Doctor Assaulted ಸಾಂದರ್ಭಿಕ ಚಿತ್ರ 
ದೇಶ

ನೀನೇನು ದೊಡ್ಡ ಡಾಕ್ಟರಾ?: ಎಲುಬು ತಜ್ಞನ ಮೇಲೆ ರೋಗಿಯ ಮಗನಿಂದ ಭೀಕರ ಹಲ್ಲೆ! ವಿಡಿಯೋ ವೈರಲ್​... Doctor Assaulted

ಮುಂಬೈ: ಶಿವಸೇನಾ ಕಾರ್ಪೊರೇಟರ್ ಮಹಿಳಾ ವೈದ್ಯೆಯ ಮೇಲೆ ಹಲ್ಲೆ ನಡೆಸಿದ್ದ ಭೀಕರ ಘಟನೆ ಮಾಸುವ ಮುನ್ನವೇ ಮಹಾರಾಷ್ಟ್ರದಲ್ಲಿ ಮತ್ತೊಬ್ಬ ವೈದ್ಯರ ಮೇಲೆ ಹಲ್ಲೆ ನಡೆದಿದೆ. ಕಲ್ಯಾಣ್‌ನ ಖಾಸಗಿ ಆಸ್ಪತ್ರೆಯಲ್ಲಿ ರೋಗಿಯ ಮಗನೊಬ್ಬ ಎಲುಬು ಮತ್ತು ಕೀಲು ತಜ್ಞ ಡಾ. ಯೋಗೇಂದ್ರ ಜೈಸ್ವಾಲ್ ಅವರಿಗೆ ಏಕವಚನದಲ್ಲಿ ನಿಂದಿಸಿ, ಕಪಾಳಮೋಕ್ಷ

(Doctor Assaulted)

ಮಾಡಿದ್ದಾನೆ. ಆದಾಗ್ಯೂ, ಈ ಕೃತ್ಯದಿಂದ ಆಕ್ರೋಶಗೊಂಡಿರುವ ವೈದ್ಯಕೀಯ ಸಮುದಾಯ, ಆಸ್ಪತ್ರೆಗಳಿಗೆ ಸೂಕ್ತ ಭದ್ರತೆ ನೀಡುವಂತೆ ಸರ್ಕಾರಕ್ಕೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

ಘಟನೆಯ ಹಿನ್ನೆಲೆ

ಪಕ್ಕೆಲುಬಿನ ಮುರಿತಕ್ಕೊಳಗಾಗಿದ್ದ ಜಯವಂತ್ ದೇಶಮುಖ್ ಎಂಬ ರೋಗಿಗೆ ಡಾ. ಜೈಸ್ವಾಲ್ ಅವರು ಚಿಕಿತ್ಸೆ ನೀಡಿ ಬ್ಯಾಂಡೇಜ್​ ಹಾಕುವ ವಿಧಾನವನ್ನು ವಿವರಿಸುತ್ತಿದ್ದರು. ಈ ವೇಳೆ ರೋಗಿಯ ಮಗ ಒಂದೇ ಪ್ರಶ್ನೆಯನ್ನು ಪದೇ ಪದೇ ಕೇಳುತ್ತಾ ವೈದ್ಯರನ್ನು ಏಕವಚನದಲ್ಲಿ ಹಾಗೂ ಗೌರವವಿಲ್ಲದ ಭಾಷೆಯಲ್ಲಿ ನಿಂದಿಸಲು ಶುರು ಮಾಡಿದ್ದಾನೆ.
ಈ ವೇಳೆ ವೈದ್ಯರು "ಏಕವಚನದಲ್ಲಿ ಏಕೆ ಮಾತನಾಡುತ್ತಿದ್ದೀಯಾ?" ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಕೋಪಗೊಂಡ ಆತ, ನೀನೇನು ದೊಡ್ಡ ವೈದ್ಯನೆಂದು ತಿಳಿದುಕೊಂಡಿದ್ದೀಯಾ? ಎಂದು ಗಲಾಟೆ ಮಾಡಿ ಹೊರಗೆ ಹೋಗಿದ್ದಾನೆ. ಬಳಿಕ ವಾಪಸ್ ಬಂದವನೇ ವೈದ್ಯರ ಮೇಲೆ ಹಲ್ಲೆ ನಡೆಸಲು ಪ್ರಾರಂಭಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಹಾರಾಷ್ಟ್ರದಲ್ಲಿ ಹೆಚ್ಚಿದ ಆತಂಕ

ಕೆಲವು ದಿನಗಳ ಹಿಂದಷ್ಟೇ ಕಲ್ಯಾಣ್-ಡೊಂಬಿವಲಿ ಭಾಗದ ಶಿವಸೇನಾ ಕಾರ್ಪೊರೇಟರ್ ರಮೇಶ್ ಮ್ಹಾತ್ರೆ ಮತ್ತು ಬೆಂಬಲಿಗರು ಮಹಿಳಾ ವೈದ್ಯೆ ಹಾಗೂ ಆಸ್ಪತ್ರೆಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆ ಮರೆಯಾಗುವ ಮುನ್ನವೇ ಮತ್ತೊಂದು ಹಲ್ಲೆ ನಡೆದಿರುವುದು ವೈದ್ಯರ ವಲಯದಲ್ಲಿ ತೀವ್ರ ಕಳವಳ ಮೂಡಿಸಿದೆ.

ಕಠಿಣ ಕ್ರಮಕ್ಕೆ ವೈದ್ಯರ ಒತ್ತಾಯ

ನಾವು ವರ್ಷಪೂರ್ತಿ ಕಷ್ಟಪಟ್ಟು ಓದಿ ರೋಗಿಗಳ ಪ್ರಾಣ ಉಳಿಸಲು ಶ್ರಮಿಸುತ್ತೇವೆ. ಆದರೆ ನಮಗೆ ಸಿಗುತ್ತಿರುವ ಬಹುಮಾನ ಹಲ್ಲೆ ಎಂದು ಡಾ. ಜೈಸ್ವಾಲ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಬಂಧನಕ್ಕೆ ವೈದ್ಯಕೀಯ ಸಮುದಾಯ ಆಸ್ಪತ್ರೆಗಳಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಸರ್ಕಾರವನ್ನು ಆಗ್ರಹಿಸಿದೆ (ಏಜೆನ್ಸೀಸ್​).