ಪಾಕಿ ಪ್ರಧಾನಿ ಕಟ್ಟುಕಥೆಗೆ ಭಾರತೀಯ ರಾಯಭಾರಿ ಶ್ರೀನಿವಾಸ್ ರಿಯಾಕ್ಷನ್​ ಹೇಗಿತ್ತು ನೋಡಿ! 
ದೇಶ

ನಗುವುದೋ ಅಳುವುದೋ ನೀವೇ ಹೇಳಿ!...ಪಾಕಿ ಪ್ರಧಾನಿ ಕಟ್ಟುಕಥೆಗೆ ಭಾರತೀಯ ರಾಯಭಾರಿ ಶ್ರೀನಿವಾಸ್ ರಿಯಾಕ್ಷನ್​ ಹೇಗಿತ್ತು ನೋಡಿ! | R Srinivas Reaction

R Srinivas Reaction: ಸಂಯುಕ್ತ ರಾಷ್ಟ್ರ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್ ಅವರು ಕಳೆದ ವರ್ಷ ಭಾರತ-ಪಾಕಿಸ್ತಾನ ಸಂಘರ್ಷದ ಕುರಿತು ತಮ್ಮ ದೇಶದ ಸುಳ್ಳು ಕಥೆಯನ್ನು ಮತ್ತೆ ಹೇಳಲು ಯತ್ನಿಸಿದರು.

R Srinivas Reaction: ಸಂಯುಕ್ತ ರಾಷ್ಟ್ರ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್ ಅವರು ಕಳೆದ ವರ್ಷ ಭಾರತ-ಪಾಕಿಸ್ತಾನ ಸಂಘರ್ಷದ ಕುರಿತು ತಮ್ಮ ದೇಶದ ಸುಳ್ಳು ಕಥೆಯನ್ನು ಮತ್ತೆ ಹೇಳಲು ಯತ್ನಿಸಿದರು. ಈ ವೇಳೆ ಸಭೆಯಲ್ಲಿದ್ದ ಭಾರತೀಯ ರಾಜತಾಂತ್ರಿಕ ಅಧಿಕಾರಿಯೊಬ್ಬರ ವ್ಯಂಗ್ಯದ ನಗೆ ಮತ್ತು ತಲೆ ಅಲ್ಲಾಡಿಸಿದ ಶೈಲಿಯೇ ಸೂಕ್ತ ಪ್ರತ್ಯುತ್ತರವಾಗಿ ಪರಿಣಮಿಸಿದೆ. ಈ ವಿಡಿಯೋ ತುಣುಕು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಕಳೆದ ವರ್ಷ ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಮೇ 7 ರಂದು ಭಾರತವು ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ, ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ಅಡಗುತಾಣಗಳ ಮೇಲೆ ತೀವ್ರ ದಾಳಿ ನಡೆಸಿ ಧ್ವಂಸಗೊಳಿಸಿತ್ತು.

ಇದನ್ನೂ ಓದಿ:ಪಕ್ಷಗಳು ಬದಲಾಗುತ್ತವೆ, ಆದರೆ...: ಮತ್ತೆ ಕಾಂಗ್ರೆಸ್‌ ಕದ ತಟ್ಟಿದರಾ ಕ್ಯಾಪ್ಟನ್...? ಹಬ್ಬಿದ್ದ ವದಂತಿಗಳಿಗೆ ಕೊನೆಗೂ ಕೊಟ್ರು ಕ್ಲಾರಿಟಿ! | Captain Amarinder Singh

ಯುಎನ್ ಸಭೆಯಲ್ಲಿ ತಮ್ಮ ಸೇನೆಯನ್ನು ಹಾಡಿಹೊಗಳಿದ ಶಹಬಾಜ್ ಶರೀಫ್, ಪಾಕ್ ಸೇನೆಯು ಭಾರತದ ದಾಳಿಗೆ ಅತ್ಯಂತ ನಿಖರತೆ ಮತ್ತು ವೃತ್ತಿಪರತೆಯಿಂದ ಉತ್ತರಿಸಿದೆ. ಅವರು ಶತ್ರುವನ್ನು ಮೌನಗೊಳಿಸಿ, ದಾಳಿಯನ್ನು ಹಿಮ್ಮೆಟ್ಟಿಸಿದರು ಹಾಗೂ ಶತ್ರು ಎಂದಿಗೂ ಮರೆಯಲಾಗದ ಪಾಠವನ್ನು ಕಲಿಸಿದರು ಎಂದು ಪಾಕಿಸ್ತಾನಕ್ಕೆ ಸೇನಾ ಜಯ ಸಿಕ್ಕಿದೆ ಎಂಬಂತೆ ಬಿಂಬಿಸಲು ಯತ್ನಿಸಿದರು.

