ಆಂಧ್ರಪ್ರದೇಶ : ( Pawan Kalyan) ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಜಪಾನಿನ ಪ್ರಾಚೀನ ಸಮರ ಕಲೆಯಾದ 'ಕೆಂಜುಟ್ಸು' (Kenjutsu) ಗೆ ಅಧಿಕೃತವಾಗಿ ಸೇರ್ಪಡೆಗೊಳ್ಳುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಗೌರವಕ್ಕೆ ಪಾತ್ರರಾಗಿದ್ದಾರೆ.
ಈ ಅಪರೂಪದ ವಿಶ್ವ ದರ್ಜೆಯ ಮನ್ನಣೆಯು ಸುಮಾರು ಮೂರು ದಶಕಗಳಿಂದ ಅವರ ಅಭ್ಯಾಸ, ಸಂಶೋಧನೆ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ.
ಜಪಾನಿನ ಪ್ರಾಚೀನ ಕತ್ತಿವರಸೆ ಕಲೆಯಾಗಿದೆ. ಕಳೆದ ಮೂರು ದಶಕಗಳಿಂದ ಪವನ್ ಕಲ್ಯಾಣ್ ಅವರು ಸಮರ ಕಲೆಗಳಲ್ಲಿ ನಡೆಸಿದ ಕಠಿಣ ಅಭ್ಯಾಸ ಮತ್ತು ಸಂಶೋಧನೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ. ಗೋಲ್ಡನ್ ಡ್ರಾಗನ್ಸ್ (Golden Dragons) ಎಂಬ ಪ್ರತಿಷ್ಠಿತ ಸಂಸ್ಥೆಯು ಇವರಿಗೆ ಟೈಗರ್ ಆಫ್ ಮಾರ್ಷಲ್ ಆರ್ಟ್ಸ್ ಎಂಬ ಬಿರುದನ್ನು ನೀಡಿ ಗೌರವಿಸಿದೆ.
ಜಪಾನಿನ ಸಂಪ್ರದಾಯಬದ್ಧ ಸಮರ ಕಲೆಗಳ ಅತ್ಯುನ್ನತ ಸಂಸ್ಥೆಯಾದ 'ಸೋಗೋ ಬುಡೋ ಕನ್ರಿ ಕೈ' (Sogo Budo Kanri Kai) ಇವರಿಗೆ ಫಿಫ್ತ್ ಡ್ಯಾನ್ ಗೌರವವನ್ನು ಪ್ರದಾನ ಮಾಡಿದೆ. ಜಪಾನ್‌ನ ಹೊರಗೆ ಟಕೆಡಾ ಶಿಂಗೆನ (Takeda Shingen) ವಂಶಾವಳಿಯ ಅಡಿಯಲ್ಲಿ ಈ ಸಮರ ಕಲೆಗೆ ಆಯ್ಕೆಯಾದ ಮೊದಲ ತೆಲುಗು ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪವನ್ ಕಲ್ಯಾಣ್ ಪಾತ್ರರಾಗಿದ್ದಾರೆ.