ಬ್ಯಾಡ್ಮಿಂಟನ್​​ ತಾರೆ P V Sindhu (ಚಿತ್ರ Instagram) 
ದೇಶ

ಅಮೆರಿಕ-ಇಸ್ರೇಲ್ ದಾಳಿಯ ಪರಿಣಾಮ: ದುಬೈನಲ್ಲಿ ಸಿಲುಕಿಕೊಂಡ ಪಿ ವಿ ಸಿಂಧು! P V Sindhu

ಪ್ರಮುಖ ಮುಖ್ಯಾಂಶಗಳು

  • ಅಮೆರಿಕ ಮತ್ತು ಇಸ್ರೇಲ್ ಇರಾನ್ ನಡುವಿನ ಯುದ್ಧ ಸನ್ನಿವೇಶದಿಂದಾಗಿ ಭಾರತದ ಬ್ಯಾಡ್ಮಿಂಟನ್​​ ತಾರೆ ಪಿವಿ ಸಿಂಧು ಲಾಕ್​!
  • ಪ್ರತಿಷ್ಠಿತ ಆಲ್​ ಇಂಗ್ಲೆಂಡ್​ ಓಪನ್​ ಚಾಂಪಿಯನ್​ಶಿಪ್​ನಲ್ಲಿ ಭಾಗವಹಿಸಲು ಸಿಂಧು ಬರ್ಮಿಂಗ್ಹ್ಯಾಮ್‌ಗೆ ಪ್ರಯಾಣಿಸುತ್ತಿದ್ದರು
  • ಯುದ್ಧದ ಉದ್ವಿಗ್ನತೆಯಿಂದಾಗಿ ವಿಮಾನಗಳ ಹಾರಾಟ ರದ್ದಾದ ಕಾರಣ, ತರಬೇತಿ ತಂಡದೊಂದಿಗೆ ಸಿಂಧು ದುಬೈನಲ್ಲಿಯೇ ಉಳಿದಿದ್ದಾರೆ.
  • ಮುಂದಿನ ಸೂಚನೆ ಬರುವವರೆಗೂ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ ಎಂಬ ಶೀರ್ಷಿಕೆಯೊಂದನ್ನು ಪೋಸ್ಟ್​ ಮಾಡಿದ್ದಾರೆ
ದುಬೈ : ಅಮೆರಿಕ ಮತ್ತು ಇಸ್ರೇಲ್ ಇರಾನ್ ನಡುವಿನ ಯುದ್ಧ ಸನ್ನಿವೇಶದಿಂದಾಗಿ ಭಾರತದ ಬ್ಯಾಡ್ಮಿಂಟನ್​​ ತಾರೆ ಪಿವಿ ಸಿಂಧು (PV Sindhu)  ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದಾರೆ.
ಮುಂದಿನ ವಾರ ಮಂಗಳವಾರ (ಮಾ.03) ರಿಂದ ಆರಂಭವಾಗಲಿರುವ ಪ್ರತಿಷ್ಠಿತ ಆಲ್​ ಇಂಗ್ಲೆಂಡ್​ ಓಪನ್​ ಚಾಂಪಿಯನ್​ಶಿಪ್​ನಲ್ಲಿ ಭಾಗವಹಿಸಲು ಸಿಂಧು ಬರ್ಮಿಂಗ್ಹ್ಯಾಮ್‌ಗೆ ಪ್ರಯಾಣಿಸುತ್ತಿದ್ದರು. ಅವರಿಗೆ ದುಬೈ ವಿಮಾನ ನಿಲ್ದಾಣವು ಸಂಪರ್ಕ ಬಿಂದು ಆಗಿತ್ತು. ಆದರೆ, ಯುದ್ಧದ ಉದ್ವಿಗ್ನತೆಯಿಂದಾಗಿ ವಿಮಾನಗಳ ಹಾರಾಟ ರದ್ದಾದ ಕಾರಣ, ಅವರು ತರಬೇತಿ ತಂಡದೊಂದಿಗೆ ಸಿಂಧು ದುಬೈನಲ್ಲಿಯೇ ಉಳಿದಿದ್ದಾರೆ.
ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ  ದೃಶ್ಯಗಳನ್ನು ಸಿಂಧು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಮುಂದಿನ ಸೂಚನೆ ಬರುವವರೆಗೂ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ ಎಂಬ ಶೀರ್ಷಿಕೆಯೊಂದನ್ನು ಪೋಸ್ಟ್​ ಮಾಡಿದ್ದಾರೆ.
ಆದಾಗ್ಯೂ, ಈ ವಿಚಾರದ ಬಗ್ಗೆ ಅಭಿಪ್ರಾಯಗಳನ್ನು ತಮ್ಮ X ಖಾತೆಯಲ್ಲಿ ಹಂಚಿಕೊಳ್ಳುವುದರ ಮೂಲಕ ಭಯಾನಕ ಪರಿಸ್ಥಿತಿಯನ್ನು ವಿವರಿಸಿದ ಅವರು, "ಈಗ ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟವಾಗಿದೆ. ತಲೆಯ ಮೇಲೆ ನಡೆಯುವ ಪ್ರತಿಬಂಧಗಳ  ಶಬ್ದವನ್ನು ಕೇಳುವುದು ಮತ್ತು ಪರಿಸ್ಥಿತಿ ಎಷ್ಟು ವೇಗವಾಗಿ ಉಲ್ಬಣಗೊಂಡಿದೆ ಎಂಬುದನ್ನು ನೋಡುವುದು ನಿಜಕ್ಕೂ ಭಯಾನಕವಾಗಿದೆ. ದುಬೈ ನಾನು ತುಂಬಾ ಪ್ರೀತಿಸುವ ನಗರ, ಯಾವಾಗಲೂ ಸುರಕ್ಷಿತ ಮತ್ತು ಜೀವನದಿಂದ ತುಂಬಿರುವ ಸ್ಥಳ. ಆದರೆ, ಇಂದಿನ ಸ್ಥಿತಿಯನ್ನು ಗ್ರಹಿಸುವುದು ಕಷ್ಟವಾಗುತ್ತದೆ ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.
ವಿಮಾನ ನಿಲ್ದಾಣ ಸ್ಥಗಿತ
ರಾಯಿಟರ್ಸ್ ವರದಿಯ ಪ್ರಕಾರ, ದುಬೈ ವಿಮಾನ ನಿಲ್ದಾಣಗಳು ಕಳೆದ ವರ್ಷ ಸುಮಾರು 100 ಮಿಲಿಯನ್ ಪ್ರಯಾಣಿಕರನ್ನು ಜಗತ್ತಿನ ಪ್ರಮುಖ ಕನೆಕ್ಟಿಂಗ್​ ಹಬ್​ ದುಬೈ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆ ಮತ್ತು ಅದರ ಪಕ್ಕದಲ್ಲಿರುವ ಸಣ್ಣ ಅಲ್ ಮಕ್ತೌಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಎಲ್ಲಾ ವಿಮಾನಗಳನ್ನು ಮುಂದಿನ ಸೂಚನೆ ಬರುವವರೆಗೂ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಬಳ್ಳಾರಿ ಮೂಲದ 50 ಜನ ಲಾಕ್​! 

ಪ್ರವಾಸಕ್ಕೆಂದು ತೆರಳಿದ್ದ ಬಳ್ಳಾರಿ ಮೂಲದ ಸುಮಾರು ಐವತ್ತು ಜನರ ತಂಡವೊಂದು ಯುದ್ಧದ ಸನ್ನಿವೇಶದಿಂದಾಗಿ ದುಬೈನಲ್ಲಿ ಸಿಲುಕಿಕೊಂಡಿದ್ದು (Ballari Tourists In Dubai), ಭಾರತಕ್ಕೆ ಮರಳಲಾಗದೆ ಸಂಕಷ್ಟದಲ್ಲಿದ್ದಾರೆ.
