ಸನಾತನಿಗಳು ಮಾತ್ರ ದುರ್ಗಾ ಮಾತೆಯ ಮೂರ್ತಿ ಮುಟ್ಟಿ!..ಸಿಎಂ ಸುವೇಂದು ಮಹತ್ವದ ಆದೇಶ 
ದೇಶ

ಸನಾತನಿಗಳು ಮಾತ್ರ ದುರ್ಗಾ ಮಾತೆಯ ಮೂರ್ತಿ ಮುಟ್ಟಿ!..ಸಿಎಂ ಸುವೇಂದು ಮಹತ್ವದ ಆದೇಶ; ನೀಡಿದ ಕಾರಣ ತುಂಬಾ ಚೆನ್ನಾಗಿದೆ! | Suvendu Adhikari

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ದುರ್ಗಾ ವಿಸರ್ಜನೆಯ ಸಂದರ್ಭದಲ್ಲಿ ಕೇವಲ ಸನಾತನ ಧರ್ಮದ ಅನುಯಾಯಿಗಳು ಮಾತ್ರ ದೇವಿಯ ಪ್ರತಿಮೆಗಳನ್ನು ಮುಟ್ಟಲು ಮತ್ತು ವಿಸರ್ಜನೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಬುಧವಾರ ತಿಳಿಸಿದ್ದಾರೆ.

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ದುರ್ಗಾ ವಿಸರ್ಜನೆಯ ಸಂದರ್ಭದಲ್ಲಿ ಕೇವಲ ಸನಾತನ ಧರ್ಮದ ಅನುಯಾಯಿಗಳು ಮಾತ್ರ ದೇವಿಯ ಪ್ರತಿಮೆಗಳನ್ನು ಮುಟ್ಟಲು ಮತ್ತು ವಿಸರ್ಜನೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಬುಧವಾರ ತಿಳಿಸಿದ್ದಾರೆ.

ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಿಎಂ ಸುವೇಂದು, ಧರ್ಮದ ಸಂಪ್ರದಾಯಗಳು ಮತ್ತು ಧರ್ಮಗ್ರಂಥಗಳ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ಈ ವರ್ಷದ ವಿಸರ್ಜನಾ ಮಹೋತ್ಸವದ ಧರ್ಮದ ಮಹತ್ವ ಹಾಗೂ ಸುರಕ್ಷತಾ ದೃಷ್ಟಿಯಿಂದ ಭದ್ರತಾ ವ್ಯವಸ್ಥೆಗಳನ್ನು ತೀವ್ರಗೊಳಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸೇರಿದಂತೆ ವಿವಿಧ ಭದ್ರತಾ ಏಜೆನ್ಸಿಗಳನ್ನು ನಿಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಕೋಲ್ಕತ್ತಾದ ಬಾಬುಘಾಟ್‌ನಲ್ಲಿ ಕೋಲ್ಕತ್ತಾ ಪೊಲೀಸ್ ಆಯುಕ್ತ ಅಜಯ್ ಕುಮಾರ್ ನಂದ್ ಹಾಗೂ ಕೋಲ್ಕತ್ತಾ ಮಹಾನಗರ ಪಾಲಿಕೆ ಆಯುಕ್ತ ಸ್ಮಿತಾ ಪಾಂಡೆ ಅವರೊಂದಿಗೆ ವಿಸರ್ಜನಾ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಅವರು ಈ ಮಹತ್ವದ ಹೇಳಿಕೆ ನೀಡಿದರು.

