ನಿಮ್ಮ ಕಣ್ಣಿಗೊಂದು ಸವಾಲು: ಈ ಫೋಟೋದಲ್ಲಿರುವುದು ಬೆಕ್ಕಾ ಅಥವಾ ಹಂದಿನಾ? ಜೀನಿಯಸ್​ ಮಾತ್ರ ಪತ್ತೆಹಚ್ಚಬಲ್ಲರು!  
ದೇಶ

ನಿಮ್ಮ ಕಣ್ಣಿಗೊಂದು ಸವಾಲು: ಈ ಫೋಟೋದಲ್ಲಿರುವುದು ಬೆಕ್ಕಾ ಅಥವಾ ಹಂದಿನಾ? ಜೀನಿಯಸ್​ ಮಾತ್ರ ಪತ್ತೆಹಚ್ಚಬಲ್ಲರು! Optical illusion challenge

ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

Optical illusion challenge : ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ದೃಷ್ಟಿ ಭ್ರಮೆ ಎಂದರೇನು?

ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

ಮೋಜಿನ ಮಾರ್ಗ

ಈ ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್​ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಈ ಸವಾಲುಗಳನ್ನು ಸಾಕಷ್ಟು ಜನರು ಸ್ವೀಕರಿಸಿ, ಅದರಲ್ಲಿ ತೊಡಗುತ್ತಾರೆ. ನೆಟಿಗ್ಗರು ಹೊಸ ಹೊಸ ಆಪ್ಟಿಕಲ್ ಇಲ್ಯೂಷನ್ ಸವಾಲುಗಳನ್ನು ಸ್ವೀಕರಿಸುವುದನ್ನು ಆನಂದಿಸುತ್ತಾರೆ. ತಮ್ಮನ್ನು ಮನರಂಜಿಸುವ ಮೋಜಿನ ಮಾರ್ಗವಾಗಿದೆ ಮತ್ತು ಸ್ನೇಹಿತರೊಂದಿಗೆ ತಮ್ಮ ಬುದ್ಧಿವಂತಿಕೆಯನ್ನು ಸಾಬೀತುಪಡಿಸುವ ಮಾರ್ಗವಾಗಿದೆ ಎಂದು ಭಾವಿಸುತ್ತಾರೆ. ಇದರ ಹೊರತಾಗಿ, ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸುವಲ್ಲಿ ಆಪ್ಟಿಕಲ್ ಇಲ್ಯೂಷನ್​ಗಳು ಸಹ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.

ನಿಮ್ಮ ವೀಕ್ಷಣಾ ಕೌಶಲ್ಯವನ್ನು ಹೆಚ್ಚಿಸಲು ನೀವು ಬಯಸುವಿರಾ? ಹಾಗಾದರೆ, ಈ ಸವಾಲನ್ನು ಸ್ವೀಕರಿಸಿ….

