಿದರು ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ನನ್ನ ನೋವನ್ನು ಯಾರೋಂದಿಗೆ ಹಂಚಿಕೊಳ್ಳುತ್ತೇನೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ ಎಂದು ಹೇಳಿದರು.
ಹಿಂದೆ ಏನಾಗಿತ್ತು?
ಪತ್ರಿಕಾಗೋಷ್ಠಿ ನಡೆಸುವಂತಹ ಸಮಯದಲ್ಲಿ ವ್ಯಕ್ತಿಯೊಬ್ಬರು ವೇದಿಕೆಯತ್ತ ಧಾವಿಸಲು ಯತ್ನಿಸಿದಾಗ ರೇಣು ದೇಸಾಯಿ ಅವರು ಸಿಟ್ಟಿನಿಂದ "ನಾನು ಮನುಷ್ಯರ ಜೀವದ ಬೆಲೆ ತಿಳಿದಿರುವ ತಾಯಿ, ನಾಯಿ ಕಡಿತದಿಂದ ಆಗುವ ಸಾವುಗಳ ಬಗ್ಗೆ ನನಗೂ ಕಳಕಳಿ ಇದೆ. ಆದರೆ ಎಲ್ಲ ನಾಯಿಗಳನ್ನು ಕೊಲ್ಲುವುದು ಪರಿಹಾರವಲ್ಲ" ಎಂದು ಆತನನ್ನು ಪ್ರಶ್ನಿಸಿದ್ದರು. ಈ ವಿಡಿಯೋ ವೈರಲ್ ಆದ ನಂತರ ಸಾಮಾಜಿಕ ಜಾಲತಾಣದಲ್ಲಿ ಇವರ ಬಗ್ಗೆ ಬಹಳ ತೀಕ್ಷ್ಣವಾಗಿ ಟ್ರೋಲ್​ ಮಾಡಿದ್ದರು.
ಟ್ರೋಲ್​ಗಳಿಗೆ ಪ್ರತಿಕ್ರಿಯಿಸಿದ ಇವರು ನಾನು ಮನೆಗೆ ಹೋಗುವಾಗ ಕೆಲವು ಕಾಮೆಂಟ್‌ಗಳನ್ನು ನೋಡಿದ್ದೇನೆ. ನನ್ನ ವೈಯಕ್ತಿಕ ಜೀವನವನ್ನು ಎಳೆಯುವುದು ಎಷ್ಟು ಸರಿ? ಕೆಲವರು ಪವನ್ ಕಲ್ಯಾಣ್ ನನ್ನನ್ನು ಬಿಟ್ಟು ಹೋಗಲು ಅದೇ ಕಾರಣ ಎಂದು ಹೇಳುತ್ತಿದ್ದೀರಿ. ಬೀದಿ ನಾಯಿಗಳಿಗಾಗಿ ಹೋರಾಟ ನಡೆಸಿದರೆ, ನನಗೆ ಹಣ ಸಿಗುತ್ತದೆಯೇ, ನಾನು ಅವುಗಳಿಗಾಗಿ ಎಂದಿಗೂ ಹೋರಾಟ ನಡೆಸಿಲ್ಲ. ಮಾನವ ಜೀವಕ್ಕಾಗಿ ಹೋರಾಡುತ್ತಿದ್ದೇನೆ. ಆದರೆ, ನೀವು ಅಸಹ್ಯಕರ ಕಾಮೆಂಟ್​ ಮಾಡುತ್ತಿದ್ದೀರಿ. ಈ ವೇಳೆ ನನ್ನ ಮಕ್ಕಳ ಬಗ್ಗೆಯೂ ಮಾತನಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಹಿನ್ನಲೆ
2008 ರಲ್ಲಿ ತಮ್ಮ ಮೊದಲ ಪತ್ನಿ ನಂದಿನಿಯಿಂದ ವಿಚ್ಛೇದನ ಪಡೆದ ನಂತರ, ನಟ ಪವನ್ ಕಲ್ಯಾಣ್ 2009 ರಲ್ಲಿ ರೇಣು ದೇಸಾಯಿ ಅವರನ್ನು ವಿವಾಹವಾದರು. ಈ ದಂಪತಿಗೆ 2010 ರಲ್ಲಿ ಅಕಿರಾ ಎಂಬ ಮಗ ಮತ್ತು 2012 ರಲ್ಲಿ ಪೊಲೆನಾ ಎಂಬ ಮಗಳು ಜನಿಸಿದರು. ಸ್ವಲ್ಪ ಸಮಯದ ನಂತರ ದಂಪತಿ ಬೇರ್ಪಟ್ಟರು. ಇದಾದ ಬಳಿಕ ಪವನ್ 2013 ರಲ್ಲಿ ರಷ್ಯಾದ ನಟಿ ಅನ್ನಾ ಲೆಜ್ನೆವಾ ಅವರೊಂದಿಗೆ ಮೂರನೇ ವಿವಾಹವಾದರು (ಏಜೆನ್ಸೀಸ್​).