​​ಬಳ್ಳಾರಿಯಿಂದ ಪ್ರವಾಸಕ್ಕಾಗಿ ದುಬೈಗೆ ತೆರಳಿದ್ದ ಈ ತಂಡವು ಶನಿವಾರ ರಾತ್ರಿ ಒಂಬತ್ತು ಗಂಟೆಯ ವಿಮಾನದ ಮೂಲಕ ಭಾರತಕ್ಕೆ ಮರಳಬೇಕಿತ್ತು. ನಿಗದಿತ ಸಮಯಕ್ಕೆ ಸರಿಯಾಗಿ ಮಧ್ಯಾಹ್ನವೇ ವಿಮಾನ ನಿಲ್ದಾಣಕ್ಕೆ ತಂಡ ತಲುಪಬೇಕಿತ್ತು. ಆದರೆ, ಅಷ್ಟರಲ್ಲೇ ಯುದ್ಧದ ಘೋಷಣೆಯಾಗಿ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು.
​ಮಧ್ಯಾಹ್ನ ಮೂರು ಗಂಟೆಯೊಳಗೆ ನಿಲ್ದಾಣಕ್ಕೆ ಬಂದವರಿಗೆ ಮಾತ್ರ ಪ್ರವೇಶ ನೀಡಲಾಗಿದ್ದು, ಈ ತಂಡ ತಡವಾಗಿ ಬಂದ ಕಾರಣ ವಿಮಾನ ನಿಲ್ದಾಣದ ಸಿಬ್ಬಂದಿ ಇವರನ್ನು ಒಳಗೆ ಬಿಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ​ಸದ್ಯ ಪ್ರವಾಸಿಗರ ಬಳಿ ಇದ್ದ ಹಣವೂ ಖಾಲಿಯಾಗಿದ್ದು, ಅಲ್ಲಿನ ಹೋಟೆಲ್ ಅಥವಾ ಲಾಡ್ಜ್‌ಗಳಲ್ಲಿ ಉಳಿಯಲು ಹೋದರೆ ದಿನಕ್ಕೆ ಹದಿನೈದರಿಂದ ರಿಂದ ಇಪ್ಪತ್ತು ಸಾವಿರ ರೂ. ಬಾಡಿಗೆ ಕೇಳುತ್ತಿದ್ದಾರೆ.
ಕೈಯಲ್ಲಿ ಹಣವೂ ಇಲ್ಲದೆ, ಅತ್ತ ವಿಮಾನ ನಿಲ್ದಾಣದ ಒಳಿಗೂ ಹೋಗಲಾಗದೆ ಪ್ರವಾಸಿಗರು ಬೀದಿಯಲ್ಲಿ ಕಾಲ ಕಳೆಯುವಂತಾಗಿದೆ. ಅತಂತ್ರ ಸ್ಥಿತಿಯಲ್ಲಿರುವ ಪ್ರವಾಸಿಗರು ಶಾಸಕರಾದ ಭರತ್ ರೆಡ್ಡಿ , ಬಿ. ನಾಗೇಂದ್ರ ಅವರನ್ನು ಸಂಪರ್ಕಿಸಿ, ತಮ್ಮನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ. ಕೇಂದ್ರ ವಿದೇಶಾಂಗ ಇಲಾಖೆಯೊಂದಿಗೆ ಮಾತುಕತೆ ನಡೆಸಿ, ಸುರಕ್ಷಿತವಾಗಿ ಭಾರತಕ್ಕೆ ಮರಳಲುನ ನಮಗೆ ವ್ಯವಸ್ಥೆ ಮಾಡಬೇಕು ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ‌ (ಏಜೆನ್ಸೀಸ್​).