ಸದ್ಯ ವೈರಲ್​​​ ಆಗಿರುವ ಫೋಟೋದಲ್ಲಿ ಗಿಡಗಳ ನಡುವೆ ಇರುವ ಹುಲ್ಲುಗಾವಲು ಪ್ರದೇಶದಲ್ಲಿ ಒಂದು ಪ್ರಾಣಿ ತನ್ನ ತಲೆಯನ್ನು ಕೆಳಗೆ ಮಾಡಿ ಏನೋ ತಿನ್ನುತ್ತಿರುವಂತೆ ಕಾಣುತ್ತದೆ. ರೆಡ್ಡಿಟ್ ಯೂಸರ್ಸ್‌ ಒಬ್ಬರು ಈ ಫೋಟೋವನ್ನು ಪೋಸ್ಟ್​ ಮಾಡಿದ್ದು, ನಾನಿದನ್ನು ನೋಡಿ ಗೊಂದಲಕ್ಕೆ ಒಳಗಾದೆ ಎಂದು ಬರೆದುಕೊಂಡಿದ್ದಾರೆ. ಏಕೆಂದರೆ, ಇದು ಬೆಕ್ಕಾ? ಅಥವಾ ಹಂದಿನಾ? ಎಂಬುದು ಅವರ ಪ್ರಶ್ನೆಯಾಗಿದೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಈ ಫೋಟೋ ಕುರಿತು ಭಾರಿ ಚರ್ಚೆ ನಡೆಯುತ್ತಿದೆ. ಕೆಲವರು ಇದನ್ನು ವಿಭಿನ್ನ ಕೋನದಲ್ಲಿ ನೋಡಿ ವಿವಿಧ ಪ್ರಾಣಿಗಳಿಗೆ ಹೋಲಿಸುತ್ತಿದ್ದಾರೆ. ಓರ್ವ ಬಳಕೆದಾರ "ಮೊದಲ ನೋಟಕ್ಕೆ ನನ್ನ ಮೆದುಳಿಗೆ ಇದೊಂದು ಆಲ್ಬಿನೋ ಹಿಪ್ಪೋದಂತೆ ಕಾಣಿಸಿತು" ಎಂದು ಕಾಮೆಂಟ್ ಮಾಡಿದ್ದಾರೆ. ಇತರರು ಇದರಲ್ಲಿ ಗೂಬೆ, ನಾಯಿ ಹಾಗೂ "ಕ್ಯಾಟರ್‌ಪಿಗ್" (ಬೆಕ್ಕು ಮತ್ತು ಹಂದಿಯ ಮಿಶ್ರಣ) ಎಂಬ ಹೊಸ ಕಾಲ್ಪನಿಕ ಪ್ರಾಣಿಯನ್ನು ಕಂಡಿರುವುದಾಗಿ ಹೇಳಿಕೊಂಡಿದ್ದಾರೆ.

ನಿಮಗೆ ನೀಡುತ್ತಿರುವ ಸವಾಲು ಏನೆಂದರೆ, 10 ಸೆಕೆಂಡ್​ ಸಮಯದಲ್ಲಿ ನೀವು ಈ ಮೇಲಿನ ಫೋಟೋದಲ್ಲಿರುವ ಜೀವಿ ಯಾವುದೆಂದು ನಿಖರವಾಗಿ ಹೇಳಬೇಕು. ಒಂದು ವೇಳೆ ನಿಖರವಾಗಿ ಗುರುತಿಸಿದರೆ ನಿಮ್ಮ ಕಣ್ಣಿನ ಸಾಮರ್ಥ್ಯ ಮತ್ತು ಬುದ್ಧಿಮತ್ತೆಗೆ ನೀವೇ ಫುಲ್​ ಮಾರ್ಕ್ಸ್​ ಕೊಟ್ಟುಬಿಡಿ. ಒಂದು ವೇಳೆ ಯಾವ ಪ್ರಾಣಿ ಎಂದು ಗುರುತಿಸಲು ಸಾಧ್ಯವಾಗದಿದ್ದರೆ ಚಿಂತಿಸಬೇಡಿ, ಮುಂದೆ ಓದಿ.

ಹೆಚ್ಚಿನ ಪರಿಶೀಲನೆಯ ನಂತರ, ಆ ರಹಸ್ಯ ಪ್ರಾಣಿ ಮತ್ತಾವುದೂ ಅಲ್ಲ, ಅದೊಂದು ಬೆಕ್ಕು ಎಂಬುದು ತಿಳಿದುಬಂದಿದೆ. ಗಿಡಗಂಟೆಗಳ ನಡುವೆ ಇದ್ದ ಕಪ್ಪು ನೆರಳಿನ ಗುರುತುಗಳಿಂದಾಗಿ ಅದರ ಬಾಲ ಮತ್ತು ತಲೆಯ ಕೆಲವು ಭಾಗಗಳು ಮರೆಯಾಗಿದ್ದು, ಈ ಮುದ್ದಾದ ಬೆಕ್ಕಿಗೆ ಹಂದಿಯಂತಹ ನೋಟವನ್ನು ನೀಡಿದೆ. ಈ ರಹಸ್ಯ ಕೊನೆಗೂ ಬಯಲಾಗಿದ್ದು, ನೀವು ಮೊದಲ ನೋಟಕ್ಕೆ ಈ ಚಿತ್ರದಲ್ಲಿ ಯಾವ ಪ್ರಾಣಿಯನ್ನು ಕಂಡಿದ್ದೀರಿ ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ, (ಏಜೆನ್ಸೀಸ್​).