ಧಾರ್ಮಿಕ ಸಂಪ್ರದಾಯಗಳ ರಕ್ಷಣೆ

ಹೂಗ್ಲಿ ನದಿಯಲ್ಲಿ ಪ್ರತಿಮೆಗಳನ್ನು ವಿಸರ್ಜಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸುವವರ ಗುರುತನ್ನು ಕಾಯ್ದುಕೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದು, ಸನಾತನ ಧರ್ಮವನ್ನು ಅನುಸರಿಸುವವರು ಮಾತ್ರ ಪ್ರತಿಮೆಗಳನ್ನು ಸ್ಪರ್ಶಿಸುತ್ತಾರೆ. ಇದರಲ್ಲಿ ಯಾವುದೇ ಕೋಮುವಾದದ ವಿಷಯವಿಲ್ಲ ಎಂದು ಸುವೇಂದು ಅಧಿಕಾರಿ ಸ್ಪಷ್ಟಪಡಿಸಿದರು.

ವಿಸರ್ಜನೆಯ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ನಾವು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯಗಳು, ಧರ್ಮಗ್ರಂಥಗಳು ಮತ್ತು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಇದು ಹಬ್ಬವಾಗಿದ್ದರೂ, ಪ್ರಾಥಮಿಕವಾಗಿ ಇದು ಒಂದು ಧರ್ಮದ ಧಾರ್ಮಿಕ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:ನೀವು ಜೆನ್-ಜೀ ಅಲ್ಲ, ನಿಮ್ಮ ಉದ್ದೇಶವೇನು..? ಹೈಕೋರ್ಟ್ ಚಾಟಿ ಬೆನ್ನಲ್ಲೇ ಅರ್ಜಿ ವಾಪಸ್ ಪಡೆದ ರಾಂಕಾ-ದಾಸ್​! | Delhi High Court

ದೂರುಗಳ ಹಿನ್ನೆಲೆಯಲ್ಲಿ ಕ್ರೇನ್‌ಗಳ ಬದಲಿಗೆ ಟ್ರಾಲಿಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದಿರುವ ಬಂಗಾಳ ಸಿಎಂ, ಅಗತ್ಯಬಿದ್ದರೆ ಪೊಲೀಸರು, ವಿಪತ್ತು ನಿರ್ವಹಣಾ ಪ್ರಾಧಿಕಾರಗಳು ಮತ್ತು ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ ಕೋಲ್ಕತ್ತಾ ಪೋರ್ಟ್ ಟ್ರಸ್ಟ್ ಸೇರಿದಂತೆ ಇತರ ಏಜೆನ್ಸಿಗಳ ನೆರವು ಪಡೆಯಬಹುದು, ಅಕ್ಟೋಬರ್ 24 ರಂದು ವಿಸರ್ಜನಾ ಪ್ರಕ್ರಿಯೆ ಮುಗಿದ ನಂತರ ನದಿಯ ನೀರನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುವುದು ಎಂದು ತಿಳಿಸಿದರು.

ಉತ್ತರ 24 ಪರಗಣ ಜಿಲ್ಲೆಯ ತಕಿಯಲ್ಲಿರುವ ಇಚ್ಛಾಮತಿ ನದಿಯಲ್ಲಿ ದೇವಿಯ ವಿಸರ್ಜನೆಯನ್ನು ವೀಕ್ಷಿಸಲು ಮರದ ದೋಣಿಗಳಲ್ಲಿ ಸಂಚರಿಸುವ ಜನರ ಸುರಕ್ಷತೆಯ ಬಗ್ಗೆಯೂ ಬೆಳಕು ಚೆಲ್ಲಿರುವ ಸಿಎಂ, ಕನಿಷ್ಠ 200 ಮರದ ದೋಣಿಗಳು ಪ್ರೇಕ್ಷಕರನ್ನು ಕರೆದೊಯ್ಯುವ ನಿರೀಕ್ಷೆಯಿದೆ. ಸರ್ಕಾರವು ಈ ಪದ್ಧತಿಯನ್ನು ತಡೆಯಲು ಪ್ರಯತ್ನಿಸಿತ್ತಾದರೂ, ಸ್ಥಳೀಯ ಜನರ ಭಾವನೆಗಳನ್ನು ಪರಿಗಣಿಸಿ ಅನುಮತಿ ನೀಡಬೇಕಾಯಿತು ಎಂದರು. ಜೀವ ರಕ್ಷಕ ಜಾಕೆಟ್‌ಗಳು ಮತ್ತು ತೂಕ ಸಮತೋಲನಗೊಳಿಸುವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದರೂ, ಅವುಗಳು ಸಣ್ಣ ದೋಣಿಗಳಾಗಿರುವುದರಿಂದ ಆತಂಕ ಮುಂದುವರಿದಿದೆ ಎಂದು ಸುವೇಂದು ಕಳವಳ ವ್ಯಕ್ತಪಡಿಸಿದರು.

