Abhijeet Dipke Returns to India  
ದೇಶ

'ಭಾರತದತ್ತ ಪ್ರಯಾಣ, ನನ್ನ ಭವಿಷ್ಯವನ್ನು ಸಂವಿಧಾನದ ಕೈಗಿಡುತ್ತಿದ್ದೇನೆ': CJP Founder ಅಭಿಜಿತ್​ ದೀಪ್ಕೆ

ಪ್ರಮುಖ ಮುಖ್ಯಾಂಶಗಳು

  • ನಾಳೆ ಜಂತರ್​ ಮಂತರ್​ನಲ್ಲಿ ಧರ್ಮೇಂದ್ರ ಪ್ರಧಾನ್​ ರಾಜೀನಾಮೆಗಾಗಿ CJP ಪ್ರತಿಭಟನೆ
  • ಅಮೆರಿಕದಿಂದ ಭಾರತಕ್ಕೆ CJP Founder ಅಭಿಜಿತ್​ ದೀಪ್ಕೆ ಪ್ರಯಾಣ
  • ಪ್ರತಿಭಟನೆಯಲ್ಲಿ ಭಾಗಿಯಾಗುವಂತೆ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದ ಅಭಿಜಿತ್
ನವದೆಹಲಿ: ನೀಟ್​​​ ಪ್ರಶ್ನೆ ಪತ್ರಿಕೆ ಸೋರಿಕೆ, ಸಿಬಿಎಸ್​ಸಿ, ಜೆಇಇ ಅಡ್ವಾನ್ಸ್​​ ಸೇರಿದಂತೆ ಪರೀಕ್ಷಾ ವ್ಯವಸ್ಥೆಯಲ್ಲಿ ನಡೆದಿರುವ ಲೋಪವನ್ನು ಉಲ್ಲೇಖಿಸಿ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್​ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್​ ಜನತಾ ಪಾರ್ಟಿ(ಸಿಜೆಪಿ) (Cockroach Janta Party )ಸಂಸ್ಥಾಪಕ ಅಭಿಜಿತ್​​ ದೀಪ್ಕೆ ಅವರು ಜೂನ್.6ರಂದು ಜಂತರ್​ ಮಂತರ್​ (Jantar Mantar )ಬಳಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದಾಗಿ ಕರೆ ನೀಡಿದ್ದರು. ಆ ಸಂಬಂಧ ಇಂದು ಎಕ್ಸ್​ನಲ್ಲಿ ಮತ್ತೊಂದು ಮಾಹಿತಿ ಹಂಚಿಕೊಂಡಿದ್ದಾರೆ.

