Odisha man trapped by venomous snake 
ದೇಶ

ಪಾರ್ಶ್ವವಾಯು ವ್ಯಕ್ತಿಯ ಕೈ ಲಾಕ್​ ಮಾಡಿದ ಸರ್ಪ; ಸತತ 4 ಗಂಟೆಯ ನಂತರ ವೃದ್ಧ ಬದುಕಿದ್ದು ಹೇಗೆ ಗೊತ್ತಾ?..Odisha

ಪ್ರಮುಖ ಮುಖ್ಯಾಂಶಗಳು

  • ಪಾರ್ಶ್ವವಾಯು ವ್ಯಕ್ತಿಯ ಕೈ ಸುತ್ತಿಕೊಂಡಿದ್ದ ವಿಷಪೂರಿತ ಹಾವು
  • ಸತತ ನಾಲ್ಕು ಗಂಟೆಗಳ ಬಿಗಿ ಹಿಡಿತದ ನಂತರ ಬದುಕಿತು ಬಡ ಜೀವ
  • ಹಾವಿನ ಬಿಗಿ ಹಿಡಿತದಿಂದ 70ರ ವೃದ್ಧ ಬದುಕುಳಿದಿದ್ದು ಹೇಗೆ ಗೊತ್ತಾ?
Odisha Man Trapped by Venomous Snake:
ಹಾವು ಎಂದರೆ ಯಾರಿಗೆ ತಾನೆ ಅಂಜಿಕೆ ಇರೋದಿಲ್ಲ. ತೊಂದರೆ ಕೊಟ್ಟವರಿಗಷ್ಟೇ ಸಮಸ್ಯೆಯನ್ನುಂಟು ಮಾಡುತ್ತದೆ ಎನ್ನುವ ವಿಚಾರ ತಿಳಿದಿದ್ದರೂ ಸಹ ಭಯ ಇದ್ದೇ ಇರುತ್ತದೆ. ಹೀಗಾಗಿ, ವಿಷ ಸರ್ಪ ಕಂಡ ಕೂಡಲೇ ಹೇಗೇಗೋ ನಡೆದುಕೊಂಡು ಬಿಡುತ್ತೇವೆ. ಈ ಮಧ್ಯೆ ಹಾವು ನಮ್ಮ ಕೈಯನ್ನೇ ಸುತ್ತಿಕೊಳ್ಳುತ್ತದೆ, ನಮ್ಮ ಪಕ್ಕ ಬಂದು ಕುಳಿತುಕೊಳ್ಳುತ್ತದೆ ಎಂದರೆ ಜೀವ ಹೇಗಿರಬೇಡ.  

ಒಡಿಶಾದ ಬೌಧ್ ಜಿಲ್ಲೆಯ ಹರಭಂಗ ಬ್ಲಾಕ್‌ನ ಅದೇನಿಗಢ್ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮಂಚದ ಮೇಲೆ ಮಲಗಿದ್ದ ವೇಳೆ ಹಾವೊಂದು ಅವರ ಕೈಯನ್ನು ನಾಲ್ಕು ಗಂಟೆಗಳ ಕಾಲ ಬಿಗಿಯಾಗಿ ಹಿಡಿದಿದ್ದ ಘಟನೆಯ ವಿಡಿಯೋಗಳು ಸದ್ಯ ವೈರಲ್​ ಆಗಿದ್ದು, ಮೈಜುಮ್ಮೆನ್ನಿಸುವಂತಿದೆ.

