ಐಟಂ ಹಾಡುಗಳ ಬದಲಾದ ಟ್ರೆಂಡ್ ಬಗ್ಗೆ ರುಬಿನಾ ದಿಲೈಕ್ ಮಾತು
- ಐಟಂ ಸಾಂಗ್‌ಗಳ ಬಗ್ಗೆ ನಟಿ ರುಬಿನಾ ದಿಲೈಕ್ ಗರಂ
- ಹೆಲೆನ್ ಕಾಲದ ಐಟಂ ಹಾಡುಗಳನ್ನು ನೆನದ ನಟಿ
- ಇತ್ತೀಚಿನ ವಿವಾದಿತ ಐಟಂ ಸಾಂಗ್ ಬಗ್ಗೆಯೂ ಅಸಮಾಧಾನ
Rubina Dilaik on Item Songs: ಬಾಲಿವುಡ್ ಸಿನಿಮಾಗಳಲ್ಲಿ ಐಟಂ ಸಾಂಗ್‌ಗಳ ಬಗ್ಗೆ ನಟಿ ರುಬಿನಾ ದಿಲೈಕ್ ಪ್ರಶ್ನೆ ಎತ್ತಿದ್ದಾರೆ. ಹಿಂದಿನ ಕಾಲಕ್ಕೆ ಹೋಲಿಸಿದರೆ ಈಗ ಐಟಂ ಹಾಡುಗಳ ಶೈಲಿ ಮತ್ತು ಪ್ರೆಸೆಂಟೇಷನ್ನಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಹಿನಾ ಖಾನ್, ಅಭಿನವ್ ಶುಕ್ಲಾ ಮತ್ತು ರಾಕಿ ಜೈಸ್ವಾಲ್ ಅವರೊಂದಿಗೆ ನಡೆದ ಯೂಟ್ಯೂಬ್ ಸಂಭಾಷಣೆಯಲ್ಲಿ ರುಬಿನಾ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಸಂಗೀತ, ಪಾಪ್ ಕಲ್ಚರ್ ಹಾಗೂ ಇಂದಿನ ಕಂಟೆಂಟ್ ಬಗ್ಗೆ ಚರ್ಚೆ ನಡೆಯುತ್ತಿದ್ದ ವೇಳೆ ಐಟಂ ಸಾಂಗ್‌ಗಳ ಬಗ್ಗೆಯೂ ಚರ್ಚೆ ನಡೆದಿದೆ.
ಹೆಲೆನ್ ಕಾಲದ ಐಟಂ ಹಾಡುಗಳ ನೆನಪು
ಐಟಂ ಸಾಂಗ್‌ಗಳ ಬಗ್ಗೆ ಮಾತನಾಡಿದ ರುಬಿನಾ ದಿಲೈಕ್, ಹಿರಿಯ ನಟಿ ಹಾಗೂ ಖ್ಯಾತ ಡ್ಯಾನ್ಸರ್ ಹೆಲೆನ್ ಅವರ ಕಾಲವನ್ನು ನೆನಪಿಸಿಕೊಂಡಿದ್ದಾರೆ. ಆಗಿನ ಐಟಂ ಸಾಂಗ್‌ಗಳಿಗೆ ತಮ್ಮದೇ ಆದ ಶೈಲಿ ಮತ್ತು ಗುರುತಿತ್ತು. ಆದರೆ ಈಗ ಅವುಗಳ ಪ್ರಸ್ತುತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದಿದ್ದಾರೆ. ಇತ್ತೀಚೆಗೆ ವಿವಾದದ ಬಳಿಕ ತೆಗೆದುಹಾಕಲಾದ ಐಟಂ ಸಾಂಗ್ ಬಗ್ಗೆಯೂ ರುಬಿನಾ ಪ್ರಸ್ತಾಪಿಸಿದ್ದಾರೆ.
ಐಟಂ ಸಾಂಗ್‌ನಿಂದ ರ‍್ಯಾಪ್‌ವರೆಗೆ ಚರ್ಚೆ
ಬಳಿಕ ಮಾತುಕತೆ ರ‍್ಯಾಪ್ ಹಾಡುಗಳ ಕಡೆ ತಿರುಗಿತು. ಇಂದಿನ ರ‍್ಯಾಪ್ ಸಾಂಗ್‌ಗಳಲ್ಲಿರುವ ಮೆಸೇಜ್‌ಗಳ ಬಗ್ಗೆ ಅಭಿನವ್ ಶುಕ್ಲಾ ತಮ್ಮ ಅಭಿಪ್ರಾಯ ಹೇಳಿದರು. ಅವರ ಪ್ರಕಾರ, ಕೇವಲ ಶೇ.10ರಷ್ಟು ರ‍್ಯಾಪ್ ಹಾಡುಗಳು ಮಾತ್ರ ಒಳ್ಳೆಯ ವ್ಯಕ್ತಿಯಾಗಲು ಪ್ರೇರಣೆ ಕೊಡುತ್ತವೆ. ಉಳಿದ ಹಾಡುಗಳಲ್ಲಿ ಹಿಂಸೆ, ಬೈಗುಳ, ‘ಕೂಲ್’ ಆಗಿ ಕಾಣಿಸಿಕೊಳ್ಳುವುದು ಹೆಚ್ಚಾಗಿದೆ ಅಂತ ಹೇಳಿದ್ದಾರೆ.
ಹಳೆಯ ರ‍್ಯಾಪ್‌ಗೂ ಇಂದಿನದಕ್ಕೂ ವ್ಯತ್ಯಾಸ
ರಾಕಿ ಜೈಸ್ವಾಲ್ ಅವರು ಅಮೆರಿಕದ ಹಳೆಯ ಕಾಲದ ರ‍್ಯಾಪ್ ಸಾಂಗ್‌ಗಳನ್ನು ಈಗಿನ ರ‍್ಯಾಪ್ ಜೊತೆ ಹೋಲಿಸಿದ್ದಾರೆ. ಆಗಿನ ಹಾಡುಗಳಲ್ಲಿ ಕಷ್ಟ, ಹೋರಾಟ, ಸಣ್ಣ ಊರಿನಿಂದ ಬಂದು ಬೆಳೆದ ಕಥೆಗಳೇ ಹೆಚ್ಚಾಗಿ ಇರುತ್ತಿದ್ದವು ಅಂತ ಹೇಳಿದ್ದಾರೆ.
ಒಟ್ಟಿನಲ್ಲಿ, ಐಟಂ ಸಾಂಗ್‌ಗಳ ಬಗ್ಗೆ ರುಬಿನಾ ದಿಲೈಕ್ ಮಾಡಿರುವ ಕಾಮೆಂಟ್‌ಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿವೆ.(ಏಜೆನ್ಸೀಸ್).