ಸಾಂದರ್ಭಿಕ ಚಿತ್ರ 
ದೇಶ

1,300 ಜನಸಂಖ್ಯೆಯ ಗ್ರಾಮಕ್ಕೆ 27 ಸಾವಿರ ಜನನ & ಮರಣ ಪ್ರಮಾಣಪತ್ರ ನೀಡಿದ ಪಂಚಾಯತಿ; SIT ತನಿಖೆಗೆ ಅದೇಶ

ಮುಂಬೈ: ಮಹಾರಾಷ್ಟ್ರದ ಯಾವತ್ಮಲ್ ಜಿಲ್ಲೆಯ ಶೆಂಡುರ್ಸಾನಿ ಗ್ರಾಮ ಪಂಚಾಯತಿ ಆಡಳಿತ 1,300 ಜನಸಂಖ್ಯೆ ಇರುವ ಗ್ರಾಮದಲ್ಲಿ 3 ತಿಂಗಳಲ್ಲಿ 27 ಸಾವಿರ ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ನೀಡಿದ್ದು ಎಲ್ಲರನ್ನೂ ಹುಬ್ಬೇರಿಸಿದೆ. ಇದು ನಾಗರಿಕ ನೋಂದಣಿ ವ್ಯವಸ್ಥೆಯನ್ನು ದುರುಪಯೋಗ ಎನ್ನಲಾಗಿದೆ.
ಗ್ರಾಮದ ಜನಸಂಖ್ಯೆ ಮತ್ತು ನೀಡಲಾದ ಜನನ ಮತ್ತು ಮರಣ ಪ್ರಮಾಣಪತ್ರಗಳ ಸಂಖ್ಯೆಗಳ ನಡುವಿನ ಅಗಾಧ ವ್ಯತ್ಯಾಸವನ್ನು ಅಧಿಕಾರಿಗಳು ಗಮನಿಸಿದ್ದು, ವಂಚನೆ ನಡೆದಿರುವ ಸಾಧ್ಯತೆಯನ್ನು ಕಂಡು ಹಿಡಿದಿದ್ದಾರೆ. ಈ ಹಿನ್ನೆಲೆ ಆರಂಭಿಕವಾಗಿ ಯವತ್ಮಾಲ್ ಎಸ್‌ಡಿಒಪಿ ನಡೆಸಿದ್ದು, ಬಳಿಕ ಮಹಾರಾಷ್ಟ್ರ ಸರ್ಕಾರದ ಆದೇಶದ ಮೇರೆಎ ಗೃಹ ಇಲಾಖೆ ಪ್ರಕರಣವನ್ನು ಎಸ್​ಐಟಿ ತನಿಖೆಗೆ ಆದೇಶ ನೀಡಿದೆ.
ಎಸ್​ಐಟಿ ತನಿಖೆಯ ನೇತೃತ್ವವನ್ನು ಮಹಾರಾಷ್ಟ್ರ ಸೈಬರ್ ಎಡಿಜಿ ವಹಿಸಿದ್ದು, ಆರೋಗ್ಯ ಸೇವೆಗಳ ಉಪ ನಿರ್ದೇಶಕರು, ಜಿಲ್ಲಾ ಆರೋಗ್ಯ ಅಧಿಕಾರಿಗಳು ತನಿಖೆಯ ಭಾಗವಾಗಿದ್ದಾರೆ. ಪೊಲೀಸರು ಬಿಎನ್​ಎಸ್ ಮತ್ತು ಐಟಿ ಕಾಯ್ದೆಯ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಎಫ್​ಐಆರ್ ದಾಖಲಿಸಿದ್ದಾರೆ.

ನಾಗರಿಕ ನೋಂದಣಿ ವ್ಯವಸ್ಥೆ(ಸಿಆರ್​ಎಸ್) ಎಂದರೇನು? 

ನಾಗರಿಕ ನೋಂದಣಿ ವ್ಯವಸ್ಥೆಯೂ ಭಾರತದಲ್ಲಿ ಜನನ ಮತ್ತು ಮರಣಗಳ ಸಂಖ್ಯೆಗಳನ್ನು ದಾಖಲಿಸುವ ಮತ್ತು ನಿರ್ವಹಿಸುವ ಸರ್ಕಾರದ ಆನ್​ಲೈನ್ ವ್ಯವಸ್ಥೆಯಾಗಿದೆ. ಇದರ ಮೂಲಕ  ಶಾಲಾ ಪ್ರವೇಶ, ಪಾಸ್‌ಪೋರ್ಟ್‌ಗಳು, ಪಿಂಚಣಿಗಳು, ವಿಮೆ ಹಾಗೂ ಸರ್ಕಾರಿ ಯೋಜನೆಗಳಿಗಾಗಿ ಪ್ರಮಾಣಪತ್ರಗಳನ್ನು ಪಡೆಯಬಹುದಾಗಿದೆ. 
ಈ ವ್ಯವಸ್ಥೆಯನ್ನು ರಾಜ್ಯ ಸರ್ಕಾರಗಳು, ಜಿಲ್ಲಾಡಳಿತಗಳು ಮತ್ತು ಸ್ಥಳೀಯ ಸಂಸ್ಥೆಗಳು ನಿರ್ವಹಿಸುತ್ತವೆ. ಆಸ್ಪತ್ರೆಗಳು, ಪಂಚಾಯತ್‌ಗಳು ಹಾಗೂ ಪುರಸಭೆಯ ನಿಗಮಗಳಿಂದ ಮಾಹಿತಿಯನ್ನು ದಾಖಲಿಸಲಾಗುತ್ತದೆ (ಏಜೆನ್ಸೀಸ್).