77ನೇ ಗಣರಾಜ್ಯೋತ್ಸವ ಸಂಭ್ರಮ (ಚಿತ್ರ X)
ನವದೆಹಲಿ: ಭಾರತದ 77ನೇ ಗಣರಾಜ್ಯೋತ್ಸವದ (Republic day) ಅಂಗವಾಗಿ ದೆಹಲಿಯ ಕರ್ತವ್ಯ ಪಥದಲ್ಲಿ ನಡೆದ ಸಂಭ್ರಮದ ಪರೇಡ್‌ನಲ್ಲಿ, ಭಾರತೀಯ ಸೇನೆಯು ತನ್ನ ಅಪ್ರತಿಮ ಶೌರ್ಯವನ್ನು ಪ್ರದರ್ಶಿಸಿತು. ಈ ಸಮಾರಂಭದ ರೋಚಕ ಘಟ್ಟವೆಂದರೆ, 'ಆಪರೇಷನ್ ಸಿಂಧೂರ' ಧ್ವಜವನ್ನು ಹೊತ್ತ ಸೈನ್ಯದ ಬಲಿಷ್ಠ 'ಪ್ರಹಾರ್' ರಚನೆಯನ್ನು ಪ್ರದರ್ಶಿಸಿತು.
ಇತಿಹಾಸ ಮತ್ತು ಶೌರ್ಯದ ಸಮಾಗಮ: ಆಪರೇಷನ್ ಸಿಂಧೂರ
ಆಪರೇಷನ್ ಸಿಂಧೂರ ಭಾರತೀಯ ಸಶಸ್ತ್ರ ಪಡೆಗಳ ಇತಿಹಾಸಲ್ಲಿ ಒಂದು ವಿಶಿಷ್ಟ ಮೈಲಿಗಲ್ಲು. ಇದು ಕೇವಲ ಒಂದು ಮಿಲಿಟರಿ ಕಾರ್ಯಾಚರಣೆಯಾಗಿರಲಿಲ್ಲ. ಬದಲಾಗಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಾರತೀಯ ನಾಗರಿಕರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ನಡೆಸಿದ ಭೀಕರ ದಾಳಿ ಮತ್ತು ನಾಗರಿಕರ ಸಾವಿಗೆ ಪ್ರತಿಕಾರವಾಗಿ ಈ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಆಪರೇಷನ್ ಸಿಂಧೂರ ಧ್ವಜವನ್ನು ಭಾರತೀಯ ಸಶಸ್ತ್ರ ಪಡೆಗಳು ಎದುರಿಸಿದ ಕಠಿಣ ಸವಾಲುಗಳು ಮತ್ತು ಅವುಗಳ ವಿರುದ್ಧ ಜಯಸಾಧಿಸಿದ ವಿಜಯದ ಸ್ಮರಣಿಕೆಯನ್ನು ನೆನಪಿಸಿತು. ಆದಾಗ್ಯೂ, ಸೈನಿಕರ ಬಲಿದಾನ ಮತ್ತು ತ್ಯಾಗದ ನೆನಪಿಗಾಗಿ ಈ ಧ್ವಜವನ್ನು ಪರೇಡ್‌ನ ಕೇಂದ್ರ ಬಿಂದುವನ್ನಾಗಿ ಮಾಡಲಾಗಿತ್ತು.
ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸಿದ 'ಪ್ರಹಾರ್' ರಚನೆ
ಈ ಬಾರಿಯ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾರತೀಯ ಸೇನೆಯು ತನ್ನ ಆಕ್ರಮಣಕಾರಿ ಶಕ್ತಿಯನ್ನು ಜಗತ್ತಿಗೆ ತೋರಿಸಲು ಪ್ರಹಾರ್ ಅನ್ನು ಆಯ್ಕೆ ಮಾಡಿಕೊಂಡಿತ್ತು. ಸಂಸ್ಕೃತದಲ್ಲಿ 'ಪ್ರಹಾರ್' ಎಂದರೆ ಶತ್ರುವಿನ ಮೇಲೆ ಮಾಡುವ ನಿರ್ಣಾಯಕ ದಾಳಿ ಎಂದರ್ಥ. ಈ ರಚನೆಯು ಭಾರತೀಯ ಸೇನೆಯ ಕ್ಷಿಪಣಿ ವೇಗ ಮತ್ತು ನಿಖರತೆಯನ್ನು ಪ್ರತಿಬಿಂಬಿಸಿತು.