ಶರೀಫ್ ಈ ರೀತಿಯ ಕಾಲ್ಪನಿಕ ವಿಜಯದ ಮಾತುಗಳನ್ನು ಆಡುತ್ತಿದ್ದಂತೆಯೇ, ಸಭೆಯಲ್ಲಿದ್ದ ಭಾರತೀಯ ನಿಯೋಗದ ಸದಸ್ಯ ಆರ್‌. ಶ್ರೀನಿವಾಸ್ (R Srinivas) ಕಡೆಗೆ ಕ್ಯಾಮೆರಾ ತಿರುಗಿತು. ಆ ವೇಳೆ ಅವರು ಶರೀಫ್ ಅವರ ಸುಳ್ಳು ಹೇಳಿಕೆಗಳಿಗೆ ತಲೆ ಅಲ್ಲಾಡಿಸುತ್ತಾ, ಲಘು ನಗೆ ಮೂಲಕ ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದರು. ಈ ಪ್ರತಿಕ್ರಿಯೆಯು ಪಾಕಿಸ್ತಾನದ ವಿಜಯದ ವಾದವನ್ನು ಭಾರತ ಸಂಪೂರ್ಣವಾಗಿ ತಳ್ಳಿಹಾಕಿದೆ ಎಂಬುದನ್ನು ಸ್ಪಷ್ಟವಾಗಿ ಸಾರಿತು.

ಟ್ರಂಪ್​ ಮಧ್ಯಸ್ಥಿಕೆಗೆ ಧನ್ಯವಾದ ತಿಳಿಸಿದ ಶಹಬಾಜ್!

ತಮ್ಮ ಭಾಷಣದಲ್ಲಿ ಶಹಬಾಜ್ ಶರೀಫ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದೃಢ ಮತ್ತು ದೂರದೃಷ್ಟಿಯ ನಾಯಕತ್ವಕ್ಕಾಗಿ ಧನ್ಯವಾದಗಳು ಎಂದರು. ಟ್ರಂಪ್ ಸಮಯೋಚಿತ ಮಧ್ಯಸ್ಥಿಕೆಯಿಂದಾಗಿ ಭಾರತ-ಪಾಕಿಸ್ತಾನ ಯುದ್ಧಕ್ಕೆ ಕದನ ವಿರಾಮ ಸಿಕ್ಕಿತು ಮತ್ತು ದಕ್ಷಿಣ ಏಷ್ಯಾದಲ್ಲಿ ಲಕ್ಷಾಂತರ ಜನರ ಜೀವ ಉಳಿಯಿತು ಎಂದು ಅವರು ಹೇಳಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ಈ ವಾರ ನಡೆದ ಯುಎನ್ ಸಾಮಾನ್ಯ ಸಭೆಯ ತಮ್ಮ ಭಾಷಣದಲ್ಲಿ, ತಾವು ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ತಡೆದಿದ್ದಾಗಿ ಪದೇ ಪದೇ ಹೇಳಿಕೊಂಡಿದ್ದಾರೆ. ಆದರೆ, ಈ ಸಂಘರ್ಷದಲ್ಲಿ ಯಾವುದೇ ಮೂರನೇ ವ್ಯಕ್ತಿಯ ಅಥವಾ ದೇಶದ ಮಧ್ಯಸ್ಥಿಕೆಯನ್ನು ಭಾರತ ಮೊದಲಿನಿಂದಲೂ ಸಂಪೂರ್ಣವಾಗಿ ನಿರಾಕರಿಸುತ್ತಲೇ ಬಂದಿದೆ.

ದಕ್ಷಿಣ ಏಷ್ಯಾ ಮತ್ತೆ ಸಂಘರ್ಷದ ಅಂಚಿಗೆ ತಲುಪದಂತೆ ತಡೆಯಲು ಕಾಶ್ಮೀರ ಸಮಸ್ಯೆಗೆ ನ್ಯಾಯಯುತ ಪರಿಹಾರ ಅಗತ್ಯ ಎಂದು ಶರೀಫ್ ಹೇಳಿದ್ದರು. ಇದರ ಜೊತೆಗೆ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಹಾಗೂ ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಮಾತುಕತೆಗೆ ಪಾಕಿಸ್ತಾನ ನಡೆಸುತ್ತಿರುವ ಪ್ರಯತ್ನಗಳ ಕುರಿತು ಮಾತನಾಡಿದ್ದರು. ತಮ್ಮ ಭಾಷಣದಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಅವರ ನಿರಂತರ ಪ್ರಯತ್ನಗಳನ್ನು ಶ್ಲಾಘಿಸುವ ಮೂಲಕ ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಳ್ಳುವ ಹುಚ್ಚುತನವನ್ನು ಪಾಕ್​ ಪ್ರಧಾನಿ ಸಭೆಯಲ್ಲಿ ಮಾಡಿದರು(ಏಜೆನ್ಸೀಸ್​).