ಚೋರ್‌ಬಗಾನ್ ಕರಾಳ ಘಟನೆಯಿಂದ ಪಾಠ ಕಲೀತಾ ಸರ್ಕಾರ..?

ಮಹಾಸಪ್ತಮಿಯ ಸಂಜೆ ಚೋರ್‌ಬಗಾನ್ ದುರ್ಗಾ ಪೂಜಾ ಪೆಂಡಾಲನಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 19 ಜನರು ಪ್ರಾಣ ಕಳೆದುಕೊಂಡ ಹಿನ್ನೆಲೆಯಲ್ಲಿ ಸರ್ಕಾರವು ಇಲ್ಲಿನ ಭದ್ರತೆಯನ್ನು ತೀವ್ರಗೊಳಿಸಿದೆ. ಅಕ್ಟೋಬರ್ 24 ರವರೆಗೆ ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಮೂರು ಪೊಲೀಸ್ ಕಮಿಷನರೇಟ್‌ಗಳಲ್ಲಿ ದುರ್ಗಾ ಪ್ರತಿಮೆ ವಿಸರ್ಜನೆಯನ್ನು ಮೇಲ್ವಿಚಾರಣೆ ಮಾಡಲು 18 ಐಪಿಎಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಕೋಲ್ಕತ್ತಾದಲ್ಲಿ ಗೌರವ್ ಶರ್ಮಾ, ಸೋಮಾ ದಾಸ್ ಮಿತ್ರ, ರಶೀದ್ ಮುನಿರ್ ಖಾನ್, ಆಕಾಶ್ ಮಘರಿಯಾ, ಸುರೇಶ್ ಕುಮಾರ್ ಚಾಡಿವೆ ಮತ್ತು ಧೃತಿಮಾನ್ ಸರ್ಕಾರ್ ಮುಂತಾದ ಹಿರಿಯ ಅಧಿಕಾರಿಗಳು ವಿವಿಧ ದಿನಗಳಲ್ಲಿ ವಿಸರ್ಜನಾ ಕಾರ್ಯವನ್ನು ಮೇಲ್ವಿಚಾರಣೆ ಮಾಡಲಿದ್ದಾರೆ. ಹೌರಾ, ಬರಾಕ್‌ಪುರ ಮತ್ತು ಚಂದನನಗರದಲ್ಲೂ ವಿಶೇಷ ಐಪಿಎಸ್ ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಅಕ್ಟೋಬರ್ 24 ರವರೆಗೆ ವಿಸರ್ಜನಾ ವ್ಯವಸ್ಥೆಗಳು ಜಾರಿಯಲ್ಲಿರಲಿದ್ದು, ಪೊಲೀಸ್, ವಿಪತ್ತು ನಿರ್ವಹಣಾ ತಂಡಗಳು, ನಾಗರಿಕ ಪ್ರಾಧಿಕಾರಗಳು ಮತ್ತು ಎನ್‌ಡಿಆರ್‌ಎಫ್ ಸಿಬ್ಬಂದಿ ಭದ್ರತೆ ಹಾಗೂ ಧಾರ್ಮಿಕ ಆಚರಣೆಗಳನ್ನು ಖಚಿತಪಡಿಸಿಕೊಳ್ಳಲು ಹಗಲಿರುಳು ಶ್ರಮಿಸಲಿದ್ದಾರೆ(ಏಜೆನ್ಸೀಸ್​).