ಭಾರತಕ್ಕೆ ಹೊರಟಿದ್ದೇನೆ

ಭಾರತಕ್ಕೆ ಹೊರಟಿದ್ದೇನೆ(ಆನ್​ ಮೈ ವೇ ಟು ಇಂಡಿಯಾ). ನನ್ನ ಭವಿಷ್ಯವನ್ನು ಸಂವಿಧಾನದ ಕೈಲಿಡುತ್ತಿದ್ದೇನೆ ಎಂದು ಕಾಕ್ರೋಚ್ ಜನತಾ ಪಾರ್ಟಿ' (CJP) ಸ್ಥಾಪಕ ಅಭಿಜೀತ್ ದಿಪ್ಕೆ  ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ.
ಅಭಿಜಿತ್ ಹೇಳಿದ್ದೇನು?
ನಾನು ಭಾರತಕ್ಕೆ ವಾಪಸ್​ ಆಗುತ್ತಿದ್ದೇನೆ.  ನಾವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ  ಶಾಂತಿಯುತ ಪ್ರತಿಭಟನೆ ನಡೆಸೋಣ ಎಂದಿದ್ದರು. ಇದರ ಭಾಗವಾಗಿ ದೆಹಲಿಯಲ್ಲಿ ಭರಪೂರ ಸಿದ್ಧತಾ ಕಾರ್ಯ ಮುಂದುವರೆದಿದೆ
ಅಭಿಜಿತ್​ ದೀಪ್ಕೆ ಅವರು ನಾಳೆ ಮುಂಜಾನೆ 8ಕ್ಕೆ  ದೆಹಲಿ ತಲುಪುವ ನಿರೀಕ್ಷೆ ಇದೆ.  ಆನಂತರ  ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಸೇರಿದಂತೆ ಹಲವು ಕಾರ್ಯಕರ್ತರ ಜೊತೆಗೆ ಪೊಲೀಸರ ಅನುಮತಿ ಪಡೆದು ಶಾಂತಿಯುತ ಪ್ರತಿಭಟನೆ ನಡೆಸೋಣ. ಒಟ್ಟಾಗಿ ಹೋರಾಡಿದರೆ ಅವರು ನಮ್ಮ ಮಾತನ್ನು ಕೇಳುತ್ತಾರೆ ಎಂದು ಹೇಳಿದ್ದರು. 
ಏರ್ಪೋರ್ಟ್​​ಗೆ ಬರ್ಬೇಡಿ
ಈ ಹಿಂದೆ ಅಭಿಜಿತ್​ ದೀಪ್ಕೆ ಅವರು ತಮಗೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದಲೇ ಸಾಥ್​ ನೀಡುವಂತೆ ಮನವಿ ಮಾಡಿದ್ದರು. ಆದರೆ, ಈಗ ಯಾರೂ ನಿಲ್ದಾಣಕ್ಕೆ ಜಮಾಯಿಸಬಾರದು ಎಂದು ಅಧಿಕೃತವಾಗಿ ಮನವಿ ಮಾಡಿದ್ದಾರೆ. 
ಏರ್ಪೋರ್ಟ್​ ಬಳಿ ಎಲ್ಲರೂ ಒಟ್ಟಾಗಿ ಸೇರುವುದರಿಂದ ದೂರದ ದೇಶಗಳಿಗೆ ಪ್ರಯಾಣಿಸಲು ಬರುವ ಪ್ರಯಾಣಿಕರಿಗೆ ಸಮಸ್ಯೆಯಾಗಬಹುದು. ಭದ್ರತಾ ಲೋಪ ಉಂಟಾಗಬಹುದು. ಹೀಗಾಗಿ ಇತರ ಪ್ರಯಾಣಿಕರ ಹಿತದೃಷ್ಟಿಯಿಂದ ಯಾರು ಏರ್ಪೋರ್ಟ್​ಗೆ ಬರೋದು ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರತಿಭಟನೆಯಲ್ಲಿ ಭಾಗಿಯಾಗಲು ರಾಜಕೀಯ ಪಕ್ಷಗಳಿಗೆ ಕರೆ

ಕಳೆದ ಬುಧವಾರ ಸಂಸತ್ತಿನ ಸಮೀಪವಿರುವ ಕಾನ್‌ಸ್ಟಿಟ್ಯೂಶನ್ ಕ್ಲಬ್‌ನಲ್ಲಿ ನಡೆದ ಸಂಘಟನೆಯ ಮೊದಲ ಪತ್ರಿಕಾಗೋಷ್ಠಿಯಲ್ಲಿ ಈ ಪ್ರತಿಭಟನೆಯನ್ನು ಅಧಿಕೃತವಾಗಿ ಘೋಷಿಸಲಾಗಿತ್ತು. ಈ ವೇಳೆ ಮಾತನಾಡಿದ್ದ ಸಂಘಟನೆಯ ಮುಖ್ಯ ವಕ್ತಾರ ಸೌರವ್ ದಾಸ್, ಶನಿವಾರ ನಡೆಯಲಿರುವ ಈ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ಎಲ್ಲಾ ರಾಜಕೀಯ ಸಿದ್ಧಾಂತಗಳ ಜನರಿಗೂ ಮುಕ್ತ ಅವಕಾಶವಿದೆ. ಶಿಕ್ಷಣ ಸಚಿವರ ರಾಜೀನಾಮೆಗಾಗಿ ಸಾರ್ವಜನಿಕ ಒತ್ತಡ ತರಲು ಈ ಪ್ರತಿಭಟನೆಯನ್ನು ಆಯೋಜಿಸಲಾಗಿದೆ" ಎಂದು ಹೇಳಿದ್ದರು, (ಏಜೆನ್ಸೀಸ್).