ಕೈ ಲಾಕ್​ ಮಾಡಿದ ಹಾವು

70 ವರ್ಷದ ವೃದ್ಧ ಕೃಷ್ಣ ಚಂದ್ರ ಸಾಹು. ಇವರು ಪಾರ್ಶ್ವವಾಯು ಪೀಡಿತರು. ಇವರು ಮಂಚದ ಮೇಲೆ ಮಲಗಿದ್ದ ವೇಳೆ ಬಂದಂತಹ ವಿಚಪೂರಿತ ಹಾವೊಂದು ಬರೋಬ್ಬರಿ ನಾಲ್ಕು ಗಂಟೆಗಳ ಕಾಲ ಅವರ ಕೈಯನ್ನು ಸುತ್ತಿಕೊಂಡಿತ್ತು. ಆದರೆ ಇವರು ಅಲುಗಾಡದೆ ಕುಳಿತ ಕಾರಣ 4 ಗಂಟೆಗಳ ಯಾವುದೇ ಕಡಿತಕ್ಕೊಳಗಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಇದನ್ನು ಓದಿ: 'ಸತ್ಯ ಹೇಳುವ ಧೈರ್ಯ ನನ್ನಲಿಲ್ಲ'; ಜನನಾಯಗನ್ ಸಿನಿಮಾ ರಿಲೀಸ್​ ಬಗ್ಗೆ ಡೈರೆಕ್ಟರ್ ಹೇಳಿದ್ದು ಹೀಗೆ.. Jana Nayagan

ಸಾಹು ಬದುಕಿದ್ದೇ ಪವಾಡ

ಶನಿವಾರ ರಾತ್ರಿ  ಕೃಷ್ಣ ಚಂದ್ರ ಸಾಹು ಕೋಣೆಯಲ್ಲಿ ಮಲಗಿದ್ದರು. ಬೇಸಿಗೆಯಾದ ಕಾರಣ ಕಿಟಕಿಗಳು ತೆರೆದೆ ಇತ್ತು. ಅದೇ ಕಿಟಕಿಯಿಂದ ಮಂಚದ ಮೇಲೆ ಇಳಿಯುತ್ತಿದ್ದ ಹಾವಿನ ಚಲನವಲನ ಸಾಹು ಅವರಿಗೆ ತಿಳಿದು ಬಂತು. ಪಾರ್ಶ್ವವಾಯುವಾದ ಕಾರಣ ಅಲುಗಾಡಲು ಆಗದೆ, ಯಾರ ಬಳಿಯೂ ಸಹಾಯ ಕೇಳಲು ಆಗದೆ ಮಂಚದ ಮೇಲೆ ಕುಳಿತರು. ಇದನ್ನು ಕಂಡುಕೊಂಡ ಅದು,  ನಿಧಾನವಾಗಿ ಅವರ ಕೈಯನ್ನು ಗಟ್ಟಿಯಾಗಿ ಕಟ್ಟಿ ಹಾಕಿದೆ. ಕೊಂಚ ಚಲನೆಯಾದರೂ ಹಾವು ಖಂಡಿತ ತನ್ನನ್ನು ಕಚ್ಚುತ್ತದೆ ಎನ್ನುವುದನ್ನು ಅರಿತ್ತಿದ್ದ ಅವರು, ಅಲುಗಾಡದೆ ಕುಳಿತಲ್ಲೇ ಉಸಿರು ಬಿಗಿಹಿಡಿದು ಕುಳಿತರು. 

ಕುಟುಂಬಸ್ಥರಿಂದ ಸಾಹು ಬಚಾವ್

ಮುಂಜಾನೆ ನಾಲ್ಕರ ವೇಳೆ ಸಾಹು ಅವರನ್ನು ಕಾಣಲು ಬಂದ ಕುಟುಂಬಸ್ಥರಿಗೆ ಹಾವು ಅವರನ್ನು ಬಿಗಿಯಾಗಿ ಹಿಡಿದಿರುವುದು ಕಂಡಿತು. ಸಮಸ್ಯೆಯನ್ನು ಮನಗಂಡು ಅದರ ಚಲನವಲವನ್ನು ಗಮನಿಸಿ, ಅದರ ಪರಿಸ್ಥಿತಿಯನ್ನು ಅರಿತುಕೊಂಡು ಹಾವಿನಿಂದ ಸಾಹುವಿಗೆ ಮುಕ್ತಿ ಕೊಡಿಸಿದರು.  ಸತತ ನಾಲ್ಕು ಗಂಟೆಗಳ ಕಾಲ ಸುತ್ತಿಕೊಂಡಿದ್ದರು ಸಹ ಕೃಷ್ಣ ಚಂದ್ರ ಸಾಹುಗೆ ಯಾವುದೇ ಗಾಯವಾಗಿಲ್ಲ. ಅವರು ಸುರಕ್ಷಿತವಾಗಿ ಬದುಕುಳಿದ್ದಾರೆ, (ಏಜೆನ್ಸೀಸ್).