ಮೊಹಮ್ಮದ್ ಶಹಾಬುದ್ದೀನ್ ಮತ್ತು ಪುತ್ರ ಒಸಾಮಾ ಶಹಾಬ್ 
ದೇಶ

ಬಿಹಾರ ಚುನಾವಣೆ: ರಘುನಾಥಪುರದಿಂದ ಸಿವಾನ್​ನಲ್ಲಿ ತನ್ನದೇ ಸರ್ಕಾರ ನಡೆಸಿದ್ದ ಗ್ಯಾಂಗ್​ಸ್ಟಾರ್ ಶಹಾಬುದ್ದೀನ್ ಪುತ್ರ ಒಸಾಮಾ ಶಹಾಬ್ ಗೆಲುವು

ಪಾಟ್ನಾ: ಬಿಹಾರ ಚುನಾವಣೆಯಲ್ಲಿ ಗ್ಯಾಂಗ್ ಸ್ಟಾರ್, ಸಿವಾನ್​ ಜಿಲ್ಲೆಯಿಂದ ಹಲವು ಬಾರಿ ಸಂಸತ್ ಪ್ರವೇಶಿಸಿದ್ದ, ಜಿಲ್ಲೆಯಲ್ಲಿ ತನ್ನದೇ ದಬ್ಬಾಳಿಕೆಗೆ ಹೆಸರುವಾಸಿಯಾಗಿದ್ದ ಆರ್​ಜೆಡಿ ನಾಯಕ ಮೊಹಮ್ಮದ್ ಶಹಾಬುದ್ದೀನ್ ಪುತ್ರ, ಒಸಾಮಾ ಶಹಾಬ್ ರಘುನಾಥಪುರ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಸ್ಪರ್ಧಿಸಿ ಗೆಲುವು ಪಡೆದಿದ್ದಾರೆ.
ಆರ್​ಜೆಡಿಯ ಭದ್ರ ಕೋಟೆಯಾಗಿರುವ ಸಿವಾನ್ ಜಿಲ್ಲೆಯಲ್ಲಿ ರಘುನಾಥಪುರದಿಂದ ಜೆಡಿಯು ಅಭ್ಯರ್ಥಿ ವಿಕಾಸ್ ಕುಮಾರ್ ಸಿಂಗ್ ಅವರನ್ನು 9,248 ಮತಗಳ ಅಂತರದಿಂದ ಸೋಲಿಸಿ ಒಸಾಮಾ ಶಹಾಬ್ ವಿಧಾನಸಭೆ ಪ್ರವೇಶಿಸಿದ್ದಾರೆ. ಶಹಾಬ್ 88,278 ಮತಗಳನ್ನು ಪಡೆದರೆ, ವಿಕಾಸ್ 79,030 ಮತಗಳನ್ನು ಪಡೆದಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಒಸಾಮಾ ಶಹಾಬ್ ಅವರನ್ನು ಕಣಕ್ಕಿಳಿಸುವ ಆರ್‌ಜೆಡಿಯ ನಿಲುವನ್ನು ಈ ಕ್ರಮವೂ ಬಿಹಾರದಲ್ಲಿ ಜಂಗಲ್ ರಾಜ್ ಆಡಳಿತವನ್ನು ಮರಳಿ ತರಲು ಪ್ರಯತ್ನಿಸುತ್ತಿದೆ ಎನ್‌ಡಿಎಯ ನಾಯಕರು ಟೀಕಿಸಿದ್ದರು. ಅಮಿತ್ ಶಾ ಅವರು ಗ್ಯಾಂಗ್​ ಸ್ಟಾರ್ ಮಗನಿಗೆ ಆರ್​ಜೆಡಿ ಟಿಕೆಟ್ ನೀಡಿದೆ ಎಂದು ವಾಗ್ದಾಳಿ ನಡೆಸಿದ್ದರು (ಏಜೆನ್ಸೀಸ್).