Shahid Afridi | ಪಾಕಿಸ್ತಾನದ ಮಾಜಿ ನಾಯಕ ಶಾಹಿದ್  
ದೇಶ

ಮೊಹಾಲಿಯಲ್ಲಿ ಪತರುಗುಟ್ಟಿದ್ದರಂತೆ ಪಾಕ್ ಆಟಗಾರರು..15 ವರ್ಷಗಳ ಬಳಿಕ ಅಫ್ರಿದಿ ಬಿಚ್ಚಿಟ್ರು ಆ ಭಯಾನಕ ಸತ್ಯ! | Shahid Afridi

Shahid Afridi: 2026ರ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಬಗ್ಗು ಬಡಿದ ಟೀಮ್​​ ಇಂಡಿಯಾ ವಿಶ್ವಚಾಂಪಿಯನ್ ಪಟ್ಟ ಅಲಂಕರಿಸುತ್ತಿದ್ದಂತೆ, ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಹಳೇ ನೆನಪುಗಳನ್ನು ಮೆಲುಕು ಹಾಕಿದ್ದು, 2011ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಅನುಭವಿಸಿದ ಸೋಲಿಗೆ ಅಸಲಿ ಕಾರಣವೇನು ಎಂಬುದನ್ನು ಅಫ್ರಿದಿ ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ.

ಪಾಕ್​ ಆಟಗಾರರು ನಡುಗಲು ಇದೇ ನೈಜ ಕಾರಣವಂತೆ!

ಪಾಕಿಸ್ತಾನಿ ವಾಹಿನಿಯೊಂದರಲ್ಲಿ ಮಾತನಾಡಿದ ಅಫ್ರಿದಿ, 2011ರ ಮೊಹಾಲಿಯಲ್ಲಿ ನಡೆದ ಆ ಸೆಮಿಫೈನಲ್ ನಮಗೆ ಎಂದಿಗೂ ಮರೆಯಲಾಗದ ಪಾಠ. ಮೊಹಮ್ಮದ್ ಹಫೀಜ್ ಮತ್ತು ಕಮ್ರಾನ್ ಅಕ್ಮಲ್ ವಿಕೆಟ್ ನಷ್ಟವಿಲ್ಲದೆ 90 ರನ್ ಗಳಿಸಿದಾಗ ನಾವು ಆರಾಮವಾಗಿ ಗೆಲ್ಲುತ್ತೇವೆ ಎಂದುಕೊಂಡಿದ್ದೆವು. ಆದರೆ ಮೊದಲ ವಿಕೆಟ್ ಪತನವಾಗುತ್ತಿದ್ದಂತೆ ಇಡೀ ಕ್ರೀಡಾಂಗಣದ ವಾತಾವರಣ ಬದಲಾಯಿತು ಎಂದರು.
ಭಾರತೀಯ ಅಭಿಮಾನಿಗಳ ಕಿಕ್ಕಿರಿದ ಗದ್ದಲ ಮತ್ತು ತಂಡವನ್ನು ಬೆಂಬಲಿಸಿದ ರೀತಿ ಪಾಕಿಸ್ತಾನಿ ಆಟಗಾರರ ಮೇಲೆ ಎಷ್ಟರಮಟ್ಟಿಗೆ ಒತ್ತಡ ಹೇರಿತ್ತೆಂದರೆ, ನನ್ನ ತಂಡದ ಕೆಲವು ಬ್ಯಾಟರ್‌ಗಳು ಕ್ರೀಸ್‌ಗೆ ಹೋದಾಗ ಭಯದಿಂದ ನಡುಗುತ್ತಿದ್ದರು. ಪ್ರತಿಯೊಂದು ಎಸೆತವನ್ನೂ ಎದುರಿಸಲು ಅವರು ಹೆಣಗಾಡುತ್ತಿದ್ದರು ಎಂದು ಅಫ್ರಿದಿ ಸೋಲಿನ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

ಭಾರತದ ಯಶಸ್ಸಿಗೆ ಮಿಯಾಂದಾದ್ ಶ್ಲಾಘನೆ

ಭಾರತ ತಂಡದ ಇತ್ತೀಚಿನ ಸತತ ಯಶಸ್ಸಿಗೆ ಪಾಕ್​ನ ಬ್ಯಾಟಿಂಗ್ ದಿಗ್ಗಜ ಜಾವೇದ್ ಮಿಯಾಂದಾದ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಟೀಮ್​ ಇಂಡಿಯಾ ಇಂದು ಚಾಂಪಿಯನ್ ಆಗಲು ಅರ್ಹವಾಗಿದೆ. ಅವರ ಬಲಿಷ್ಠ ಕ್ರಿಕೆಟ್ ಸಂರಚನೆಯೇ ಇದಕ್ಕೆ ಕಾರಣ. ಯುವ ಆಟಗಾರರಿಗೆ ಆಟದ ಅರಿವು ಅದ್ಭುತವಾಗಿದೆ. ಅವರಿಗೆ ಸ್ಪಿನ್ನರ್ ಆಗಲಿ ಅಥವಾ ವೇಗದ ಬೌಲರ್ ಆಗಲಿ, ಪ್ರತಿಭೆಗೆ ಬರಗಾಲವಿಲ್ಲ ಎಂದು ಮಿಯಾಂದಾದ್ ಮುಕ್ತಕಂಠದಿಂದ ಶ್ಲಾಘಿಸಿದ್ದದಾರೆ.
ಕಳೆದ ವರ್ಷದ ಚಾಂಪಿಯನ್ಸ್ ಟ್ರೋಫಿ ಮತ್ತು ಈಗಿನ ಟಿ20 ವಿಶ್ವಕಪ್ ಗೆಲುವು ಭಾರತದ ಡ್ರೆಸ್ಸಿಂಗ್ ರೂಮ್​ ಸಂಸ್ಕೃತಿಗೆ ಹಿಡಿದ ಕನ್ನಡಿ ಎಂದು ಅವರು ಬಣ್ಣಿಸಿದ್ದಾರೆ(ಏಜೆನ್ಸೀಸ್​).