ಪ್ರಹಾರ್ ರಚನೆಯ ಪ್ರಮುಖ ಲಕ್ಷಣಗಳು
ಯಾಂತ್ರೀಕೃತ ಪಡೆಗಳ ಮೆರುಗು: ಜಗತ್ತಿನ ಅತ್ಯಂತ ಶಕ್ತಿಶಾಲಿ ಯುದ್ಧ ಟ್ಯಾಂಕ್‌ಗಳಲ್ಲಿ ಒಂದಾದ 'ಟಿ-90 ಭೀಷ್ಮ' ಟ್ಯಾಂಕ್‌ಗಳು ಕರ್ತವ್ಯ ಪಥದಲ್ಲಿ ಸಾಲಾಗಿ ಸಾಗಿದವು. ಇವುಗಳ ಘರ್ಜನೆಯು ಕರ್ತವ್ಯ ಪಥವನ್ನು ಸೈನ್ಯದ ಕಠಿಣತೆಯನ್ನು ತೋರಿಸಿತು.
ತಾಂತ್ರಿಕ ಸಂಯೋಜನೆ: ಕೇವಲ ಭೂಪಡೆಗಳಲ್ಲದೆ, ಆಧುನಿಕ ಡ್ರೋನ್ ವಿಧ್ವಂಸಕ ವ್ಯವಸ್ಥೆಗಳು ಮತ್ತು ಸಂವಹನ ತಂತ್ರಜ್ಞಾನದ ವಾಹನಗಳು ಈ ರಚನೆಯ ಭಾಗವಾಗಿದ್ದವು. ಇದು ಆಧುನಿಕ ಯುದ್ಧಭೂಮಿಯಲ್ಲಿ ಭಾರತವು ಹೊಂದಿರುವ ತಾಂತ್ರಿಕ ಶ್ರೇಷ್ಠತೆಯನ್ನು ಸಾರಿತು.
ಸಮನ್ವಯತೆ: ಈ ಫಾರ್ಮೇಶನ್‌ನಲ್ಲಿ ಸೈನಿಕರ ನಡಿಗೆ ಮತ್ತು ವಾಹನಗಳ ಚಲನೆಯ ನಡುವಿನ ನಿಖರವಾದ ಸಮನ್ವಯವು ವೀಕ್ಷಕರಲ್ಲಿ ರೋಮಾಂಚನ ಉಂಟುಮಾಡಿತು.
ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಯವರ ಗೌರವ
ಭಾರತದ ಸಂವಿಧಾನದ ಪ್ರಕಾರ, ಪರಮೋಚ್ಚ ಕಮಾಂಡರ್ ಆಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಶಕ್ತಿ ಪ್ರದರ್ಶನಕ್ಕೆ ಸಲಾಂ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಆಪರೇಷನ್ ಸಿಂಧೂರ್ ಧ್ವಜವನ್ನು ಕಂಡಾಗ ಎದ್ದು ನಿಂತು ಗೌರವ ಸಲ್ಲಿಸಿದರು. ಈ ದೃಶ್ಯವು ಭಾರತವು ರಕ್ಷಣಾ ಕ್ಷೇತ್ರದಲ್ಲಿ 'ಆತ್ಮನಿರ್ಭರ' ಆಗುತ್ತಿರುವುದನ್ನು ಮತ್ತು ತನ್ನ ಇತಿಹಾಸವನ್ನು ಮರೆಯದೆ ಭವಿಷ್ಯದ ಸವಾಲುಗಳಿಗೆ ಸಿದ್ಧವಾಗಿದೆ ಎಂಬುದನ್ನು ಜಗತ್ತಿಗೆ ಸಾರುತ್ತಿದೆ (ಏಜೆನ್ಸೀಸ್).